ನಟ , ಕನ್ನಡದ ಖ್ಯಾತ ನಿರೂಪಕ, ಬಿಗ್ ಬಾಸ್ ಖ್ಯಾತಿಯ ರೆಹಮಾನ್ ನಾಯಕ ನಟನಾಗಿ ಅಭಿನಯಿಸಿರುವ, ಕೆ.ಆರ್. ಮುರಳೀಕೃಷ್ಣ ನಿರ್ದೇಶನದ “ಗರ” ಚಿತ್ರ ಏಪ್ರಿಲ್ 26 ರಂದು ತೆರೆಗಪ್ಪಳಿಸಲು ಸಿದ್ದವಾಗಿದೆ. ಈಗಾಗಲೇ ಚಿತ್ರ ಪ್ರೇಮಿಗಳಲ್ಲಿ ಕುತೂಹಲ ಮೂಡಿಸರುವ ಗರ ಚಿತ್ರದಲ್ಲಿ ಬಾಲಿವುಡ್ ನಟ ಜಾನಿ ಲಿವರ್, ಹಾಘೂ ಸಾಧುಕೋಕಿಲ ಅವರ ಕಾಮಿಡಿ ಕಿಚಡಿ ಚಿತ್ರದಲ್ಲಿ ಸಖತ್ ಹೈಲೈಟ್ ಆಗಿದ್ದು,ನಿರ್ದೇಶಕ ಕಮ್ ವಕೀಲರಾದ ಮುರಳೀಕೃಷ್ಣ ಅವರ ಚೊಚ್ಚಲ ಚಿತ್ರವೂ ಇದಾಗಿದೆ.ಈ ಮೊದಲು ಹಲವು ಚಿತ್ರಗಳ ನಿರ್ಮಾಪಕರಾಗಿ ಮಿಂಚಿದ್ದ ಮುರಳೀಕೃಷ್ಣ ಇದೀಗ ಹೊಸತಾಗಿ ನಿರ್ದೇಶನದ ಬಾಗಿಲು ತೆರೆದಿದ್ದಾರೆ. ಅಂದ ಹಾಗೆ ಗರ ಚಿತ್ರದ ಕತೆ ಇಂಗ್ಲೀಷ್ ನ ಖ್ಯಾತ ಲೇಖಕ ಆ.ಕೆ. ನಾರಾಯಣ್ ಅವರ “ಆನ್ ಅಸ್ಟ್ರಾಲಜೆರ್ ಡೇ”ಎನ್ನುವ ಕತೆಯಿಂದ ಸ್ಪೂರ್ತಿ ಪಡೆದುಕೊಂಡು ಹೊಸ ಕತೆಯಾಗಿ ಚಿತ್ರಕ್ಕೆ ಅಳವಡಿಸಿಕೊಳ್ಳಲಾಗಿದೆ.
ನಿರ್ದೇಶಕರು ಈ ಸಿನಿಮಾಗೋಸ್ಕರವೇ ಒಂದಷ್ಟು ವರ್ಕ್ ಔಟ್ ಮಾಡಿದ್ದು ಚಿತ್ರ ಕಥೆ, ನಿರ್ದೇಶನದಲ್ಲಿ ಹೊಸ ಅಲೆ ಮೂಡಿಸಲು ಸತತವಾಗಿ ಪ್ರಯತ್ನಿಸಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ ಕೂಡ ಜಾಹೀರಾಗಿದ್ದು, ಪೋಸ್ಟರ್ ನ ಫಸ್ಟ್ ಲುಕ್ ಸಖತ್ತಾಗಿದೆ.ಈಗಾಗಲೇ ಕಾಶ್ಮೀರದ ಪುಲ್ಮಾಮಾ, ಮಡಿಕೇರಿ,ಕೊಪ್ಪ,ಬೆಂಗಳೂರು ಮೊದಲಾದ ಕಡೆ ಚಿತ್ರೀಕರಣ ಅದ್ದೂರಿಯಿಂದ ಮುಗಿದಿದ್ದು ಆದಷ್ಟು ಬೇಗ ಈ ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರ ಮೈಮನ ತಂಪಾಗಿಸಲಿದೆ.