ಮೇ 10 ರಂದು ಮೈಮನ ಪೋಣಿಸಲಿದೆ ಹಿರಿಯಡ್ಕದ ಹುಡುಗ ಯಶವಂತ್‌ ಶೆಟ್ಟಿ ಅಭಿನಯದ “ಸೂಜಿದಾರ”

ಮೂವಿ ಮಸಾಲ:  ಜನಪ್ರಿಯ ರಂಗಕರ್ಮಿ ಮೌನೇಶ್ ಬಡಿಗೇರ್ ಅವರ ನಿರ್ದೇಶನ, ಬಹುಭಾಷಾ ನಟಿ ಹರಿಪ್ರಿಯಾ ಹಾಗೂ  ಉಡುಪಿ ಜಿಲ್ಯಲೆಯ ಹಿರಿಯಡ್ಕದ ಯಶವಂತ್‌ ಶೆಟ್ಟಿ  ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಸೂಜಿದಾರ’  ಇದೇ ಮೇ 10ರಂದು  ಸಿನಿ ಪ್ರಿಯರ ಮೈಮನ ಪೋಣಿಸಲಿದೆ. ಸೂಜಿ ಮತ್ತು ದಾರ ಹೊಸತೊಂದು ಕಸೂತಿಯೇ ಸೃಷ್ಟಿಯಾಗುವಂತೆ  ಈ ಸಿನಿಮಾದ ಕತೆ ಕೂಡ ನಮ್ಮೊಳಗಿನ ಭಾವನೆಗಳನ್ನು ಅಚ್ಚುಕಟ್ಟಾಗಿ ಪೋಣಿಸಲಿದೆಯಾ ಅನ್ನುವ ಪ್ರಶ್ನೆ ಪ್ರೇಕ್ಷಕನಲ್ಲಿ ಹುಟ್ಟಿಕೊಂಡಿದೆ. ಸೂಕ್ಷ್ಮಸಂವೇದನೆಯ ಭಾವನೆಗಳೇ ಫೋಕಸ್ ಆದಂತಿರುವ ಚಿತ್ರದ ಟ್ರೈಲರ್ ಕೂಡ ಈಗಾಗಲೇ ಸದ್ದು ಮಾಡಿದ್ದು […]

ಚಾಲೆಂಜಿಂಗ್ ಸ್ಟಾರ್ ಅಭಿನಯದ ‘ಮುನಿರತ್ನ ಕುರುಕ್ಷೇತ್ರ’ ನಾಲ್ಕು ಭಾಷೆಗಳಲ್ಲಿ ಬಿಡುಗಡೆ

ಚಾಲೆಂಜಿಂಗ್ ಸ್ಟಾರ್ ಅಭಿನಯದ ‘ಮುನಿರತ್ನ ಕುರುಕ್ಷೇತ್ರ’ ನಾಲ್ಕು ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದ್ದ ಚಿತ್ರ ತಂಡ ಇಂದು ನಾಲ್ಕು ಭಾಷೆಯ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಶೀಘ್ರದಲ್ಲಿಯೇ ಸಿನಿಮಾ ಬಿಡುಗಡೆ ಆಗಲಿದೆ ಎಂಬ ಸಿಹಿ ಸುದ್ದಿ ನೀಡಿದೆ. ಈ ವರ್ಷದ ಮೊದಲ ವಾರದಲ್ಲಿ‌ಚಿತ್ರ ಬಿಡುಗಡೆ ಆಗಲಿದೆ ಎನ್ನಲಾಗುತ್ತಿತ್ತು. ಆದ್ರೆ ನಿರ್ದೇಶಕರು ಪ್ರತಿ ಫ್ರೇಮ್‍ನಲ್ಲಿಯಲ್ಲಿ ಅಚ್ಚುಕಟ್ಟು ಬಯಸುತ್ತಿರುವದರಿಂದ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಲಾಗಿದೆ. ಜತೆಗೆ ನಾಲ್ಕು ಭಾಷೆಗಳಲ್ಲಿ ಡಬ್ಬಿಂಗ್ ಕೆಲಸ ನಡೆಯುತ್ತಿದ್ದರಿಂದ ಸಿನಿಮಾ ರಿಲೀಸ್ ತಡವಾಗುತ್ತಿದೆ ಎಂದು ನಿರ್ಮಾಪಕ […]

ಸಖತ್ ಸದ್ದು ಮಾಡ್ತಿದೆ “ಆಸರೆ” ಆಲ್ಬಂ ಸಾಂಗ್: ಇಲ್ಲಿದೆ ಪ್ರೀತಿ-ಪ್ರೇಮದ ನಶೆ,ಒಲವಿನ ಪರಿಭಾ‍ಷೆ

 ಕೋಸ್ಟಲ್ ವುಡ್‌ ನಲ್ಲಿ ಸಣ್ಣನೆ  ಆಲ್ಬಾಂ ಸಾಂಗುಗಳು ಗುಲ್ಲೆಬ್ಬಿಸುತಿದೆ . ತುಳು ಭಾಷೆಯ ಲ್ಲಿ  ನಿರ್ಮಾಣ ಗೊಂಡ ಆಲ್ಬಂ  “ಆಸರೆ” ಪ್ರೋಮೋ ಯೂಟ್ಯೂಬ್‌ನ ಲ್ಲಿ ರಿಲೀಸ್ ಆಗಿದ್ದು  ವೈರಲ್ ಆಗುತ್ತಿದೆ.. ಬಲೆತೆಲಿಪಾಲೆ ಖ್ಯಾತಿಯ ಕನಸು ಕಡ್ತಲ ಹಾಗು ಕರಾವಳಿಯ ಪ್ರತಿಷ್ಠಿತ  www.manipalchoice.com   ಸಂಸ್ಥೆ ಗಳ ಸಹಯೋಗ ದಲ್ಲಿ ನಿರ್ಮಾಣ ಗೊಂಡ  ಈ ಆಸರೆ ಆಲ್ಬಂ ಅರಳು ಪ್ರತಿಭೆ ಗಳಾದ ಉಮೇಶ್ ಆಚಾರ್ಯ ಅಭಿಲಾಶ್ ಪೂಜಾರಿ  ಸಾಹಿತ್ಯದ ಲ್ಲಿ ಮೂಡಿ ಬಂದಿದ್ದು   ಕರಾವಳಿ ಕರ್ನಾಟಕದ ಗಾನ ಕೋಗಿಲೆ ಬಿರುದಾಂಕಿತ ಗಂಗಾಧರ್ […]

ಸಲ್ಮಾನ್ ಖಾನ್ ಅಭಿನಯದ “ಭಾರತ್” ಸಿನಿಮಾ ಪೋಸ್ಟರ್ ರಿಲೀಸ್

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅಭಿನಯದ “ಭಾರತ್” ಚಿತ್ರದ ಸಲ್ಮಾನ್ ಖಾನ್ ಲುಕ್ ರಿಲೀಸ್ ಆಗಿದೆ. ಬಾಲಿವುಡ್ ನ ಮೋಸ್ಟ್ ಬ್ಯಾಚುಲರ್ ಸಲ್ಮಾನ್ ಖಾನ್ ವಯಸ್ಸಾದ ಲುಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಉದ್ದನೆಯ ಬಿಳಿ ಕೂದಲು ಮತ್ತು ಬಿಳಿ ದಾಡಿ ಬಿಟ್ಟಿರುವ ಸಲ್ಲುಗೆ ಸಿನಿರಸಿಕರು ಫಿದಾ ಆಗಿದ್ದಾರೆ. ಈ ಪೋಸ್ಟರ್ ನಲ್ಲಿ ಬ್ಯಾಡ್ ಬಾಯ್ ಗೆ ವಯಸ್ಸಾದರೂ ಸಖತ್ ಸ್ಟೈಲಿಶ್ ಆಗಿ ಮಿಂಚಿದ್ದಾರೆ. ಬಿಳಿ ಕೂದಲನ್ನು ಸ್ಪೈಕ್ ಮಾಡಿ, ಉದ್ದ ಮೀಸೆ […]

ಮೇ.5: ನಟಿ ಆಮಿ ಜಾಕ್ಸನ್ ಎಂಗೇಜ್ ಮೆಂಟ್

ಮದುವೆಗೆ ಮುನ್ನವೇ ಗರ್ಭಿಣಿಯಾದ ಸಂಗತಿಯನ್ನು ತಿಳಿಸುವ ಮೂಲಕ ದೊಡ್ಡ ಸುದ್ದಿ ಮಾಡಿದ್ದ ನಟಿ ಆಮಿ ಜಾಕ್ಸನ್ ನಿಶ್ಚಿತಾರ್ಥದ ದಿನಾಂಕ ನಿಗದಿಯಾಗಿದೆ. ಮೇ 5ಕ್ಕೆ ಆಮಿ ಹಾಗೂ ಜಾರ್ಜ್ ಎಂಗೇಜ್ ಮೆಂಟ್ ನಡೆಯಲಿದೆ.  ತಮ್ಮ ಗೆಳೆಯ ಜಾರ್ಜ್ ಜತೆಗೆ ನಿಶ್ಚಿತಾರ್ಥ ಲಂಡನ್ ನಲ್ಲಿ ಎಂಗೇಜ್ ಮೆಂಟ್ ಕಾರ್ಯಕ್ರಮ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಕುಟುಂಬದವರು ಹಾಗೂ ಆಪ್ತ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರಂತೆ. ಗ್ರೀಕ್ ಸಂಪ್ರದಾಯದಂತೆ ಮದುವೆ ನಡೆಯಲಿದ್ದು, ಇನ್ನೂ ದಿನಾಂಕ ನಿಗದಿಯಾಗಿಲ್ಲ. ಉದ್ಯಮಿ ಜಾರ್ಜ್ ಜೊತೆಗೆ ಬಹುಕಾಲದಿಂದ ಡೇಟಿಂಗ್ ಮಾಡುತ್ತಿದ್ದ […]