ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕ ಬೇಟೆ ನಿರಂತರ: ಭಾರತಕ್ಕೆ ಮೊದಲನೆ ಸ್ವರ್ಣ ಗೆದ್ದ ಮೀರಾಬಾಯಿ ಚಾನು

ಬರ್ಮಿಂಗ್ ಹ್ಯಾಮ್: ಟೋಕಿಯೋ ಒಲಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದ ಮೀರಾಬಾಯಿ ಚಾನು ಈಗ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 49 ಕಿ.ಗ್ರಾಂ ಭಾರ ವರ್ಗದಲ್ಲಿ ಒಟ್ಟು 201 ಕಿಲೋ ಭಾರ ಎತ್ತಿ ಸ್ವರ್ಣ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇದಲ್ಲದೆ, ರಾಷ್ಟೀಯ ಆಟಗಳಲ್ಲಿ ಸ್ನ್ಯಾಚ್ ರೌಂಡ್ ನಲ್ಲಿ ಅತಿ ಹೆಚ್ಚು ತೂಕ 88 ಕಿಲೋ ಮತ್ತು ಕ್ಲೀನ್ ಆಂಡ್ ಜರ್ಕ್ ನಲ್ಲಿ 113 ಕಿಲೊ ಭಾರ ಎತ್ತುವ ಮೂಲಕ ದಾಖಲೆಯನ್ನೂ ನಿರ್ಮಿಸಿದ್ದಾರೆ. ಇದು […]

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಇತಿಹಾಸ ಸೃಷ್ಟಿ: ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದ ಭಾರತದ ಸಂಕೇತ್ ಸರ್ಗರ್

ಬರ್ಮಿಂಗ್‌ಹ್ಯಾಮ್‌: ಮಹಾರಾಷ್ಟ್ರದ ಸಂಕೇತ್ ಸರ್ಗರ್ ಶನಿವಾರ, ಜುಲೈ 30 ರಂದು ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಆಗುವ ಮೂಲಕ ಇತಿಹಾಸವನ್ನು ಬರೆದಿದ್ದಾರೆ. 21 ವರ್ಷ ವಯಸ್ಸಿನ ಸಂಕೇತ್ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಪುರುಷರ 55 ಕೆಜಿ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಸಂಕೇತ್ ಸರ್ಗರ್ ಪುರುಷರ 55 ಕೆಜಿ ವಿಭಾಗದಲ್ಲಿ ಒಟ್ಟು 248 ಕೆಜಿ (ಸ್ನ್ಯಾಚ್‌ನಲ್ಲಿ 113 ಕೆಜಿ, ಕ್ಲೀನ್ ಮತ್ತು ಜರ್ಕ್‌ನಲ್ಲಿ 135) ಬೆಳ್ಳಿ ಪದಕ ಗೆದ್ದಿದ್ದಾರೆ. ಒಟ್ಟು […]

2025 ರ ಐ.ಸಿ.ಸಿ ಮಹಿಳಾ ಏಕದಿನ ಅಂತಾರಾಷ್ಟ್ರೀಯ ವಿಶ್ವಕಪ್ ಗೆ ಭಾರತದ ಆತಿಥ್ಯ

ನವದೆಹಲಿ: 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ಗೆ ಭಾರತ ಆತಿಥ್ಯ ವಹಿಸಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಖಚಿತಪಡಿಸಿದೆ. ಭಾರತ, ಬಾಂಗ್ಲಾದೇಶ, ಇಂಗ್ಲೆಂಡ್ ಮತ್ತು ಶ್ರೀಲಂಕಾವನ್ನು 2024 ರಿಂದ 2027 ವರೆಗೆ ನಡೆಯುವ ಐಸಿಸಿ ಮಹಿಳಾ ವೈಟ್-ಬಾಲ್ ಈವೆಂಟ್‌ಗಳಿಗೆ ನಾಲ್ಕು ಆತಿಥೇಯರು ಎಂದು ಹೆಸರಿಸಲಾಗಿದೆ. ಬಾಂಗ್ಲಾದೇಶವು 2024 ರ ಮಹಿಳಾ ಟಿ20 ವಿಶ್ವಕಪ್ ಅನ್ನು ಆಯೋಜಿಸಿದರೆ, 2026 ರ ಆವೃತ್ತಿಯು ಇಂಗ್ಲೆಂಡ್‌ನಲ್ಲಿ ನಡೆಯಲಿದೆ. ಒಂದು ವೇಳೆ ಈವೆಂಟ್‌ಗೆ ಅರ್ಹತೆ ಪಡೆದರೆ, 2027 ರಲ್ಲಿ ನಿಗದಿಪಡಿಸಲಾದ ಮಹಿಳಾ […]

“ಕ್ರಿಯೇಟ್ ಫಾರ್ ಇಂಡಿಯಾ” ಅಭಿಯಾನದಲ್ಲಿ ಭಾಗವಹಿಸಿ: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಟೀಮ್ ಇಂಡಿಯಾವನ್ನು ಹುರಿದುಂಬಿಸಿ

ನವದೆಹಲಿ: ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ 28 ರಂದು ಪ್ರಾರಂಭವಾಗುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 16 ವಿಭಾಗಗಳಲ್ಲಿ 215 ಸದಸ್ಯರ ಭಾರತೀಯ ಅಥ್ಲೀಟ್ ತಂಡವು ಭಾಗವಹಿಸಲು ಸಿದ್ಧವಾಗಿದೆ. “ಕ್ರಿಯೇಟ್ ಫಾರ್ ಇಂಡಿಯಾ” ಅಭಿಯಾನದೊಂದಿಗೆ ಟೀಮ್ ಇಂಡಿಯಾವನ್ನು ಹುರಿದುಂಬಿಸಲು ಭಾರತೀಯ ಕ್ರೀಡಾ ಪ್ರಾಧಿಕಾರವು ಹೊಸ ಉಪಕ್ರಮವನ್ನು ಪ್ರಾರಂಭಿಸಿದೆ. ಭಾಗವಹಿಸುವವರು #create4India ಮತ್ತು #cheer4India ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿಕೊಂಡು ತಮ್ಮ ಸೃಜನಾತ್ಮಕ ನಮೂದುಗಳನ್ನು ಕ್ರೀಡಾ ಪ್ರಾಧಿಕಾರಕ್ಕೆ ಜುಲೈ 26, 2022 ರೊಳಗೆ ಸಲ್ಲಿಸಬಹುದು.

ವೆಸ್ಟ್ ಇಂಡೀಸ್ ವರ್ಸಸ್ ಭಾರತ: ಏಕದಿನ ಪಂದ್ಯದಲ್ಲಿ ಭಾರತಕ್ಕೆ 2 ವಿಕೆಟ್‌ಗಳ ಜಯ; ಸರಣಿಯಲ್ಲಿ 2-0 ಮುನ್ನಡೆ

ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಿನ್ನೆ ರಾತ್ರಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 2 ವಿಕೆಟ್‌ಗಳಿಂದ ಸೋಲಿಸಿದ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. 312 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಭಾರತ 49.4 ಓವರ್‌ಗಳಲ್ಲಿ 8 ವಿಕೆಟ್‌ಗೆ 312 ರನ್ ಗಳಿಸಿತು. ಅಕ್ಷರ್ ಪಟೇಲ್ ಅಜೇಯ 64 ರನ್ ಮತ್ತು ಶ್ರೇಯಸ್ ಅಯ್ಯರ್ 63 ರನ್ ಗಳಿಸಿದರು. ಇದಕ್ಕೂ ಮುನ್ನ ಆತಿಥೇಯರು ಟಾಸ್ ಗೆದ್ದು ಬ್ಯಾಟಿಂಗ್ […]