ಯಶ್ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಪ್ರಯತ್ನ

ರಾಕಿಂಗ್ ಸ್ಟಾರ್ ಯಶ್ ಅವರನ್ನು ನೋಡಲು ಬಿಡಲಿಲ್ಲ ಎಂಬ ಕಾರಣಕ್ಕೆ ಹೊಸಕೆರೆ ಹಳ್ಳಿಯ ನಿವಾಸದ ಎದುರು ಅಭಿಮಾನಿಯೊಬ್ಬ ಆತ್ಮಹತ್ಯೆ ಪ್ರಯತ್ನ ಮಾಡಿರುವ ಘಟನೆ ಇಂದು ನಡೆದಿದೆ. ರವಿ ಎಂಬ ಅಭಿಮಾನಿ ಪೆಟ್ರೋಲ್ ಸುರಿದು ಬೆಂಕಿ ಹಂಚಿಕೊಂಡು ತೀವ್ರ ಗಾಯಗೊಂಡಿದ್ದರು. ನಂತರ ಆತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ, ಆ ಅಭಿಮಾನಿಯನ್ನು ನೋಡಲು ಸ್ವತಃ ಯಶ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಅಂಬರೀಶ್ ನಿಧನದ ಹಿನ್ನೆಲೆ ಈ ವರ್ಷ ಹುಟ್ಟುಹಬ್ಬ ಆಚರಿಸುವುದು ಬೇಡ ಎಂದು ಯಶ್ ಅವರು […]

ಬಾಲಿವುಡ್ ಹಿರಿಯ ನಟ ಖಾದರ್ ಖಾನ್ ನಿಧನ

ಹಿಂದಿ ಚಿತ್ರರಂಗದ ಹಿರಿಯ ನಟ, ಸಂಭಾಷಣೆಕಾರ ಖಾದರ್ ಖಾನ್ ವಿಧಿವಶರಾಗಿದ್ದಾರೆ. 81 ವರ್ಷ ವಯಸ್ಸಾಗಿದ್ದ ಅವರು ಉಸಿರಾಟದ ತೊಂದರೆಯಿಂದ ಬಳಲುತಿದ್ದರು. ಕೆನಾಡದ ಟೋರಾಂಟೋದಲ್ಲಿರುವ ಆಸ್ಪತ್ರೆಯೊದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖಾದರ್ ಖಾನ್ ಅವರು ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕವನ್ನು ತ್ಯಜಿಸಿದರು. ಅವರ ಸಾವಿಗೆ ಕುಟುಂಬದ ಹಾಗೂ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಖಾದರ್ ಖಾನ್ ಅವರು ನಟನೆ, ಸಂಭಾಷಣೆ ಹಾಗೂ ಚಿತ್ರಕತೆ ಬರೆಯುವ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಭಾಷಣೆಯನ್ನು ಬರೆದಿದ್ದಾರೆ. 1973 ರಲ್ಲಿ ಮೊದಲ ಬಾರಿಗೆ ಖಾದರ್ […]

“ಕೆಜಿಎಫ್” ಬರೀ 5 ದಿನಕ್ಕೆ ನೂರು ಕೋಟಿ ಕಲೆಕ್ಷನ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಕಲೆಕ್ಷನ್ 100 ಕೋಟಿ ಗಳಿಕೆ ಮಾಡಿದೆ. ಬಿಡುಗಡೆಯಾದ ಬರೀ 5 ದಿನಕ್ಕೆ ನೂರು ಕೋಟಿ ಕಲೆಕ್ಷನ್ ಮಾಡಿ ಎಲ್ಲರನ್ನು ಆಶ್ಚರ್ಯ ಆಗುವಂತೆ ಮಾಡಿದೆ. ಈ ಹಿಂದೆ ಬಾಲಿವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ ಮಾತ್ರವಲ್ಲದೆ ಮರಾಠಿಯ ಸಿನಿಮಾ ಕೂಡ ನೂರು ಕೋಟಿ ಗಳಿಕೆ ಮಾಡಿತ್ತು. ಕನ್ನಡ ಸಿನಿಮಾಭಿಮಾನಿಗಳು ನಮ್ಮ ಸಿನಿಮಾಗಳು ಯಾವಾಗ ಈ ರೀತಿ ಮಾಡೋದು ಅಂತ ಕಾಯುತ್ತಿದ್ದರು. ಅಂತೂ ಕನ್ನಡದ ‘ಕೆಜಿಎಫ್’ ಸಿನಿಮಾ ಬರೀ 5 ದಿನಕ್ಕೆ 100 […]

ಕಲೆಕ್ಷನ್ ನಲ್ಲಿ ಇತಿಹಾಸ ನಿರ್ಮಿಸಿದ “ಕೆಜಿಎಫ್”

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಕಲೆಕ್ಷನ್ ಎಷ್ಟು ಎಂಬುದೇ ದೊಡ್ಡ ಕುತೂಹಲವಾಗಿದೆ. ಒಬ್ಬೊಬ್ಬರು ಒಂದೊಂದು ರೀತಿ ವಿಶ್ಲೇಷಣೆ ಮಾಡ್ತಿದ್ರು. ಸಿನಿಮಾ ತಂಡದವರು ಅದ್ಯಾವಾಗ ಘೋಷಣೆ ಮಾಡ್ತಾರೆ ಎಂದು ಅಭಿಮಾನಿಗಳು ಕಾಯ್ತಿದ್ರು. ಅಂತಿಮವಾಗಿ ಕೆಜಿಎಫ್ ಚಿತ್ರದ ಮೊದಲ ದಿನದ ಕಲೆಕ್ಷನ್ ಬಹಿರಂಗವಾಗಿದೆ. ವರ್ಲ್ಡ್ ವೈಡ್ ಕೆಜಿಎಫ್ ಸಿನಿಮಾ ಮೊದಲ ದಿನ 24 ಕೋಟಿ ಗಳಿಸಿದೆ ಎಂದು ಖ್ಯಾತ ವಿಶ್ಲೇಷಕರು ಹಾಗೂ ಚಿತ್ರತಂಡದವರು ಹೇಳಿದ್ದಾರೆ. ಕೆಜಿಎಫ್ ಕನ್ನಡ ಭಾಷೆಯ ಸಿನಿಮಾ ಮೊದಲ ದಿನ 12.5 ಕೋಟಿ ಗಳಿಕೆಯನ್ನು […]

ಸೌತ್ ಸ್ಟಾರ್ ಗಳನ್ನು ಹಿಂದಿಕ್ಕಿದ ರಶ್ಮಿಕಾ ಮಂದಣ್ಣ

ಇದೀಗ ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆದ ಸೌತ್ ಸ್ಟಾರ್ ಗಳಲ್ಲಿ ಖ್ಯಾತ ನಟರನ್ನು ಹಿಂದಿಕ್ಕಿ ರಶ್ಮಿಕಾ ಮಂದಣ್ಣ ಟಾಪ್ ಐದರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕನ್ನಡದ ಯಾವ ನಟರು ಈ ಪಟ್ಟಿಯಲ್ಲಿಲ್ಲ. ತಮಿಳಿನ ಸ್ಟಾರ್ ನಟರು ಕೂಡ ಕಾಣಿಸಿದ್ದು ಕಡಿಮೆ. ಆದ್ರೆ, ತೆಲುಗು ನಟರೇ ಹೆಚ್ಚು ಇರುವ ಟಾಪ್ ಹತ್ತರಲ್ಲಿ ಸ್ಥಾನ ಪಡೆದಿರುವ ಏಕೈಕ ಕನ್ನಡದ ನಟಿ ರಶ್ಮಿಕಾ ಮಂದಣ್ಣ. ಈ ವರ್ಷ ಗೂಗಲ್ ನಲ್ಲಿ ಸರ್ಚ್ ಆದ ಸೌತ್ ಸ್ಟಾರ್ ಗಳ ಪೈಕಿ ಚಿರಂಜೀವಿ […]