ಪಂಚ ರಾಜ್ಯಗಳ ಮತ ಎಣಿಕೆ: ಈ ಕ್ಷಣದ ಅಪ್ ಡೇಟ್ ಹೀಗಿದೆ

ಭಾರತದ ಐದು ಪ್ರಮುಖ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದ್ದು, ರಾಜಕೀಯ ಕಣ ಸಾಕಷ್ಟು ರೋಚಕ ತಿರುವು ಪಡೆದುಕೊಂಡಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಹಾಗೂ ಪುದುಚೆರಿ ರಾಜ್ಯಗಳ ಜೊತೆಗೆ ಕರ್ನಾಟಕದ ಬಾಗಲಕೋಟೆ ಮತ್ತು ದಾವಣಗೆರೆ ಕ್ಷೇತ್ರಗಳ ಉಪಚುನಾವಣೆ ಮತ ಎಣಿಕೆ ಇಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದೆ. ಈ ಬಾರಿ ಮತದಾನದ ಪ್ರಮಾಣ ಹೆಚ್ಚಾಗಿರುವುದರಿಂದ ಅಚ್ಚರಿಯ ಫಲಿತಾಂಶಗಳ ನಿರೀಕ್ಷೆ ಹೆಚ್ಚಾಗಿದೆ. ಈ ಕ್ಷಣದ ಸುದ್ದಿ ಅಸ್ಸಾಂನಲ್ಲಿ ಬಿಜೆಪಿ ಹ್ಯಾಟ್ರಿಕ್ ಓಟದತ್ತ- ಅಸ್ಸಾಂನಲ್ಲಿ ಬಿಜೆಪಿ […]
UPSC/KAS/CA ಆಕಾಂಕ್ಷಿಗಳಿಗೆ ಸುವರ್ಣಾವಕಾಶ: 3 ವರ್ಷ ಊಟ-ವಸತಿಯೊಂದಿಗೆ ಉಚಿತ ಕೋಚಿಂಗ್!

ಬೆಂಗಳೂರು: ಎಷ್ಟೋ ವಿದ್ಯಾರ್ಥಿಗಳಿಗೆ, ಯುವಕರಿಗೆ ನಾನೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಬೇಕು ಅನ್ನೋ ಕನಸು ಸಾಮಾನ್ಯವಾಗಿರುತ್ತದೆ. ಆದರೆ ಕುಟುಂಬ, ಆರ್ಥಿಕ ಪರಿಸ್ಥಿತಿ ಇದಕ್ಕೆ ಪೂರಕವಾಗಿರುವುದಿಲ್ಲ. ಈ ದೃಷ್ಟಿಯಲ್ಲಿ ಕರ್ನಾಟಕದ ಬಡ ಹೆಣ್ಣುಮಕ್ಕಳಿಗೆಂದೇ ಸ್ಪರ್ಶ ಟ್ರಸ್ಟ್ UPSC, KAS ಹಾಗೂ CA ತರಬೇತಿ ಪಡೆಯಲು ಅಪರೂಪದ ಅವಕಾಶ ಒದಗಿಸಿದೆ. “ಯುವಿಕಾ” ಯೋಜನೆಯಡಿ 3 ವರ್ಷಗಳ ಕಾಲ ಸಂಪೂರ್ಣ ಉಚಿತ ಕೋಚಿಂಗ್, ಊಟ ಮತ್ತು ವಸತಿ ಸೌಲಭ್ಯ ನೀಡಲಾಗುತ್ತಿದೆ. ಇವರಿಗಿದೆ ಅವಕಾಶ ಈ ಯೋಜನೆ ಹೆಣ್ಣುಮಕ್ಕಳಿಗೆ ಮಾತ್ರ ಲಭ್ಯವಿದ್ದು, 21 – […]
ಮಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಅಮೆಜಾನ್ ನೌ ಎಂಟ್ರಿ: ‘ಕ್ವಿಕ್ ಕಾಮರ್ಸ್’ ಮಾರುಕಟ್ಟೆಯಲ್ಲಿ ಸಂಚಲನ

ಬೆಂಗಳೂರು: ರಾಜಧಾನಿ ಬೆಂಗಳೂರು, ಮುಂಬೈ ಮತ್ತು ದೆಹಲಿ-ಎನ್‌ಸಿಆರ್‌ನಂತಹ ಮಹಾನಗರಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಅಮೆಜಾನ್ ನೌ ಸೇವೆ ಇದೀಗ ಕರ್ನಾಟಕದ ಪ್ರಮುಖ ನಗರಗಳಾದ ಮಂಗಳೂರು ಮತ್ತು ಮೈಸೂರಿಗೂ ವಿಸ್ತರಿಸಲಾಗುತ್ತಿದೆ. ಭಾರತದ ಕ್ವಿಕ್ ಕಾಮರ್ಸ್ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಪೈಪೋಟಿ ಹೆಚ್ಚುತ್ತಿರುವ ಹಿನ್ನೆಲೆ, ಈ ವಲಯದಲ್ಲಿ ತನ್ನ ಸ್ಥಾನ ಮತ್ತಷ್ಟು ಬಲಪಡಿಸಲು ಇ-ಕಾಮರ್ಸ್ ದೈತ್ಯ ಅಮೆಜಾನ್ ಮಹತ್ವದ ಹೆಜ್ಜೆ ಇಟ್ಟಿದೆ. ಗ್ರಾಹಕರಿಗೆ ಕೆಲವೇ ನಿಮಿಷಗಳಲ್ಲಿ ಅಗತ್ಯ ವಸ್ತುಗಳನ್ನು ತಲುಪಿಸುವ ‘ಅಮೆಜಾನ್ ನೌ’ ಸೇವೆಯನ್ನು ಈಗಾಗಲೇ ಹಲವು ನಗರಗಳಲ್ಲಿ ಆರಂಭಿಸಿರುವ ಕಂಪನಿ, […]
ಮೇ. 20 ರಿಂದ ಸಾರಿಗೆ ನೌಕರರ ಮುಷ್ಕರ, ಅನಿರ್ದಿಷ್ಟಾವಧಿ ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಸಂಯುಕ್ತ ಕ್ರಿಯಾಶೀಲ ಸಮಿತಿ (JAC) ಮೇ 20ರಿಂದ ಅನಿರ್ದಿಷ್ಟಾವಧಿ ರಾಜ್ಯವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಇದರ ಪರಿಣಾಮವಾಗಿ KSRTC, BMTC, NWKRTC ಹಾಗೂ KKRTC ಬಸ್‌ಗಳ ಸಂಚಾರ ಮೇ 20ರ ಬೆಳಗ್ಗೆ 6 ಗಂಟೆಯಿಂದ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಮತ್ತು ರಾಮಲಿಂಗ ರೆಡ್ಡಿ ಅವರ ನಡುವೆ ನಡೆದ ಇತ್ತೀಚಿನ ಮಾತುಕತೆ ವಿಫಲವಾದ ಹಿನ್ನೆಲೆ ಈ ತೀರ್ಮಾನ ಕೈಗೊಳ್ಳಲಾಗಿದೆ. ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ […]
ಮತ್ತೊಂದು ಆಘಾತ: ಖಾಸಗಿ ಕಮರ್ಷಿಯಲ್ ಗ್ಯಾಸ್ ದರದಲ್ಲೂ ಭಾರೀ ಏರಿಕೆ!

ಬೆಂಗಳೂರು: ವಾಣಿಜ್ಯ ಅನಿಲ ಸಿಲಿಂಡರ್‌ಗಳ ದಿಢೀರ್ ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಸಿಲಿಂಡರ್‌ಗಳನ್ನು ಹೆಚ್ಚಾಗಿ ಬಳಸುವ ಸಣ್ಣ ಮತ್ತು ದೊಡ್ಡ ಹೋಟೆಲ್‌ಗಳು, ಬೇಕರಿಗಳು ಹಾಗೂ ಆಹಾರ ವ್ಯವಹಾರಸ್ಥರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರಿ ಸ್ವಾಮ್ಯದ ಕಂಪನಿಗಳ ನಂತರ ಖಾಸಗಿ ಕಮರ್ಷಿಯಲ್ ಗ್ಯಾಸ್ ದರದಲ್ಲೂ ಭಾರೀ ಏರಿಕೆ ಕಂಡು ಬಂದಿದೆ. ನಿನ್ನೆ ಸರ್ಕಾರಿ ಸ್ವಾಮ್ಯದ ಕಮರ್ಷಿಯಲ್ ಗ್ಯಾಸ್ ದರ 45% ಏರಿಕೆ ಆಗಿತ್ತು. ಇದೀಗ ಖಾಸಗಿ ಕಮರ್ಷಿಯಲ್ ಗ್ಯಾಸ್ ದರ 50% ರಿಂದ 60% […]