ನಿಮ್ಮ ಮಕ್ಕಳನ್ನು ಲೆಕ್ಕದಲ್ಲಿ ಪಕ್ಕಾ ಕ್ರಿಯೇಟಿವ್ ಮಾಡುತ್ತೆ ಶ್ರೀ ಶಾರದಾ ಟ್ರೈನಿಂಗ್ ಇನ್‌ಸ್ಟಿಟ್ಯೂಟ್: ಮೇ 11 ರಿಂದ ಶುರುವಾಗುವ ಈ ಕಾರ್ಯಾಗಾರದಲ್ಲಿ ಭಾಗವಹಿಸಿ ಗಣಿತ ಕೌಶಲ್ಯ ಪಡೀರಿ

ಉಡುಪಿ: ಮಕ್ಕಳಲ್ಲಿ ಗಣಿತದ ಮೇಲಿನ ಆಸಕ್ತಿ ಹೆಚ್ಚಿಸಿ, ಅವರಿಗೆ ಪಾಠಗಳನ್ನು ಸುಲಭವಾಗಿ ಕಲಿಸುವ ಉದ್ದೇಶದಿಂದ ಮಣಿಪಾಲದ ಶ್ರೀ ಶಾರದಾ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ವತಿಯಿಂದ ವಿಶೇಷ “ಟೇಬಲ್ಸ್ ವರ್ಕ್‌ಶಾಪ್” ನ್ನು ಮೇ 11  ರಿಂದ ಆಯೋಜಿಸಲಾಗಿದೆ.

ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ 99 ರವರೆಗಿನ ಟೇಬಲ್ಸ್ ಗಳನ್ನು ಮನರಂಜನಾತ್ಮಕವಾಗಿ ಹಾಗೂ ಸುಲಭ ವಿಧಾನಗಳ ಮೂಲಕ ಕಲಿಸಲಾಗುತ್ತದೆ. ಜೊತೆಗೆ ಪಾಠಗಳನ್ನು ಅವರಿಗೆ ಖುಷಿ ಕೊಡುವ ಚಟುವಟಿಕೆಗಳನ್ನು, ಕ್ವಿಜ್ ಹಾಗೂ ಗೇಮ್ಸ್‌ಗಳ ಮೂಲಕವೂ ಕ್ರಿಯಾಶೀಲವಾಗಿ ಹೇಳಿಕೊಡಲಾಗುತ್ತದೆ. ಒಟ್ಟಾರೆಯಾಗಿ  ಮಕ್ಕಳಲ್ಲಿ ಗಣಿತ ಕೌಶಲ್ಯವನ್ನು ವೃದ್ಧಿಸುವ ಕಾರ್ಯಕ್ರಮವನ್ನು ಶ್ರೀ ಶಾರದಾ ಟ್ರೈನಿಂಗ್ ಇನ್‌ಸ್ಟಿಟ್ಯೂಟ್  ರೂಪಿಸಿದೆ.

ಕಾರ್ಯಾಗಾರದ ಬ್ಯಾಚ್ ಮೇ 11  ರಿಂದ ಆರಂಭವಾಗಲಿದ್ದು, ಮಣಿಪಾಲದ ಡಿಸಿ ಕಚೇರಿ ಸಮೀಪದ ಕ್ರಿಸ್ಟಲ್ ಬಿಜ್‌ಹಬ್‌ನಲ್ಲಿ ನಡೆಯಲಿದೆ. ಆಸಕ್ತ ಪೋಷಕರು ತಮ್ಮ ಮಕ್ಕಳ ಹೆಸರನ್ನು ಕೂಡಲೇ ನೋಂದಾಯಿಸಿ. ಹೆಚ್ಚಿನ ಮಾಹಿತಿಗಾಗಿ 9901722527 ಸಂಖ್ಯೆಯನ್ನು ಸಂಪರ್ಕಿಸಿ.