ಕರುನಾಡ ಮೇಲಿನ ಅಭಿಮಾನದಿಂದಾಗಿ ಅನೇಕ ಅನಿವಾಸಿ ಕನ್ನಡಿಗರು ಸಿನಿಮಾ ರಂಗದತ್ತ ಮುಖ ಮಾಡುತ್ತಿದ್ದಾರೆ. ಈ ಯಾದಿಗೆ ಹೊಸ ಸೇರ್ಪಡೆ ರತ್ನಮಂಜರಿ ಟೀಮ್. ಅಮೆರಿಕಾದಲ್ಲಿ ನಡೆದ ಭಾರತೀಯರೊಬ್ಬರ ಕೊಲೆಯ ಹಿನ್ನೆಲೆಯಾಗಿಟ್ಟುಕೊಂಡು ಇವರು ಸಿನಿಮಾ ಮಾಡುತ್ತಿದ್ದು, ಕೆಲ ಅನಿವಾಸಿ ಕನ್ನಡಿಗರು ಈ ಚಿತ್ರದಲ್ಲಿ ಪಾತ್ರ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹೆಚ್ಚು ವಿಭಿನ್ನ ಚಿತ್ರಗಳೊಂದಿಗೆ ಕಾಲಿಡುತ್ತಿದ್ದಾರೆ.ಇದೊಂದು ಮರ್ಡರ್ ಮಿಸ್ಟರಿ ಕಥೆಯಾಗಿದ್ದು, ಅಮೆರಿಕಾದಲ್ಲಿ ಕನ್ನಡಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಿರುವ ನಟರಾಜ್ ಹಳೇಬಿಡು ಮತ್ತು ತಂಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಸಂದೀಪ್ ಕುಮಾರ್ ಸೇರಿದಂತೆ ಹಲವು ಗೆಳೆಯರು ಈ ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ.
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಮತ್ತು ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಪ್ರಸಿದ್ ಈ ಚಿತ್ರದ ನಿರ್ದೇಶಕರು. ಯುಎಸ್‌ಎ,ಮಡಿಕೇರಿ, ಕೂರ್ಗ್ ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ .
ಚಿತ್ರದಲ್ಲಿ ರಾಜ್ ಚರಣ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅಖಿಲಾ ಪ್ರಕಾಶ್ ,ಶ್ರದ್ಧಾ ಸಾಲಿಯಾನ್ ,ಪಲ್ಲವಿ ರಾಜು ನಾಯಕಿಯರಾಗಿ ನಟಿಸಿದ್ದಾರೆ. ಮಾ.23 ರಂದು ಚಿತ್ರದ ಟೀಸರ್ ಬಿಡುಗಡೆಯಾಗಿದೆ.