ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ನಮ್ಮ ನೆಲ, ಜಲದ ಪ್ರಶ್ನೆ: ಎಸ್.ಆರ್. ಪಾಟೀಲ್

ಬೆಂಗಳೂರು: ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಹೊರರಾಜ್ಯದ ಜನರು ಬಂದು ನಮ್ಮ ಜಮೀನು ಖರೀದಿಸಲು ಅನುಕೂಲವಾಗಿದೆ. ಇದರಿಂದ ನಮ್ಮ ನೆಲ ಪರರ ಪಾಲಾಗುತ್ತದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಹೊರರಾಜ್ಯದ ಕಾಳಧನಿಕರು ನಮ್ಮ ಭೂಮಿ‌ ಖರೀದಿಸುತ್ತಾರೆ. ಅದೇ ಜಮೀನಿಗೆ ನಮ್ಮ ಜಲಾಶಯದ ನೀರು ಬಳಸುತ್ತಾರೆ. ಆದರೆ ನಮ್ಮ ರೈತರು ಮಾತ್ರ ಸಾಲದಲ್ಲಿಯೇ ಸಾಯಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭೂ ಸುಧಾರಣೆ ತಿದ್ದುಪಡಿ […]

ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ರೈತರ ಬೆನ್ನುಮೂಳೆ ಮುರಿಯಲು ಹೊರಟಿದೆ: ಸಿದ್ದರಾಮಯ್ಯ ಟೀಕೆ

ಬೆಂಗಳೂರು: ನಾಡಿನ ರೈತರು ಬರಗಾಲ, ಪ್ರವಾಹ, ಕೊರೊನಾ ಹಾವಳಿಗಳಿಂದಾಗಿ ಈಗಾಗಲೇ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಅವರ ಜೊತೆಗೆ ನಿಲ್ಲಬೇಕಿದ್ದ ಸರ್ಕಾರ ಭೂಸುಧಾರಣಾ ಕಾಯ್ದೆ, ಎ.ಪಿ.ಎಂ.ಸಿ ಕಾಯ್ದೆಗಳಿಗೆ ತಿದ್ದುಪಡಿ ತಂದು ರೈತರ ಬೆನ್ನುಮೂಳೆಯನ್ನೇ ಮುರಿಯಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಇಂದು ಬೆಂಗಳೂರಿನಲ್ಲಿ ನಡೆದ ನ್ಯಾ. ನಾಗಮೋಹನ ದಾಸ್ ಅವರ ರೈತರ ಭದ್ರತೆ ದೇಶದ ಭದ್ರತೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಂಕಿಪೊಟ್ಟಣ ತಯಾರಿಸುವವನೂ ದರ ನಿಗದಿ ಮಾಡುತ್ತಾನೆ. […]

ಡ್ರಗ್ಸ್ ದಂಧೆಯಲ್ಲಿ ರಾಜಕಾರಣಿಗಳು ಇದ್ದರೂ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಿ: ಕೃಷ್ಣಭೈರೇಗೌಡ

ಬೆಂಗಳೂರು: ಡ್ರಗ್ಸ್ ದಂಧೆ ಪ್ರಕರಣದಲ್ಲಿ ಯಾರೇ ಇದ್ದರೂ ರಕ್ಷಣೆ ಮಾಡಬಾರದು. ರಾಜಕಾರಣಿಗಳು ಅಥವಾ ಅವರ ಪುತ್ರರು ಇದ್ದರೂ ಕೂಡ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಕೃಷ್ಣಭೈರೇಗೌಡ ಆಗ್ರಹಿಸಿದ್ದಾರೆ. ಕೋಲಾರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದರು. ತನಿಖೆ, ಸಾಕ್ಷ್ಯಧಾರ ರಹಿತವಾಗಿ ಯಾರ ಮೇಲೂ ಆರೋಪ ಹೊರೆಸಬಾರದು. ಯಾವುದೇ ವ್ಯಕ್ತಿಯ ಸಾಮಾಜಿಕ ಜೀವನ ಹಾಳುಮಾಡಬಾರದು. ಊಹಾಪೋಹಾದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.

ಕ್ರಿಕೆಟಿಗರಿಗೂ ಅಂಟಿದ ಡ್ರಗ್ಸ್ ನಶೆಯ ನಂಟು: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ವಿರೇನ್ ಖನ್ನಾ

ಬೆಂಗಳೂರು: ಪಾರ್ಟಿಗಳಿಗೆ ಕೇವಲ ನಟ ನಟಿಯರು, ರಾಜಕಾರಣಿಗಳ ಪುತ್ರರು ಹಾಗೂ ಉದ್ಯಮಿಗಳು ಮಾತ್ರ ಭಾಗವಹಿಸುತ್ತಿರಲಿಲ್ಲ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟಿಗರು ಕೂಡ ಬರುತ್ತಿದ್ದರು ಎಂದು ಸಿಸಿಬಿಯ ಬಂಧನದಲ್ಲಿ ಇರುವ ಡ್ರಗ್ಸ್ ಪೆಡ್ಲರ್ ವಿರೇನ್ ಖನ್ನಾ ಇದೀಗ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ. ನಾನು ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ಕೇವಲ ನಟ ನಟಿಯರು, ಕೆಲ ರಾಜಕಾರಣಿಗಳ ಪುತ್ರರು ಹಾಗೂ ಉದ್ಯಮಿಗಳು ಮಾತ್ರ ಭಾಗವಹಿಸುತ್ತಿರಲಿಲ್ಲ. ಕ್ರಿಕೆಟಿಗರು ಹಾಗೂ ಧಾರಾವಾಹಿಗಳ ನಟ ನಟಿಯರು ಕೂಡ ಬರುತ್ತಿದ್ದರು ಎಂಬ ಮಾಹಿತಿಯನ್ನು ಸಿಸಿಬಿಗೆ ನೀಡಿದ್ದಾನೆ. ನಟಿ ಸಂಜನಾ […]

ಸೆ. 17ರಿಂದ ಸಿಎಂ ಯಡಿಯೂರಪ್ಪ ದೆಹಲಿ ಪ್ರವಾಸ: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಸಾಧ್ಯತೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸೆ. 17ರಿಂದ ಮೂರು ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಳ್ಳಲಿದ್ದು, ರಾಜ್ಯ ಸಚಿವ ಸಂಪುಟ ವಿಸ್ತರಣೆ, ಮಳೆ ಹಾನಿ, ನೆರೆ ಪರಿಹಾರದ ಬಗ್ಗೆ ಪ್ರಧಾನಿ ಜತೆಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸಿಎಂ ದೆಹಲಿ ಪ್ರವಾಸ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಸಂಪುಟ ವಿಸ್ತರಣೆ ಬಗ್ಗೆ ಬಿಜೆಪಿ ಹೈಕಮಾಂಡ್ ಜೊತೆ ಸಮಾಲೋಚನೆ ನಡೆಸಲಿದ್ದಾರೆ ಎಂದು ತಿಳಿದಿಬಂದಿದೆ. ಇದೇ ವೇಳೆ ಪ್ರಧಾನಿ ಜೊತೆಗೆ ಮಳೆ ಹಾನಿ ಹಾಗೂ ನೆರೆ […]