ಸಖತ್ ಸದ್ದು ಮಾಡ್ತಿದೆ “ಆಸರೆ” ಆಲ್ಬಂ ಸಾಂಗ್: ಇಲ್ಲಿದೆ ಪ್ರೀತಿ-ಪ್ರೇಮದ ನಶೆ,ಒಲವಿನ ಪರಿಭಾ‍ಷೆ

 ಕೋಸ್ಟಲ್ ವುಡ್‌ ನಲ್ಲಿ ಸಣ್ಣನೆ  ಆಲ್ಬಾಂ ಸಾಂಗುಗಳು ಗುಲ್ಲೆಬ್ಬಿಸುತಿದೆ . ತುಳು ಭಾಷೆಯ ಲ್ಲಿ  ನಿರ್ಮಾಣ ಗೊಂಡ ಆಲ್ಬಂ  “ಆಸರೆ” ಪ್ರೋಮೋ ಯೂಟ್ಯೂಬ್‌ನ ಲ್ಲಿ ರಿಲೀಸ್ ಆಗಿದ್ದು  ವೈರಲ್ ಆಗುತ್ತಿದೆ.. ಬಲೆತೆಲಿಪಾಲೆ ಖ್ಯಾತಿಯ ಕನಸು ಕಡ್ತಲ ಹಾಗು ಕರಾವಳಿಯ ಪ್ರತಿಷ್ಠಿತ  www.manipalchoice.com   ಸಂಸ್ಥೆ ಗಳ ಸಹಯೋಗ ದಲ್ಲಿ ನಿರ್ಮಾಣ ಗೊಂಡ  ಈ ಆಸರೆ ಆಲ್ಬಂ ಅರಳು ಪ್ರತಿಭೆ ಗಳಾದ ಉಮೇಶ್ ಆಚಾರ್ಯ ಅಭಿಲಾಶ್ ಪೂಜಾರಿ  ಸಾಹಿತ್ಯದ ಲ್ಲಿ ಮೂಡಿ ಬಂದಿದ್ದು   ಕರಾವಳಿ ಕರ್ನಾಟಕದ ಗಾನ ಕೋಗಿಲೆ ಬಿರುದಾಂಕಿತ ಗಂಗಾಧರ್ ಆಚಾರ್ಯ ಸ್ವರ ಸಂಯೋಜನೆಯನ್ನು ನೀಡಿದ್ದಾರೆ.
ಚಂದನ ವಾಹಿನಿಯಲ್ಲಿ  ಪ್ರಕಟವಾಗುತಿದ್ದ ಪರಿಭ್ರಮಣ, ಮಲೆನಾಡ ಮಕ್ಕಳು ಧಾರವಾಹಿಗಳಲ್ಲಿ  ಬಾಲ ಪ್ರತಿಭೆಯಾಗಿ ಗುರುತಿಸಿ ಕೊಂಡಿದ್ದ ಸೌಮ್ಯ ಮೆಂಡನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮಿ ಇಂಡಿಯಾ ಫೈನಲಿಸ್ಟ್ ಆಗಿ  ಮಿ. ಮಂಗಳೂರು  2018 ರ ವಿನ್ನರ್ ಆಗಿ ಗುರುತಿಸಿಕೊಂಡಿದ್ದ  ‌ದರ್ಶಿತ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ .
ಕನಸು ಕ್ರಿಯೇಶನ್ಸನ ಮುಖ್ಯಸ್ಥ ಶ್ರೀಶನಾಯಕ್  ಅವರ   ನಿರ್ದೇಶನದಲ್ಲಿ ಆಲ್ಬಂ  ಮೂಡಿ ಬಂದಿದ್ದು  ಬ್ರಾಹ್ಮರಿ ಸ್ಟೂಡಿಯೋ ದ ಸಹಕಾರವಿದೆ. ಸಿನಿಮಾ ಕ್ಷೇತ್ರದ ಪ್ರತಿಭೆಗಳನ್ನು  ಗುರುತಿಸಿ  ಹೊಸ ಆಯಾಮ ದ ಮೂಲಕ ಆಲ್ಬಂ ನ್ನು ಚಿತ್ರಿಕರಿಸಲಾಗಿದೆ..ಮಂಗಳೂರು ಉಡುಪಿ ಶಿವಮೊಗ್ಗ ಚಿಕ್ಕಮಗಳೂರು  ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದ್ದು 
ಸದ್ಯಕ್ಕೆ ಪ್ರೋಮೊ ಯುಟ್ಯೂಬ್ನಲ್ಲಿ ರಿಲೀಸ್ ಮಾಡಲಾಗಿದ್ದು ವೈರಲ್ ಆಗುತಿದೆ. ಹುಡುಗ ಹುಡುಗಿಯ ಪ್ರೀತಿ ಪ್ರಣಯದ ರೋಚಕ ಸಂಗತಿಗಳನ್ನು  ಚಿತ್ರೀಕರಿಸಲಾಗಿದ್ದು,   
ಭಾವನಾತ್ಮಕ ಸಂಬಂಧವನ್ನು ದಿಟ್ಟಗೊಳಿಸುವಂತಿದೆ.
 ಚಿತ್ರೀಕರಣ ಮುಕ್ತಾಯಗೊಂಡಿದ್ದು‌  ಸದ್ಯದಲ್ಲಿಯೇ ಉಡುಪಿಯಲ್ಲಿ ವೀಡಿಯೋ ಆಲ್ಬಮ್ ಬಿಡುಗಡೆ ಮಾಡಲಾಗುವುದೆಂದು ಶ್ರೀಶ ನಾಯಕ್ ತಿಳಿಸಿದ್ದಾರೆ. ಆಸರೆಯ ಟ್ರೈಲರ್ ನೋಡಲು ಕೆಳಗಿರುವ ಲಿಂಕ್ ಕ್ಲಿಕ್ ಮಾಡಿ
https://youtu.be/HaTp8d5FAK0