ಅಂಕೋಲಾದಲ್ಲೂ ಕಾಂತಾರ ಪಂಜುರ್ಲಿ ದೈವದ ಕಲರವ: ಕಲಾವಿದನ ಕೈಯಲ್ಲಿ ಮೂಡಿದ ಸುಂದರ ಕಲಾಕೃತಿ

ಅಂಕೋಲಾ: ಇಲ್ಲಿನ ಅವರ್ಸಾದಲ್ಲಿ ಕಲಾವಿದ ದಿನೇಶ್ ಮೇತ್ರಿಯವರ ಕೈಚಳಕದಲ್ಲಿ ಕಾಂತಾರದ ಪಂಜುರ್ಲಿ-ಗುಳಿಗ ದೈವದ ಕಲಾಕೃತಿಯೊಂದು ಮೂಡಿದ್ದು ಜನಮನ ಸೂರೆಗೊಂಡಿದೆ. ಈ ಕಲಾಕೃತಿಯನ್ನು ಅಮರ್ ನಾಯ್ಕ್ ಎನ್ನುವ ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.

ಶೃಂಗೇರಿ ಹುಡುಗಿ ಶಾಶ್ವತಿ ಹೆಚ್ ಎಸ್ ಬಿಡಿಸಿದ ರಂಗು ರಂಗಿನ ಚಿತ್ರಗಳು

ಶಾಶ್ವತಿ ಹೆಚ್.ಎಸ್, ಮಲೆನಾಡಿನ ಚೆಂದದ ಊರಾದ ಶೃಂಗೇರಿಯ ಹುಡುಗಿ. ಇವರಿಗೆ ಚಿತ್ರ ಬಿಡಿಸುವುದೆಂದರೆ ನೆಚ್ಚಿನ ಹವ್ಯಾಸ. ಇವರು ಬಿಡಿಸಿದ ಚಿತ್ರಗಳಲ್ಲಿ ನಿಸರ್ಗದ ಸಹಜ, ಸರಳ ಮಾಧುರ್ಯವಿದೆ. ಆಡಂಬರವಿಲ್ಲದೆ ಅತ್ಯಂತ ಸಹಜತೆಯಿಂದ ಕಂಗೊಳಿಸುವ ಶಾಶ್ವತಿ ಬಿಡಿಸಿದ ಚಿತ್ರಗಳು ಶಾಶ್ವತವಾಗಿ ಕಲಾರಸಿಕರ ಗಮನ ಸೆಳೆಯುವಂತಿದೆ. ಸದ್ಯ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪಿಎಚ್ ಡಿ ಅಧ್ಯಯನದಲ್ಲಿ ತೊಡಗಿಸಿಕೊಂಡಿರುವ ಶಾಶ್ವತಿ ಅವರಿಗೆ ಚಿತ್ರಕಲೆಯ ಜೊತೆಗೆ ಸಂಗೀತ,ಗಾರ್ಡನಿಂಗ್ ಮತ್ತು ಫೋಟೋಗ್ರಫಿ ಖುಷಿ ಕೊಡುವ ಹವ್ಯಾಸಗಳು.ಇವರ ಕೈಯಲ್ಲರಳಿದ ಕೆಲವು ಚಿತ್ರಗಳ ಸ್ಯಾಂಪಲ್ಲು ಇಲ್ಲಿದೆ ನೋಡಿ.

ಬಣ್ಣದ ಬೆರಗಿನ ಯುವ ಕಲಾಕಾರ: ಇದು ಸುಳ್ಯದ ಕೌಶಿಕ್ ಅವರ ಚಮತ್ಕಾರ!

ಇವರ ಕೈಯಲ್ಲಿ ಮೂಡಿದ ಚಿತ್ರಗಳನ್ನು ನೋಡುತ್ತಿದ್ದರೆ ಆ ಚಿತ್ರದಲ್ಲಿರುವ ವ್ಯಕ್ತಿಗಳೇ ಕಣ್ಣೆದುರು ನಿಜಕ್ಕೂ ಬಂದಂತನ್ನಿಸುತ್ತದೆ.ಇಷ್ಟು ಚೆಂದ ಚಿತ್ರವನ್ನು ಕೈಯಲ್ಲಿ ಬಿಡಿಸಿದ್ದಾ ಎನ್ನುವ ಅಚ್ಚರಿ ಕೂಡ ನಮ್ಮಲ್ಲಿ ಹುಟ್ಟುತ್ತದೆ. ಇಂತಹ ಅಪೂರ್ವ ಚಿತ್ರ ಬರೆಯುವ ಈ ಕಲಾಕಾರನ ಹೆಸರು ಕೌಶಿಕ್ ಕೆ. ಎಂ. ಸುಳ್ಯ ತಾಲೂಕಿನ ಪಂಜ ನಿವಾಸಿವಾಗಿರುವ ಕೌಶಿಕ್ ಅವರು ಬಿಡಿಸುವ ಚಿತ್ರಗಳು ತಮ್ಮ ಅಪೂರ್ವ ಕಲಾವಂತಿಕೆಯಿಂದ,ಕಲಾತ್ಮಕ ನೋಟದಿಂದ ಗಮನಸೆಳೆಯುತ್ತದೆ. ಅಂದ ಹಾಗೆ ಕೌಶಿಕ್, ಚಿತ್ರಕಲೆಯನ್ನು ಅಭ್ಯಾಸ ಮಾಡಲು ತರಗತಿಗಳಿಗೆ ಹೋದವರಲ್ಲ, ಬಣ್ಣಗಳೊಡನೆ ಆಟವಾಡುತ್ತ ಚಿತ್ರಕಲೆಯನ್ನು ಅಭ್ಯಾಸ […]

ಕಣ್ಣು ಕೊರೈಸುವ ಮೋಹಕ ಚಿತ್ರ ಬಿಡಿಸ್ತಾಳೆ ಉಂಚಳ್ಳಿ ಅನ್ನೋ ಜಲಪಾತದೂರಿನ ಈ ಹುಡುಗಿ:

ಇವರು ಬಿಡಿಸಿದ ಕಲಾಕೃತಿಗಳನ್ನು ನೋಡುತ್ತಿದ್ದರೆ ಬೆರಗಿನಿಂದ ಅಬ್ಬಾ ಎನ್ನುವ ಉದ್ಗಾರ ಮೂಡುತ್ತದೆ. ಪ್ರತಿಭೆ ಇದ್ದರೆ, ಸಾಧಿಸುವ ಮನಸ್ಸಿದ್ದರೆ, ಒಂದು ಕ್ಷೇತ್ರದಲ್ಲಿ ಆಸಕ್ತಿ ಇದ್ದರೆ ಮನುಷ್ಯ ಏನೆನೆಲ್ಲಾ ಸಾಧಿಸಬಹುದಲ್ಲವೇ ಅನ್ನೋ ಅಚ್ಚರಿ ಮೂಡುತ್ತದೆ. ಇವರು ಜಲಪಾತದ ಜಿಲ್ಲೆಯಾದ ಉತ್ತರ ಕನ್ನಡದ ಉಂಚಳ್ಳಿಯ ಅಪ್ಪಟ ಗ್ರಾಮೀಣ ಪ್ರತಿಭೆ ಸಿ೦ಧು ಭಟ್. ಗ್ರಾಮೀಣ ಭಾಗದ ಸೊಗಡು, ಶೈಲಿ, ಚೆಂದ, ಬೆರಗು ಎಲ್ಲವೂ ಇವರ ಕಲಾಕೃತಿಯಲ್ಲಿ ಕಾಡುತ್ತದೆ. ಸಿಂಧುಗೆ ಚಿತ್ರಕಲೆಯ ಕುರಿತು ಇಷ್ಟೊಂದು ಆಸಕ್ತಿ ಮೂಡಿದ್ದು ಹೇಗೆ?ಮತ್ತೆ ಬೇರೆ ಯಾವ ಯಾವ ಆಸಕ್ತಿ  […]

ವ್ಹಾವ್ ಎಷ್ಟ್ ಚೆಂದ ಚಿತ್ರ ಬಿಡಿಸ್ತಾಳೆ ಈ ಯುವತಿ: ಬೆರಗಿನ ಕೈಗಳ ಚಿತ್ರಗಾರ್ತಿ ಕಾರ್ಕಳದ ಜ್ಯೋತ್ಸ್ನಾ ಶೆಣೈ

ಕಲ್ಪನೆಗೆ ರಂಗುರಂಗಿನ ಬಣ್ಣ ತುಂಬಿ ಅದ್ಬುತ ಕಲಾಕೃತಿ ಮೂಡಿಸುವ ಯುವ ಕಲಾವಿದೆ ಕಾರ್ಕಳದ ಜ್ಯೋತ್ಸ್ಯಾ ಶೆಣೈ. ಇವರ ಕೈಯಲ್ಲರಳಿದ ಚಿತ್ರದಲ್ಲಿ ಬೆರಗಿದೆ, ವ್ಹಾವ್ ಅಂತ ಅನ್ನಿಸುವ ಸೊಗಸಿದೆ, ಸೃಜನಶೀಲ ಕುಸುರಿ, ಮುಗ್ದತೆ, ಜೀವನಪ್ರೀತಿ ಎಲ್ಲವೂ ಇವರ ಕಲಾಕೃತಿಗಳಲ್ಲಿ ಕಾಡುತ್ತದೆ.      ಜ್ಯೋತ್ಸ್ಯಾ ಶೆಣೈ ಮೂಲತಃ ಕಾರ್ಕಳದವರು, ಕಾರ್ಕಳ ಆರ್.ಸುರೇಶ್ ಶೆಣೈ, ಆರ್.ಸುಜಾತಾ ಶೆಣೈ ದಂಪತಿಯ ಪುತ್ರಿ. ಸದ್ಯ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರೋ ಜ್ಯೋತ್ಸ್ಯಾಗೆ ಬಾಲ್ಯದಿಂದಲೂ ಚಿತ್ರ ಬರೆಯೋದು ನೆಚ್ಚಿನ ಆಸಕ್ತಿ. https://m.facebook.com/story.php?story_fbid=750967682370108&id=329044147895799 […]