ಗ್ರಾಹಕರಿಗೆ ಕಹಿಯಾದ ಬೆಲ್ಲ,ಸಕ್ಕರೆ: ಏಕಾಏಕಿ ಬೆಲೆ ಏರಿಕೆಗೆ ಗ್ರಾಹಕರು ಕಂಗಾಲು!

ಬೆಂಗಳೂರು: ದರ ಏರಿಕೆಯ ಬಿಸಿಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಇದೀಗ ಸಕ್ಕರೆ ಮತ್ತು ಬೆಲ್ಲದ ಬೆಲೆ ಏರಿಕೆ ಮತ್ತಷ್ಟು ಹೊರೆ ತಂದಿದೆ. ಕಳೆದ ಕೆಲ ದಿನಗಳಿಂದ ಸಕ್ಕರೆ ಹಾಗೂ ಬೆಲ್ಲದ ದರದಲ್ಲಿ ಏರಿಕೆಯಾಗಿದ್ದು, ಗ್ರಾಹಕರಿಗೆ ಸಿಹಿ ಪದಾರ್ಥಗಳೂ ದುಬಾರಿಯಾಗಿವೆ. ನಾಲ್ಕು ದಿನಗಳ ಹಿಂದೆ ಕೆ.ಜಿಗೆ ₹66ರಷ್ಟಿದ್ದ ಸಕ್ಕರೆ ದರ ಇದೀಗ ₹70ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಬೆಲ್ಲದ ಬೆಲೆಯಲ್ಲೂ ಏಕಾಏಕಿ ₹12ರಷ್ಟು ಹೆಚ್ಚಳವಾಗಿದ್ದು, ನಾಲ್ಕು ದಿನಗಳ ಹಿಂದೆ ₹68 ಇದ್ದ ಕೆ.ಜಿ. ಬೆಲ್ಲದ ದರ ಇದೀಗ ₹80ಕ್ಕೆ ತಲುಪಿದೆ. […]

ಎಚ್ಚರ, ರಾಜ್ಯದಲ್ಲಿ ಜಾಸ್ತಿಯಾಗಿದೆ ಸೈಬರ್ ವಂಚನೆ ಪ್ರಕರಣ, ಸೈಬರ್ ವಂಚಕರಿಗೆ ಬೆಂಗಳೂರೇ ಟಾರ್ಗೆಟ್,7 ತಿಂಗಳಲ್ಲಿ ₹558 ಕೋಟಿ ಕಳೆದುಕೊಂಡ ಜನರು,

ಬೆಂಗಳೂರು: ಒಂದು ಸಣ್ಣ ಕ್ಲಿಕ್‌, ಅಪರಿಚಿತ ಕರೆ ಅಥವಾ ದುಪ್ಪಟ್ಟು ಲಾಭದ ಆಮಿಷ… ಇಷ್ಟೇ ಸಾಕು, ಕಷ್ಟಪಟ್ಟು ಸಂಪಾದಿಸಿದ ಹಣ ಕ್ಷಣಮಾತ್ರದಲ್ಲಿ ಬ್ಯಾಂಕ್‌ ಖಾತೆಯಿಂದ ಮಾಯವಾಗಲು. ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಸೈಬರ್‌ ವಂಚಕರ ಹಾವಳಿ ಮುಂದುವರಿದಿದ್ದು, 2026ರ ಜುಲೈ ಅಂತ್ಯದವರೆಗೆ ಕೇವಲ ಏಳು ತಿಂಗಳಲ್ಲಿ 4,712 ಸೈಬರ್‌ ವಂಚನೆ ಪ್ರಕರಣಗಳು ದಾಖಲಾಗಿವೆ. ಈ ಅವಧಿಯಲ್ಲಿ ಸಾರ್ವಜನಿಕರು ಬರೋಬ್ಬರಿ ₹558 ಕೋಟಿಗೂ ಅಧಿಕ ಹಣ ಕಳೆದುಕೊಂಡಿದ್ದಾರೆ. ಗೃಹ ಇಲಾಖೆಯ ಅಧಿಕೃತ ಅಂಕಿಅಂಶಗಳ ಪ್ರಕಾರ, ನಗರದಲ್ಲಿ ಪ್ರತಿದಿನ ಸರಾಸರಿ 22 […]

LPG Cylinder: ಮತ್ತೆ ಗೃಹ ಬಳಕೆ LPG ಸಿಲಿಂಡರ್​​ ಸಂಕಷ್ಟ, ಅರ್ಜಿ ಹಾಕಿ 6 ತಿಂಗಳಿಂದ್ರೂ ಸಿಗ್ತಿಲ್ಲ ಈ ಗ್ಯಾಸ್

ಇರಾನ್-ಅಮೆರಿಕಾ ಯುದ್ಧದ ತೀವ್ರತೆ ಕಡಿಮೆ ಆದ್ರೂ LPG ಗ್ಯಾಸ್ ಸಿಲಿಂಡರ್ ಸಂಕಷ್ಟ ಮಾತ್ರ ತಪ್ಪಿಲ್ಲ. 6 ತಿಂಗಳಿಂದ ಸರಿಯಾಗಿ ಹೊಸ ಎಲ್ಪಿಜಿ ಸಿಲಿಂಡರ್ ಸಿಗ್ತಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಉಂಟಾಗಲಿದ್ಯಾ ಕಳೆದ 6 ತಿಂಗಳಿಂದ ಹೊಸ LPG ಸಂಪರ್ಕಗಳು ಸ್ಥಗಿತಗೊಂಡಿದ್ದು, ಗ್ರಾಹಕರು ತೀವ್ರ ಪರದಾಟ ನಡೆಸಿದ್ದಾರೆ. ಹೊಸ ಸಿಲಿಂಡರ್‌ ಗೆ ಭಾರೀ ಬೇಡಿಕೆಯಿದ್ರೂ, ಕೇಂದ್ರ ಸರ್ಕಾರದಿಂದ ಇನ್ನೂ ಅನುಮೋದನೆ ದೊರೆತಿಲ್ಲ. ಮಾರ್ಚ್‌ ನಿಂದ ಹೊಸ ಎಲ್ಪಿಜಿ ಸಿಲಿಂಡರ್ ಸಂಪರ್ಕ ಸ್ಥಗಿತಗೊಂಡಿರುವ ಪ್ರಕ್ರಿಯೆ ಪುನರಾರಂಭಗೊಂಡಿಲ್ಲ ಇದ್ರಿಂದ ಹೊಸದಾಗಿ […]

ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವತಿಯನ್ನು ಭೇಟಿ ಮಾಡಲು ಹೋದವನಿಗೆ ಕಾದಿತ್ತು ಶಾಕ್! ಕಳೆದು ಕೊಂಡದ್ದು ₹3.75 ಲಕ್ಷ

ಬೆಂಗಳೂರು: ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವತಿಯನ್ನು ಭೇಟಿಯಾಗಲು ತೆರಳಿದ್ದ ಕೇರಳ ಮೂಲದ 33 ವರ್ಷದ ವ್ಯಕ್ತಿಯೊಬ್ಬರನ್ನು ಅಪಹರಿಸಿ, ಅವರ ಬ್ಯಾಂಕ್ ಖಾತೆಗಳಿಂದ ಸುಮಾರು ₹3.75 ಲಕ್ಷ ಹಣ ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೊಸೂರು ಮುಖ್ಯರಸ್ತೆಯ ಟೆರಾಕಾನ್ ಲೇಔಟ್ ನಿವಾಸಿ ಪ್ರಣವ್‌ (ಹೆಸರು ಬದಲಿಸಲಾಗಿದೆ) ಎಂಬ ಖಾಸಗಿ ಕಂಪನಿ ಉದ್ಯೋಗಿ ಘಟನೆಗೆ ಸಂಬಂಧಿಸಿದಂತೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಬ್‌ಗೆ ಕರೆಸಿ ಅಪಹರಣ ಎಲೆಕ್ಟ್ರಾನಿಕ್ಸ್ ಸಿಟಿ ನಿವಾಸಿ ಎಂದು ಪರಿಚಯಿಸಿಕೊಂಡಿದ್ದ ಪೂನಮ್‌ ಎಂಬ ಯುವತಿ ಡೇಟಿಂಗ್ […]

ಕಣ್ಣೀರಿಟ್ಟು ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ;

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದ ಮೊದಲ ರಾಜೀನಾಮೆ ಹೊರಬಿದ್ದಿದೆ. ಮಾಜಿ ಸಚಿವ ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಮರಳಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಣ್ಣೀರಿಡುತ್ತಲೇ ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದರು. ವಿಪಕ್ಷಗಳು ವಿಧಾನಸಭೆಯ ಕಲಾಪಕ್ಕೆ ಅಡ್ಡಿಪಡಿಸುತ್ತಿವೆ ಎಂದು ಆರೋಪಿಸಿದ ನಾಗೇಂದ್ರ, “ಸದನ ನಡೆಯಲು ವಿಪಕ್ಷಗಳು ಬಿಡಲಿಲ್ಲ. ಅಜೆಂಡಾ ಇಲ್ಲದೆ, ವಿಷಯವಿಲ್ಲದೆ ಹೋರಾಟ ನಡೆಸಿದರು” ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿನ ಬರ […]