ತಂಪು ತಂಪು ಕೂಲ್ ಕೂಲ್ “ಕೂಡ್ಲು”: ಬೇಸಿಗೆಗೂ ಕರಗದ ಈ ಜಲಪಾತದ ಚಂದ ನೋಡಿ ಬನ್ನಿ
ಬೇಸಿಗೆಯಲ್ಲೂ ಇಲ್ಲಿ ತಂಪು ತಂಪು ಕೂಲ್ ಕೂಲ್ ಎನ್ನುವ ಹಿತವಿರುತ್ತದೆ. ಬಿಸಿಲಿನ ಬೇಗೆಗೆ ಬಳಲಿ ಬೆಂಡಾಗಿ ಇಲ್ಲಿಗೆ ಬಂದರೆ ಆಹಾ ಜಲಪಾತದ ತಂಪಿಗೆ ಮೈ ಮನವೆಲ್ಲಾ ಬೆರಗಾಗುತ್ತದೆ. ಬೇಸಿಗೆಯಲ್ಲೂ ಕಾಡುವ ಈ ಜಲಪಾತವೇ ಉಡುಪಿ ಜಿಲ್ಲೆಯ ಕೂಡ್ಲು ಎನ್ನುವ ಸುರಸುಂದರಿ. ಆಗುಂಬೆ- ಹೆಬ್ರಿ ಮಾರ್ಗದಲ್ಲಿ ಸಿಗುವ ಈ ಕೂಡ್ಲು ತೀರ್ಥ ಜಲಪಾತಕ್ಕೆ ದಾರಿ ಹಿಡಿದರೆ, ದೂರದಲ್ಲೆಲ್ಲೋ ಜಲಪಾತದ ಸಂಗೀತ ಕೇಳಿಸುತ್ತದೆ. ಸುತ್ತಲೂ ಮುಗಿಲ ನೆತ್ತಿಗೆ ತಾಗಿದಂತೆ ನಿಂತಿರುವ ಹಸಿರ ಬೆಟ್ಟದ ತುದಿಯನ್ನು ನೋಡುತ್ತ ಈ ಕಾಡಿನಲ್ಲಿ ಚಾರಣ […]
ಸಹಜ ಭಕ್ತಿಗೆ ಒಲಿಯುತ್ತಾನೆ ಪಿಲಾರ್ ಖಾನದ ಶಿವ : ಕಾಡ ನಡುವೆ ಕಾಡುವ ಈ ಶಿವಮಂದಿರಕ್ಕೊಮ್ಮೆ ಬನ್ನಿ
ಇಲ್ಲಿನ ದೇವರಿಗೆ ಆಡಂಭರವಿಲ್ಲ. ಸಿಂಗಾರದ ಹೊರೆಯಿಲ್ಲ, ಬಂಗಾರ ವೈಢೂರ್ಯಗಳ ಹಂಗು ಮೊದಲೇ ಇಲ್ಲ. ಕಾಡಿನ ನೀರವದಲ್ಲಿ ಹಸಿರಿನ ಉನ್ಮತ್ತ ನಗುವಿನ ಮದ್ಯೆ ನಿರಾಡಂಬರವಾಗಿ ಕೂತ ಮಹಾಲಿಂಗೇಶ್ವರ ದೇವರು ಕಾಡ ಜೀವಗಳನ್ನು ಪೊರೆಯುತ್ತಲೋ, ಅವರ ಭಕ್ತಿ ಭಾವಗಳಿಗೆ ಸಂತುಷ್ಟನಾಗುತ್ತಲೋ ಕೂತ ಪರಿಯೇ ನೋಡಲು ಚೆಂದ. ಮನಸ್ಸು ಶಾಂತವಾಗಲು ಇಲ್ಲಿಗೊಮ್ಮೆ ಬರಬೇಕು. ಇದು ಶಿವನ ತಾಣ ಕಾರ್ಕಳ ತಾಲೂಕಿನ ಮುದರಂಗಡಿ ಗ್ರಾಮದ ಪಿಲಾರ್‌ಖಾನ ಎಂಬಲ್ಲಿ ಕಾಡಿನ ಸೆರಗಲ್ಲಿರುವ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಬಂದರೆ ಮನ ಭಕ್ತಿಯ ಸಡಗರದಲ್ಲಿ ಕಳೆದು ಹೋಗುತ್ತದೆ. […]
ಕಾರ್ಕಳದ ಈ ಬ್ಯಾಂಕ್ ಉದ್ಯೋಗಿಗೆ ಓಲ್ಡ್ ಇಸ್ ಗೋಲ್ಡ್: ಹಳೆ ವಸ್ತುಗಳಿಗಾಗಿ ಊರೂರಿಗೆ ಹೋಗ್ತಾರೆ, ಅದ್ರಲ್ಲೇ ಖುಷಿ ಪಡ್ತಾರೆ
ಉತ್ತಮ ಹವ್ಯಾಸಗಳು ನಮ್ಮ ದಿನನಿತ್ಯದ ಜೀವನ ಶೈಲಿಯ ಭಾಗವಾಗಿದೆ. ಒತ್ತಡದ ಬದುಕಿಗೆ ನೆಮ್ಮದಿಯ ಆಹ್ಲಾದಕರ ಹವ್ಯಾಸ ನಮಗೆ ಖುಷಿ ಕೊಡುತ್ತದೆ. ಇಲ್ಲೊಬ್ಬರಿದ್ದಾರೆ ನೋಡಿ ಇವರಿಗೆ ಓಲ್ಡ್ ಇಸ್ ಗೋಲ್ಡ್. ಕಾರ್ಕಳ ತಾಲೂಕಿನ ಹಜಂಕಬೆಟ್ಟುವಿನ ಕೆ.ಮಂಜುನಾಥ್ ಮೂಲತಃ ಬ್ಯಾಂಕ್ ಉದ್ಯೋಗಿ . ಬ್ಯಾಂಕ್ ಉದ್ಯೋಗದ ಜೊತೆಗೆ ಪುರಾತನ ನೂರಾರುವರ್ಷಗಳ ಹಿಂದಿನ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ವಿಶಿಷ್ಟ ಹವ್ಯಾಸವನ್ನು ರೂಪಿಸಿಕೊಂಡಿದ್ದಾರೆ. ಇವರ ಬಳಿ ಹಳೆಯ ಕಾಲದ ನಾಣ್ಯಗಳು ಸುಮಾರು 25 ಸಾವಿರಕ್ಕೂ ಮಿಕ್ಕಿ ಇದೆ ಅಂದರೆ ನಂಬಲೇಬೇಕು. ಐತಿಹಾಸಿಕ ಕತೆ ಹೇಳುವ […]
ನಾಯಕ್ ಮಾಮನ “ಲಾಯಕ್” ಊಟ: ಆಗುಂಬೆಗೆ ಬಂದ್ರೆ ಈ ಹೊಟೇಲ್ ಊಟ ಮಿಸ್ ಮಾಡ್ಕೊಬೇಡಿ
ಕ್ಯಾಬೆಜ್ ಅಂಬೊಡೆ, ಗುಳ್ಳದ ಪೋಡಿ, ಬಿಸಿ ಬಿಸಿ ಇಡ್ಲಿ ಸಾಂಬರ್, ಮಧ್ಯಾಹ್ನಕ್ಕೆ ಅನ್ನ, ತಿಳಿ ಸಾರು, ದಾಳಿತೊವ್ವೆ, ರುಚಿ ರುಚಿ ಉಪ್ಪಿನಕಾಯಿ, ಅಲಸಂಡೆ ಉಪ್ಕರಿ, ಬಿಟ್ರೂಟ್ ಪಲ್ಯ, ರಸಂ, ದೊಡ್ಡದ್ದೊಂದು ಹಪ್ಪಳ ಇವೆಲ್ಲ ಆಗುಂಬೆಯ ಸುರೇಂದ್ರ ನಾಯಕ್ ಮಾಮನ ಮನೆಯಂತಹ ಹೊಟೇಲಿನ ಬಾಯಿಬಿರಿಸೋ ಖಾದ್ಯಗಳು.ಆಗುಂಬೆ-ಕೊಪ್ಪ ದಾರಿಯಲ್ಲಿ ಸುಮಾರು 40 ವರ್ಷಗಳಿಂದಲೂ ಗುರುಪ್ರಸಾದ್ ಹೊಟೇಲ್ ನಡೆಸುತ್ತಿರುವ ನಾಯಕ್ ಮಾಮನ ಹೊಟೇಲ್‌ನಲ್ಲಿ ಕೂತು ಊಟ ಮಾಡುತ್ತಲೋ, ಅಂಬೊಡೆ ಮುಕ್ಕುತ್ತಲೋ ಆಗುಂಬೆಯ ಕಾಡನ್ನು ನೋಡುವುದೇ ಒಂದು ಚೆಂದ ಅನುಭವ. […]
4 ವಿಶ್ವದಾಖಲೆಗಳ ಸರದಾರಿಣಿ:ತನುಶ್ರೀ ಪಿತ್ರೋಡಿ
ಕಳೆದ ತಿಂಗಳಿನಲ್ಲಿ ಉಡುಪಿಯ ಸೈಂಟ್ ಸಿಸಿಲಿಸ್ ವಿದ್ಯಾಸಂಸ್ಥೆಯ ಕ್ರೀಡಾಂಗಣದ ಏಕಕಾಲದಲ್ಲಿ 2 ವಿಶ್ವದಾಖಲೆಗೆ ಸಾಕ್ಷಿಯಾಯಿತು.ಸಾವಿರಾರು ಪ್ರೇಕ್ಷಕರ ಈ ಅಸಾಧಾರಣ 10 ರ ಪೋರಿ ತನುಶ್ರೀ ಪಿತ್ರೋಡಿಯ ಪ್ರದರ್ಶನ ನೋಡಿ ಬೆಕ್ಕಸಬೆರಗಾದರು. ತನುಶ್ರೀ ಸಾಹಸಗಾಥೆಯ ಕಿರು ಪರಿಚಯ: ನೃತ್ಯ ಹಾಗೂ ಯೋಗ ಸಾಧನೆಯ ಮೂಲಕ ವಿಶ್ವವನ್ನೇ ಗಮನ ಸೆಳೆದ ಬಹುಮುಖಪ್ರತಿಭೆಯ,ವಿಶ್ವದಾಖಲೆಗಳ ಸರದಾರಿಣಿ,ನಾಟ್ಯ ಮಯೂರಿ ಬಿರುದಾಂಕಿತೆ ತನುಶ್ರೀ ಪಿತ್ರೋಡಿ ಅವರು ಸಂಧ್ಯಾ,ಉದಯ್ ಕುಮಾರ್ ದಂಪತಿ ಪುತ್ರಿ .ಪ್ರಸ್ತುತ ಸೈಂಟ್ ಸಿಸಿಲಿಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ 5 ನೇ ತರಗತಿಯಲ್ಲಿ ಕಲಿಯುತ್ತಿರುವ ತನುಶ್ರೀ […]