ರೇಣುಕಾಸ್ವಾಮಿ ಕೊಲೆ ಕೇಸ್‌: ದರ್ಶನ್‌ ಗ್ಯಾಂಗ್‌ಗೆ ಮತ್ತಷ್ಟು ಸಂಕಷ್ಟ; ಪ್ರದೋಷ್‌ ಸಾಕ್ಷ್ಯಕ್ಕೆ ಕೋರ್ಟ್‌ ದಿನಾಂಕ ನಿಗದಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಹಾಗೂ ಇತರ ಆರೋಪಿಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪ್ರಕರಣದ 14ನೇ ಆರೋಪಿಯಾಗಿದ್ದ ಪ್ರದೋಷ್‌ ಮಾಫಿ ಸಾಕ್ಷಿ (ಅಪ್ರೂವರ್‌) ಆಗಲು ಕೋರ್ಟ್‌ ಅನುಮತಿ ನೀಡಿದ ಬೆನ್ನಲ್ಲೇ, ಇದೀಗ ಅವರ ಸಾಕ್ಷ್ಯ ದಾಖಲಿಸಲು ನ್ಯಾಯಾಲಯ ಮುಂದಾಗಿದೆ. ಪ್ರದೋಷ್‌ ಅವರನ್ನು ಸಾಕ್ಷಿಯಾಗಿ ವಿಚಾರಣೆ ನಡೆಸಲು 59ನೇ ಸಿಸಿಹೆಚ್‌ ನ್ಯಾಯಾಲಯ ವಿಟ್ನೆಸ್‌ ಸಮನ್ಸ್‌ ಜಾರಿಗೊಳಿಸಿದೆ. ಪ್ರಕರಣದ ವಿಚಾರಣೆ ವೇಳೆ ವಿಶೇಷ ಸರ್ಕಾರಿ ಅಭಿಯೋಜಕ (SPP) ಪ್ರಸನ್ನ ಕುಮಾರ್ ಅವರು ಪ್ರದೋಷ್‌ಗೆ ಸಮನ್ಸ್‌ ಜಾರಿಗೊಳಿಸುವಂತೆ ನ್ಯಾಯಾಲಯಕ್ಕೆ […]

ಸಣ್ಣ ಪುಟ್ಟ ಸಮಸ್ಯೆಗಳಿಗೂ ಮದ್ದು ತಗೊಳ್ಳುವ ಅಭ್ಯಾಸ ಇದ್ರೆ ಬಿಟ್ಟು ಬಿಡಿ: ರಾಜ್ಯದಲ್ಲೀಗ ಕಳಪೆ ಔಷಧಗಳದ್ದೇ ಸದ್ದು,98 ಕಳಪೆ ಗುಣಮಟ್ಟದ ಔಷಧ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಕಳಪೆ ಗುಣಮಟ್ಟದ ಔಷಧಗಳ ಪೂರೈಕೆ ಆತಂಕ ಮೂಡಿಸಿದ್ದು, 2021ರಿಂದ 2026ರ ಆಗಸ್ಟ್‌ವರೆಗೆ ಒಟ್ಟು 98 ಔಷಧಗಳು ನಿಗದಿತ ಗುಣಮಟ್ಟದ ಮಾನದಂಡ (NSQ) ಪರೀಕ್ಷೆಯಲ್ಲಿ ವಿಫಲವಾಗಿವೆ. ಮಾತ್ರೆ, ಸಿರಪ್, ಟಾನಿಕ್ ಸೇರಿದಂತೆ ವಿವಿಧ ಔಷಧಗಳು ಗುಣಮಟ್ಟ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿರುವುದು ಬೆಳಕಿಗೆ ಬಂದಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆಯಾದ ಕೆಲವು ಔಷಧಗಳಲ್ಲೂ ಗುಣಮಟ್ಟದ ಲೋಪ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಪೂರೈಕೆಯಲ್ಲಿ 26 ಔಷಧ ಕಂಪನಿಗಳ ಲೋಪ ದಾಖಲಾಗಿದ್ದು, ಈ ಪೈಕಿ ಕೇವಲ 6 ಕಂಪನಿಗಳ ವಿರುದ್ಧ ಮಾತ್ರ […]

ನಿಮಗೆ SIR ನೋಟಿಸ್ ಬಂದ್ರೆ ಏನು ಮಾಡಬೇಕು? ವೋಟರ್ ಲಿಸ್ಟ್ ನಿಂದ ಹೆಸರು ಕಟ್ ಆಗುತ್ತಾ? ಮತದಾರರು ತಿಳಿಯಬೇಕಾದ ಸಂಪೂರ್ಣ ಮಾಹಿತಿ!

SIR ಪ್ರಕ್ರಿಯೆಯಲ್ಲಿ ಈಗಾಗಲೇ ನೀವು ಭಾಗವಹಿಸಿರುತ್ತೀರಿ. ಆದರೆ ಕೆಲವೊಂದು ಮಹತ್ವದ ತಪ್ಪುಗಳಾದಲ್ಲಿ ನೀವು ನೀಡಿದ ದಾಖಲೆ ಸರಿಯಿಲ್ಲದಿದ್ದಲ್ಲಿ ನಿಮಗೆ ನೊಟೀಸ್ ಬರುತ್ತದೆ. ಆದರೆ ನೋಟಿಸ್ ಬಂದಿರುವುದೇ ಮತದಾರರ ಪಟ್ಟಿಯಿಂದ ಹೆಸರು ಶಾಶ್ವತವಾಗಿ ತೆಗೆದುಹಾಕಲಾಗಿದೆ ಎಂದರ್ಥವಲ್ಲ ಆ.24ರಿಂದ ಸೆ.23ರವರೆಗೆ ಹಕ್ಕು-ಆಕ್ಷೇಪಣೆಗೆ ಅವಕಾಶ SIR ಪ್ರಕ್ರಿಯೆಯಲ್ಲಿ ಕರಡು ಮತದಾರರ ಪಟ್ಟಿಯಿಂದ ಹೆಸರು ಹೊರಗುಳಿದಿರುವ ಮತದಾರರಿಗೆ ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ನೋಟಿಸ್ ನೀಡಲಾಗುತ್ತದೆ. ಈ ಅವಧಿಯಲ್ಲಿ ಮತದಾರರಿಗೆ ತಮ್ಮ ಹಕ್ಕು ಮಂಡಿಸಲು ಹಾಗೂ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. BLOಗಳು ಮನೆ […]

ರಾಜ್ಯ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ? 3ರಿಂದ 5 ಸಚಿವರಿಗೆ ಕೊಕ್ ಸಾಧ್ಯತೆ

ಬೆಂಗಳೂರು: ವಿಧಾನಮಂಡಲ ಅಧಿವೇಶನ ಮುಗಿದ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟದಲ್ಲಿ ದೊಡ್ಡ ಮಟ್ಟದ ಬದಲಾವಣೆಯ ಸುಳಿವು ದೊರೆತಿದೆ. ಕನಿಷ್ಠ ಮೂರರಿಂದ ಐದು ಸಚಿವರನ್ನು ಸಂಪುಟದಿಂದ ಕೈಬಿಟ್ಟು, ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ತೀವ್ರಗೊಂಡಿದೆ. ಹೈಕಮಾಂಡ್ ಜೊತೆ ಸಿಎಂ ಚರ್ಚೆ ಸಾಧ್ಯತೆ ಸಂಪುಟ ಪುನಾರಚನೆ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ಗಂಭೀರ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ನಾಳೆ ದೆಹಲಿಗೆ ತೆರಳಲಿರುವ ಸಿಎಂ, ಪಕ್ಷದ ವರಿಷ್ಠರನ್ನು […]

ರಾಜ್ಯದಲ್ಲಿ SIR ಪೂರ್ಣ: 1.07 ಕೋಟಿ ಮತದಾರರ ಹೆಸರು ಡಿಲೀಟ್; 43 ಲಕ್ಷ ಮಂದಿಗೆ ನೋಟಿಸ್

ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡಿದ್ದು, ಮೊದಲ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು 5,54,32,314 ಮತದಾರರು ಇದ್ದು, ಪರಿಷ್ಕರಣೆ ವೇಳೆ 1,07,96,339 ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, SIR ಪ್ರಕ್ರಿಯೆಯಲ್ಲಿ 15,17,042 ಮಂದಿ ಗೈರಾಗಿದ್ದಾರೆ. ಒಟ್ಟು 65,45,679 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದು, 16,39,864 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದರು. ಒಂದಕ್ಕಿಂತ […]