ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ: ಮೊದಲೇ ತೆರೆದಿದ್ದ ಮತಪೆಟ್ಟಿಗೆಯಲ್ಲಿ ಏನಿತ್ತು? ಇಲ್ಲಿದೆ ಮಾಹಿತಿ

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಇಂದು ಚಿಕ್ಕಮಗಳೂರಿನ ಐ.ಡಿ.ಎಸ್.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರಂಭವಾಗಿದ್ದು, ಮತ ಎಣಿಕೆ ಆರಂಭಕ್ಕೂ ಮುನ್ನವೇ ಮತಪೆಟ್ಟಿಗೆಯ ಸೀಲ್ ತೆರೆಯಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಕಾಂಗ್ರೆಸ್ ಶಾಸಕನ ಏಜೆಂಟ್ ಸೇರಿದಂತೆ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳ ಪ್ರತಿನಿಧಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಇದೀಗ ಚುನಾವಣಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಚುನಾವಣಾಧಿಕಾರಿಗಳು 20 ಮತಪೆಟ್ಟಿಗೆಗಳನ್ನೂ ಪರಿಶೀಲಿಸಿ, ಅಂಚೆ ಮತಗಳಿದ್ದ ಪೆಟ್ಟಿಗೆ ಸಂಪೂರ್ಣ ಸುರಕ್ಷಿತವಾಗಿದೆ. ಅಲ್ಲದೇ […]

ಇಂದು ನಿಮ್ಮ ಮೊಬೈಲ್‌ನಲ್ಲಿ ಕೇಳಿಸಲಿದೆ ಅಲರ್ಟ್ ಸೌಂಡ್, ಒಮ್ಮೆಲೇ ಶಬ್ದ ಬಂದರೆ ಗಾಬರಿಯಾಗಬೇಡಿ!

ಬೆಂಗಳೂರು: ಇಂದು (ಶನಿವಾರ) ನಿಮ್ಮ ಮೊಬೈಲ್‌ ಫೋನ್‌ನಲ್ಲಿ ಅಚಾನಕ್ ಜೋರಾಗಿ ಬೀಪ್ ಶಬ್ದ ಕೇಳಿಸಿಕೊಂಡರೂ ಅಥವಾ ತುರ್ತು ಎಚ್ಚರಿಕೆಯ ಸಂದೇಶ ಬಂದರೂ ಆತಂಕಪಡಬೇಕಿಲ್ಲ. ಕೇಂದ್ರ ಸರ್ಕಾರ ಹೊಸ ವಿಪತ್ತು ಎಚ್ಚರಿಕಾ ವ್ಯವಸ್ಥೆಯನ್ನು ಪರೀಕ್ಷಿಸುತ್ತಿರುವ ಹಿನ್ನೆಲೆಯಲ್ಲಿ ಮೊಬೈಲ್‌ಗಳಿಗೆ ವಿಶೇಷ ಅಲರ್ಟ್ ಸಂದೇಶಗಳು ರವಾನೆಯಾಗಲಿವೆ. National Disaster Management Authority (NDMA) ಮೇ 2ರಂದು ದೇಶವ್ಯಾಪಿ ಹೊಸ ತುರ್ತು ಎಚ್ಚರಿಕಾ ವ್ಯವಸ್ಥೆಯ ಪರೀಕ್ಷೆ ನಡೆಸುತ್ತಿದೆ. ಇದರ ಭಾಗವಾಗಿ ಬೆಂಗಳೂರು ಸೇರಿದಂತೆ ಹಲವು ನಗರಗಳ ನಾಗರಿಕರ ಮೊಬೈಲ್‌ಗಳಿಗೆ ಜೋರಾದ ಸೈರನ್ ಧ್ವನಿಯೊಂದಿಗೆ […]

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ,ಮೊದಲೇ ತೆರೆದಿತ್ತು ಮತಪೆಟ್ಟಿಗೆಯ ಸೀಲ್, ಗಂಭೀರ ಆರೋಪ!

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಇಂದು ಚಿಕ್ಕಮಗಳೂರಿನ ಐಡಿಎಸ್ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರಂಭವಾಗಿದೆ. ಒಟ್ಟು 1,822 ಅಂಚೆ ಮತಗಳನ್ನು ಮರು ಎಣಿಕೆಗೆ ಒಳಪಡಿಸಲಾಗುತ್ತಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಮತ ಎಣಿಕೆ ಆರಂಭಕ್ಕೂ ಒಂದು ಗಂಟೆ ಮುನ್ನವೇ ಮತಪೆಟ್ಟಿಗೆಯ ಸೀಲ್ ತೆರೆಯಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಕಾಂಗ್ರೆಸ್ ಶಾಸಕನ ಏಜೆಂಟ್ ಸೇರಿದಂತೆ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳ ಪ್ರತಿನಿಧಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂಬಂಧ […]

ಮಹಿಳೆಯರಿಗೆ ಡಬಲ್ ಧಮಾಕ! ಫ್ರೀ ಬಸ್ ಜೊತೆಗೆ ಸ್ಮಾರ್ಟ್ ಕಾರ್ಡ್ ಬೆನಿಫಿಟ್

ಬೆಂಗಳೂರು: ರಾಜ್ಯ ಸರ್ಕಾರದ ಶಕ್ತಿ ಯೋಜನೆ ಫಲಾನುಭವಿಗಳಿಗೆ ಮತ್ತೊಂದು ಸೌಲಭ್ಯ ಘೋಷಿಸಲಾಗಿದೆ. ಉಚಿತ ಬಸ್ ಪ್ರಯಾಣದ ಜೊತೆಗೆ ಇದೀಗ ಮಹಿಳೆಯರಿಗೆ ವಿಶೇಷ ಸ್ಮಾರ್ಟ್ ಕಾರ್ಡ್ ನೀಡಲು ಸರ್ಕಾರ ನಿರ್ಧರಿಸಿದೆ. ಜೂನ್ ತಿಂಗಳಿನಿಂದ ಈ ಸ್ಮಾರ್ಟ್ ಕಾರ್ಡ್ ವಿತರಣೆ ಪ್ರಾರಂಭವಾಗಲಿದ್ದು, ಮಹಿಳೆಯರಿಗೆ ಬಸ್ ಮತ್ತು ಮೆಟ್ರೋ ಪ್ರಯಾಣವನ್ನು ಇನ್ನಷ್ಟು ಸುಲಭ ಹಾಗೂ ಡಿಜಿಟಲ್ ರೀತಿಯಲ್ಲಿ ಮಾಡಲು ಸಹಾಯವಾಗಲಿದೆ. ಸ್ಮಾರ್ಟ್ ಕಾರ್ಡ್ ಪ್ರಯೋಜನಗಳೇನು? ಸ್ಮಾರ್ಟ್ ಕಾರ್ಡ್ ವಿತರಣೆ ಮೊದಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ವ್ಯಾಪ್ತಿಯಲ್ಲಿ ಪ್ರಾರಂಭವಾಗಲಿದೆ. ಬಳಿಕ […]

ಎಲ್​ಪಿಜಿ ಸಿಲಿಂಡರ್ ಬೆಲೆ 993 ರೂ. ಏರಿಕೆ! ಇಂದಿನಿಂದಲೇ ಜಾರಿ

ನವದೆಹಲಿ: ಇರಾನ್, ಇಸ್ರೇಲ್, ಅಮೇರಿಕಾ ದೇಶಗಳ ಯುದ್ಧ ಪರಿಸ್ಥಿತಿ ಹಾಗೂ ಹೊರ್ಮುಜ್ ಜಲಸಂಧಿಯ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಎಲ್.ಪಿ.ಜಿ. ಕೊರತೆ ಉಂಟಾಗಿದೆ. ಇದೀಗ ದೇಶಾದ್ಯಂತ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ ಜಾರಿಯಾಗಿದೆ. ಇಂದಿನಿಂದಲೇ (ಮೇ 1) ಅನ್ವಯವಾಗುವಂತೆ, ಪ್ರತಿ ಸಿಲಿಂಡರ್‌ಗೆ ₹993 ಹೆಚ್ಚಳ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಏರಿಕೆಯ ನಂತರ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ದರ ₹3,071.50ಕ್ಕೆ ತಲುಪಿದೆ. ಈ ಬೆಲೆ ಏರಿಕೆ ಹೋಟೆಲ್‌, ರೆಸ್ಟೋರೆಂಟ್ ಹಾಗೂ ಇತರ ವಾಣಿಜ್ಯ […]