ಐಪಿಎಲ್​ ಫೈನಲ್​ನಲ್ಲಿ ಧೋನಿಯಿಂದ ವಿಕೆಟ್​ ಕೀಪಿಂಗ್​ ಸಲಹೆ ಪಡೆದಿದ್ದೆ ಎಂದ ಶ್ರೀಕರ್​ ಭರತ್​

ಭಾರತದ ಉದಯೋನ್ಮುಖ ಕ್ರಿಕೆಟ್ ಆಟಗಾರ, ವಿಕೆಟ್​ ಕೀಪರ್​ ಶ್ರೀಕರ್​ ಭರತ್ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸಲು ಧೋನಿಯಿಂದ ಸಲಹೆ ಪಡೆದಿದ್ದೇನೆ ಎಂದಿದ್ದಾರೆ. ಐಪಿಎಲ್​ ಫೈನಲ್​ನಲ್ಲಿ ಧೋನಿ ಅವರೊಂದಿಗೆ ಮಾತನಾಡಿ ಕೀಪಿಂಗ್​ ಸಲಹೆಗಳನ್ನು ತೆಗೆದುಕೊಂಡಿದ್ದೇನೆ ಎಂದು ಭರತ್​ ಐಸಿಸಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಭಾರತದ ಮಾಜಿ ನಾಯಕ ಧೋನಿ ನಾಯಕರಾಗಿ ಎಷ್ಟು ಯಶಸ್ವಿಯೋ ಅದರ ಎರಡು ಪಟ್ಟು ವಿಕೆಟ್​ ಕೀಪಿಂಗ್​ನಲ್ಲಿ ಯಶ ಸಾಧಿಸಿದ್ದಾರೆ. ​41 ವರ್ಷದ ಮಾಹಿ ವಿಕೆಟ್​ ಹಿಂದೆ ಈಗಲೂ ಪಾದರಸದಂತೆ ಚುರುಕು. ಬ್ಯಾಟರ್​ ಒಂದು ಕ್ಷಣ ಕಾಲನ್ನು […]

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪಂದ್ಯದಲ್ಲಿ ಜೋಶ್ ಹ್ಯಾಜಲ್‌ವುಡ್ ಆಸಿಸ್​ ತಂಡದಿಂದ ಹೊರಕ್ಕೆ

ಲಂಡನ್​: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗೆ ಇನ್ನು ಮೂರು ದಿನ ಬಾಕಿ ಇದೆ. ಕಾಂಗರೂ ಪಡೆಯ ಅನುಭವಿ ಬೌಲರ್​ ಜೋಶ್ ಹ್ಯಾಜಲ್‌ವುಡ್ 7 ರಿಂದ ನಡೆಯುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಆಸಿಸ್​ ತಂಡದಲ್ಲಿ ಆಡುತ್ತಿಲ್ಲ ಅವರ ಬದಲಿ ಆಟಗಾರರನ್ನು ತಂಡ ಪ್ರಕಟಿಸಿದೆ. ಈ ನಡುವೆ ಆಸ್ಟ್ರೇಲಿಯಾ ತಂಡದಲ್ಲಿ ಒಂದು ಬದಲಾವಣೆಯನ್ನು ಮಾಡಿಕೊಳ್ಳಲಾಗಿದೆ. 15 ಜನರ ತಂಡದಲ್ಲಿದ್ದ ಅನುಭವಿ ಬೌಲರ್​ನ್ನು ಹೊರಗಿಟ್ಟು ಅವರ ಜಾಗಕ್ಕೆ ಹೊಸ ಫೇಸರ್​ನ್ನು ಆಡಿಸಲಾಗುತ್ತಿದೆ. ಗಾಯದ ಕಾರಣ ಸೀಮರ್ ಜೋಶ್ ಹ್ಯಾಜಲ್‌ವುಡ್ ಅವರನ್ನು ಕ್ರಿಕೆಟ್​ ಆಸ್ಟ್ರೇಲಿಯಾ […]

ಪಂದ್ಯಕ್ಕೂ ಮುನ್ನ ಮೌನಾಚರಣೆ : ರೈಲು ದುರಂತದಲ್ಲಿ ಮಡಿದವರಿಗೆ ಹಾಕಿ ಆಟಗಾರರಿಂದ ಕಂಬನಿ

ಲಂಡನ್: ಒಡಿಶಾದಲ್ಲಿ ನಡೆದ ಭೀಕರ ತ್ರಿವಳಿ ರೈಲು ದುರಂತಕ್ಕೆ ಹಾಕಿ ಆಟಗಾರರು ಸಂತಾಪ ಸೂಚಿಸಿದರು. ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮೌನಾಚರಣೆ ಮಾಡಿದರು. ಒಡಿಶಾದಲ್ಲಿ ತ್ರಿವಳಿ ರೈಲುಗಳ ಭೀಕರ ಡಿಕ್ಕಿ ದುರಂತದಲ್ಲಿ 288 ಜನರು ಬಲಿಯಾಗಿದ್ದು, ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಭೀಕರ ದುರಂತ: ಜೂನ್​ 2 ರಂದು (ಶುಕ್ರವಾರ) ಸಂಜೆ 7 ಗಂಟೆ ಸುಮಾರಿನಲ್ಲಿ ಒಡಿಶಾದ ಬನಹಗಾ ರೈಲು ನಿಲ್ದಾಣದ ಬಳಿ ಜವರಾಯ ಕಾದು ಕುಳಿತಿದ್ದ. ನಿಲ್ದಾಣದ ಹೊರಭಾಗದಲ್ಲಿ ಹೌರಾದಿಂದ ಚೆನ್ನೈಗೆ ಹೊರಟಿದ್ದ ಕೋರಮಂಡಲ್​ ರೈಲು ಚಲಿಸುತ್ತಿದ್ದಾಗಲೇ […]

ಉತ್ಕರ್ಷ ಪವಾರ್ ಜೊತೆ ಸಪ್ತಪದಿ ತುಳಿದ ಕ್ರಿಕೆಟರ್​ ರುತುರಾಜ್​ ಗಾಯಕ್ವಾಡ್

ನವದೆಹಲಿ: ಇಂಗ್ಲೆಂಡ್​ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ ಸೆಣಸಾಟಕ್ಕೆ ಸಜ್ಜಾಗುತ್ತಿದ್ದರೆ, ಇತ್ತ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ತಂಡದ ಸ್ಟಾರ್​ ಬ್ಯಾಟರ್​ ಆಗಿರುವ ರುತುರಾಜ್ ಗಾಯಕ್ವಾಡ್ ಅವರು ಗೆಳತಿ ಉತ್ಕರ್ಷ ಪವಾರ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಶನಿವಾರ ಕಾಲಿಟ್ಟರು. ಮದುವೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಗಾಯಕ್ವಾಡ್​, “ಕ್ರಿಕೆಟ್ ಪಿಚ್‌ನಿಂದ ವಿಶೇಷ ವೇದಿಕೆಯವರೆಗೆ ನಮ್ಮ ಪ್ರಯಾಣ ಪ್ರಾರಂಭವಾಗಿದೆ!” ಎಂದು ಒಕ್ಕಣೆ ಬರೆದುಕೊಂಡಿದ್ದಾರೆ. ಇದಕ್ಕೆ ಕ್ರಿಕೆಟಿಗರು, ಗಣ್ಯರು ಶುಭಾಶಯ ಕೋರಿದ್ದಾರೆ. ಮದುವೆ ಸಂಭ್ರಮದ ಕೆಲವು […]

Virat Kohli: ದಾಖಲೆಯ ಸೆಂಚುರಿ ಸಿಡಿಸಿದ ಕಿಂಗ್ ಕೊಹ್ಲಿ

Virat Kohli Century: ಅಲ್ಲದೆ ಐಪಿಎಲ್​ನಲ್ಲಿ ಬ್ಯಾಕ್ ಟು ಬ್ಯಾಕ್ 2 ಪಂದ್ಯಗಳಲ್ಲಿ ಶತಕ ಬಾರಿಸಿದ RCB ತಂಡದ ಮೊದಲ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನು ಕೂಡ ನಿರ್ಮಿಸಿದ್ದಾರೆ.   IPL 2023: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಶತಕದೊಂದಿಗೆ ಐಪಿಎಲ್​ ಇತಿಹಾಸದಲ್ಲೇ ಅತ್ಯಧಿಕ ಸೆಂಚುರಿ ಸಿಡಿಸಿದ ದಾಖಲೆ ವಿರಾಟ್ ಕೊಹ್ಲಿ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. […]