ಮಂಡಲ ಕಲಾಚತುರ, ಕ್ರಿಯಾಶೀಲತೆಯಲ್ಲೇ ಬೆರಗಾಗಿಸೋ ಸುಂದರ ಕಲಾಕಾರ “ಮುರಳೀಧರ ಪುತ್ರಾಯ”
ಹಿಂದೂ ಸಂಸ್ಕೃತಿಯಲ್ಲಿ ಪೂಜೆ, ಆಚರಣೆಗಳಿಗೆ ಉನ್ನತ ಸ್ಥಾನವಿದೆ, ಅದರಲ್ಲೂ ಮಂಡಲಗಳ ಮೂಲಕ ವಿಶೇಷವಾದ ಪೂಜ್ಯನೀಯ ಸ್ಥಾನವನ್ನೂ ಕಲ್ಪಿಸಿ ದೇವರನ್ನು ಆಹ್ವಾನಿಸುವ ಕ್ರಮಗಳು ವೈದಿಕ ವಿಧಾನದಲ್ಲಿದೆ. ಆ ಮಂಡಲ ರಚನೆಯೂ ಸಾಮಾನ್ಯವಾದುದಲ್ಲ. ಮಂಡಲ ಕಲೆಯಲ್ಲಿ ನುರಿತರಾದವರೊಬ್ಬರ ಪರಿಚಯ ಮಾಡಿಕೊಡ್ತೇವೆ ನೋಡಿ. ಇವರ ಸಾಧನೆ ಗಮನೀಯ. ಇವರ ಕೈಯಲ್ಲರಳಿದ ರಂಗೋಲಿಗಳ ಮಂಡಲಗಳು, ಮಂಟಪ ರಚನೆಗಳು ಎಲ್ಲರನ್ನೂ ಹುಬ್ಬೆರಿಸುವಂತೆ ಮಾಡಿದೆ. ಇವರೇ ಕಾರ್ಕಳ ತಾಲೂಕಿನ ಅಜೆಕಾರಿನ ಕುರ್ಸು ಕಟ್ಟೆಯ ಮುರಳಿಧರ ಪುತ್ರಾಯ. ಇವರು ಬಿಡಿಸಿದ ಮಂಡಲಗಳು ವಿಶೇಷವಾಗಿ ಕಣ್ಸೆಳೆಯುತ್ತವೆ. ಒಂದೊಂದು ಮಂಡಲವೂ […]
ಚೌತಿಗೆ ಎಂಟ್ರಿ ಕೊಟ್ಟ ಶಿವನ ಫ್ಯಾಮಿಲಿ ! ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷರಾದ್ರು ಶಿವ-ಪಾರ್ವತಿ-ಗಣೇಶ!
ಸಾಮಾಜಿಕ ಜಾಲತಾಣದಲ್ಲಿ ಶಿವ-ಪಾರ್ವತಿ-ಗಣೇಶನ ಫೋಟೋ ಸದ್ದು ಮಾಡುತ್ತಿದ್ದು ಎಲ್ಲರ ಗಮನಸೆಳೆದಿದೆ. ಪುಟ್ಟ ಜಲಪಾತ ಧುಮುಕುವಲ್ಲಿ ಶಿವ-ಪಾರ್ವತಿ-ಗಣೇಶ ಕೂತು ಫೋಟೋಗೆ ಫೊಸ್ ಕೊಟ್ಟಿದ್ದು, ಈ ಚೆಂದದ ನೋಟಕ್ಕೆ ಬಹುತೇಕ ಮಂದಿ ಖುಷ್ ಆಗಿದ್ದಾರೆ. ಹೌದು ಶಿವ, ಪಾರ್ವತಿ ಮತ್ತು ಗಣಪತಿ ವೇಷ ತೊಟ್ಟು ಫೋಟೋಗೆ ಚಂದದ ಫೋಸು ಕೊಟ್ಟು ಈ ಗಣೇಶೋತ್ಸವಕ್ಕೆ ಎಂಟ್ರಿ ಕೊಟ್ಟಿದ್ದಾರೆ ಈ ಮೂರು ಮಂದಿ. ಯಾರಪ್ಪಾ ಇಷ್ಟೊಂದು ಚೆಂದ ವೇಷ ಹಾಕಿ ದೇವರಾಗಿದ್ದು ಅಂತೀರಾ? ಇವರೇ ಬೆಳ್ತಂಗಡಿಯ ಪೂರ್ಣಿಮ ಪೆರ್ಗಣ್ಣ, ಮಂಗಳೂರಿನ ಪ್ರಗತಿ ಅಮೀನ್ […]
ಇಲ್ಲಿವೆ ನೋಡಿ ಉಡುಪಿXPRESS “ನಿಮ್ ಕ್ಲಿಕ್ ಗೆ ನಮ್ Caption”ಆಯ್ಕೆಯಾದ 30 ಕ್ಲಿಕ್ ಗಳು
ನೀವು ಕ್ಲಿಕ್ಕಿಸಿದ ಫೋಟೋ ಕಳಿಸಿ, ನಿಮ್ ಫೋಟೋಗೆ ನಾವ್ ಕ್ಯಾಪ್ಶನ್ ಕೊಡ್ತೇವೆ ” ಅಂದಾಗ ನಮಗೆ ಬಂದ ಫೋಟೋಗಳು ನೂರಾರು. ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ ಉಡುಪಿ XPRESS ನೀಡಿದ ಕರೆಗೆ ಫೋಟೋ ಕಳಿಸಿದ ಎಲ್ಲರಿಗೂ ಧನ್ಯವಾದಗಳು. ಆಯ್ದ 30 ಫೋಟೋಗಳನ್ನು ಇಲ್ಲಿ ಪ್ರಕಟಿಸಿದ್ದೇವೆ.
ಜಾಲತಾಣದಲ್ಲಿ ಸದ್ದು ಮಾಡ್ತಿದೆ ಕುಡ್ಲದ ರಾಧೆ- ಕೃಷ್ಣರ ಜೋಡಿ ಫೋಟೋ : ಯಾರು ಈ ಮುದ್ದು ಹುಡುಗೀರು?
ಕಳೆದ ವರ್ಷ ಕೃಷ್ಣ ವೇಷಧಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಎಲ್ಲ ಮನಸ್ಸು ಗೆದ್ದ ಕೇರಳ ಮೂಲದ ಯುವತಿ ವೈಷ್ಣವ ಕೆ. ಸುನೀಲ್. ಅವರ ಫೋಟೋ ನೋಡಿದ್ದೀರಿ, ಆ ಫೋಟೋದಲ್ಲಿ ವೈಷ್ಣವ ಕೃಷ್ಣನ ಉಡುಪು ಧರಿಸಿ ನೃತ್ಯ ಮಾಡುತ್ತಾ ಮಡಿಕೆ ಒಡೆಯಲು ಯತ್ನಿಸುತ್ತಿದ್ದಳು ಆ ಕೇರಳದ ಯುವತಿ. ಈ ವರ್ಷವೂ ಅದಕ್ಕಿಂತಲೂ ಚೆಂದದ್ದೊಂದು ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಮಂಗಳೂರಿನ ರಾಧೆ-ಕೃಷ್ಣರ ಈ ಪೋಟೋ ವೈರಲ್ ಆಗಿದ್ದು ವಾಟ್ಸಾಪ್ ಫೇಸ್‌ಬುಕ್ ಗಳ ಸ್ಟೇಟಸ್ ವಾಲ್ ಪೋಸ್ಟ್ […]
ಸಾಮಾಜಿಕ ಜಾಲತಾಣದಲ್ಲಿ ಹೃದಯ ಗೆದ್ದಿತು ಈ ಯುವಕನ ಬಣ್ಣದ ಲೋಕ: ಬಡತನದ ನಡುವೆ ಅರಳಿತು ಶ್ರೀಮಂತ ಚಿತ್ರಕಲೆ!
ಸೌಂದರ್ಯ ಎಲ್ಲರ ಕಣ್ಣನ್ನು ಗೆಲ್ಲುತ್ತೆ. ಪ್ರತಿಭೆ ಎಲ್ಲರ ಹೃದಯವನ್ನು ಗೆಲ್ಲುತ್ತೆ” ಎಂಬ ಮಾತಿದೆ. ಬಡವನೇ ಇರಲಿ, ಶ್ರೀಮಂತನೇ ಆಗಲಿ ಯಾರಲ್ಲಿ ಕಲಾಭಿವ್ಯಕ್ತಿತ್ವ ಇರುತ್ತೋ ಅಂತಹ ಪ್ರತಿಭೆಯನ್ನು ಸಮಾಜ ಗುರುತಿಸಿಯೇ ಗುರುತಿಸುತ್ತೆ. ಆ ಸಾಲಿಗೆ ವಿದ್ಯಾನಂದ (ವಿಘ್ನೇಶ್ ಕೆ.ಎಸ್) ಎಂಬ ಚಿತ್ರಕಲಾ ಪ್ರತಿಭೆ ಹೊರತಲ್ಲ ಮನೆಯೊಳಗೆ ಕಡುಬಡತನದ ಬೇಗೆ ಇದ್ದರೂ ತನ್ನ ಕೈಚಳಕದಿಂದ ಮೂಡಿ ಬರುತ್ತಿರುವ ಈತನ ಚಿತ್ರಕಲೆಗೆ ಯಾವುದೇ ಬೇಗೆ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ತಾನು ಬಿಡಿಸಿದ ಕಲಾಚಿತ್ರಗಳನ್ನು ಹರಿಯಬಿಟ್ಟು. ಅಪಾರ ಕಲಾಭಿಮಾನಿಗಳ ಮೆಚ್ಚುಗೆಯನ್ನು ಸಂಪಾದಿಸಿದ್ದಾನೆ. ವಿಘ್ನೇಶ್. […]