ಒಮ್ಮೆ ಬನ್ನಿ ಕೆಮ್ಮಣ್ಣುವಿಗೆ: ಮನಮೋಹಕ ಪರಿಸರದ ನಡುವೆ ಕಯಾಕಿಂಗ್ ಮಾಡಿ ,ಖುಷಿ ಪಡಿ

ಕಯಾಕಿಂಗ್ ಮಾಡಬೇಕೆಂಬ ಆಸೆಯಾಗಿದೆಯೇ ? ಬನ್ನಿ ಉಡುಪಿಯ ಕೆಮ್ಮಣ್ಣಿಗೆ. ಪ್ರಕೃತಿಯ ರಮಣೀಯತೆಯ ಮಡಿಲಿಗೆ.

ಕೆಮ್ಮಣ್ಣು ಪರಿಸರದ ತಿಮ್ಮನ ಕುದುರು ದ್ವೀಪ ಸ್ವರ್ಣನದಿಯ ಮುಖಜಭೂಮಿ. ಹತ್ತಿರದಲ್ಲೆ ಡೆಲ್ಟಾ ಬೀಚ್ ನ ವಿಹಂಗಮ ದೃಶ್ಯ. ಇಲ್ಲಿಯ ಪರಿಸರದ ಅಪೂರ್ವ ನೋಟ ಪ್ರವಾಸಿಗರ  ಕಣ್ಣಿಗೆ ಹಬ್ಬ.

 ಬನ್ನಿ ಕಯಾಕಿಂಗ್ ಮಾಡಿ:

ಇಲ್ಲಿನ  ನೀರಿನ ಮಟ್ಟ, ದೋಣಿ ವಿಹಾರ, ಮೀನುಗಾರಿಕೆ ಮತ್ತು ಇತರ ಚಟುವಟಿಕೆಗಳಿಗೆ ಸುರಕ್ಷಿತವಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತೂಗು ಸೇತುವೆ ನಿರ್ಮಿಸಿರುವುರಿಂದ ಪ್ರವಾಸಿಗರಿಗೆ ದ್ವೀಪಪ್ರದೇಶಕ್ಕೆ ಸಾಗಲು ಪ್ರಯೋಜನವಾಗಿದೆ. ಒಂದೆಡೆ ತಳುಕು ಬಳುಕಿನ ರುದ್ರ ರಮಣೀಯ ಪರಿಸರ, ಮತ್ತೊಂದೆಡೆ ವಿಶಾಲ ಸಾಗರ. ಇಲ್ಲಿಯ ಸ್ಥಳಿಯ ವಾಟರ್ ಅಡ್ವೆಂಚರ್ಸ್ ಕೆಮ್ಮಣ್ಣು ಸಂಸ್ಥೆ, ಕಾಯಕಿಂಗ್, ಬೋಟಿಂಗ್‍ಗಳಿಗೆ ಅವಕಾಶಗಳನ್ನು ತೆರೆದಿಟ್ಟಿವೆ,  ಜಲ ಕ್ರೀಡೆಗೆ ವಿಪುಲ ಅವಕಾಶದ ಬಾಗಿಲು ತೆರೆಸಿದೆ.
ಸುರಕ್ಷತೆಗಾಗಿ ಲೈಫ್ ಜಾಕೆಟ್ ಜೊತೆ ಈಜು ಪಟುಗಳ ತಂಡವೊಂದು ಸುರಕ್ಷತೆಯನ್ನು ಪಾಲಿಸುತ್ತಿದೆ.

ಅರ್ಧ ದಿನದ ದೋಣಿ ವಿಹಾರ ಪ್ಯಾಕೆಜ್ , ರಾತ್ರಿ ತಂಗಲು ಅವಕಾಶ ,ರೈನ್ ಡ್ಯಾನ್ಸ್ , ಪೈಯರ್ ಕ್ಯಾಂಪ್, ಪಿಕ್ನಿಕ್ ಸ್ಪಾಟ್. ಆಗಿರುವುದರಿಂದ ಪ್ರವಾಸಿಗರ ನೆಚ್ಚಿನ ತಾಣವಿದು.

ಛಾಯಾಗ್ರಾಹಕರಿಗೆ ಈ ತಾಣವು ಸೂಕ್ತವಾಗಿದೆ. ಪ್ರಕೃತಿಯು ಇಲ್ಲಿ ತನ್ನ ಸುಂದರ ಸ್ವರೂಪವನ್ನು ತೋರಿಸುತ್ತದೆ. ಈ ಪರಿಸರದ ಪ್ರಶಾಂತತೆ, ಶಾಂತಿ ಅದ್ಬುತ. ಈ ನದಿ ಸಂತಾನೋತ್ಪತ್ತಿ ಮಾಡುವ ಜಲಚರಗಳಿಗೆ ಹೆಸರುವಾಸಿಯಾಗಿದೆ.

ಹೀಗೆ ಬನ್ನಿ:

ಉಡುಪಿಯಿಂದ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿಯ ಕಲ್ಯಾಣಪುರ ಸಂತೆಕಟ್ಟೆ ಕವಲು ರಸ್ತೆಯಿಂದ ಸಾಗಿ ಕೆಮ್ಮಣ್ಣು ತಿಮ್ಮನ ಕುದುರಿಗೆ ಎರಡು ಕಿಮೀ ದೂರವಿದೆ.
ನೇಜಾರು ರಸ್ತೆಯಿಂದ ಎಡಭಾಗದಲ್ಲಿ ಸಾಗಿ ಒಂದು ಕಿ.ಮಿ ಮುಂದೆ ಸಾಗಿದಲ್ಲಿ ತಿಮ್ಮನ ಕುದುರು ಪರಿಸರ ಸಿಗುತ್ತದೆ. ಪ್ರವಾಸಿಗರ ಮುಂಗಡ ಬುಕ್ಕಿಂಗ್ ಗಾಗಿ ಮೊಹಮ್ಮದ್ ಇಮ್ತಿಯಾಜ್ 9880656012 ಅವರನ್ನು ಸಂಪರ್ಕಿಸಬಹುದು. ಭೇಟಿ ಮಾಡಲು ಉತ್ತಮ ಸಮಯವೆಂದರೆ ಚಳಿಗಾಲ ಅಥವಾ ಪ್ರವಾಸಿ ಋತುವಾದ ಸೆಪ್ಟೆಂಬರ್ ಮತ್ತು ಮಾರ್ಚ್

–ರಾಮ್ ಅಜೆಕಾರು ಕಾರ್ಕಳ

 

https://youtu.be/TZoz-hv-iok