ನಾವು ಬಿಡುವ ಪಟಾಕಿ ಸದ್ದಿನಿಂದ ಹಕ್ಕಿಗಳಿಗೇನಾಗುತ್ತೆ ಗೊತ್ತಾ? : ಕಣ್ಣು ತೆರೆಸೋ ಈ ವಿಡಿಯೋ ಒಮ್ಮೆ ನೋಡಿ

ವಿದ್ಯಾರ್ಥಿಗಳು ಮಾಡಿದ ಈ ವಿಡಿಯೋ ನೋಡಿ ಪಕ್ಷಿಗಳು ಅತ್ಯಂತ ಸೂಕ್ಷ್ಮ ಜೀವಿಗಳು, ಪಟಾಕಿಗಳ ಗಾಢ ಸದ್ದು ಅವುಗಳ ಬದುಕನ್ನೇ ಅಲ್ಲೋಲ ಕಲ್ಲೋಲ ಮಾಡಿಬಿಡುತ್ತದೆ ಎನ್ನುವುದನ್ನು ಬಹಳ ಹೃದ್ಯವಾಗಿ ಪುಟ್ಟದ್ದೊಂದು ವಿಡಿಯೋ ಮೂಲಕ ಕಟ್ಟಿಕೊಟ್ಟಿದ್ದಾರೆ ಶಿವಮೊಗ್ಗದ   ಕಟೀಲ್ ಅಶೋಕ್ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳು.  ದೀಪಗಳ ಹಬ್ಬ ದೀಪಾವಳಿ ಮತ್ತೆ ಬಂದಿದೆ. ಪ್ರತೀ ಸಲ ದೀಪಾವಳಿ ಬಂದಾಗಲೂ ದೀಪಕ್ಕಿಂತ ಮೊದಲು ನೆನಪಾಗೋದೇ ಡಬ್ ಡಬ್ ಮಾಡುವ ಪಟಾಕಿಗಳ ಕಿವಿಗಡಚಿಕ್ಕುವ ಸದ್ದು. ಪಟಾಕಿಗಳ ಹೊಗೆ, ಅದರ ಸದ್ದು, ಅದರ ಗಾಳಿ […]

ಮಕ್ಕಳ “ಬಾಂಧವ್ಯ”ದ ಕತೆ ಹೇಳುವ ದ.ಕ ಯುವಕನ ಕಿರುಚಿತ್ರಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ

ಮೂವಿಮಸಾಲ (ಉಡುಪಿ xpress):  ರಾಜಸ್ಥಾನ್ ನ ಜೈಪುರದಲ್ಲಿ ನಡೆದ ಪ್ರತಿಷ್ಠಿತ Pinkcity ಇಂಟರ್ನ್ಯಾಷನಲ್ ಶಾರ್ಟ್ ಫಿಲಂ ಫೆಸ್ಟಿವಲ್ ನಲ್ಲಿ 2019 ರ ಸಾಲಿನ ಬೆಸ್ಟ್ ಸೋಶಿಯಲ್ ಅವೇರ್ನೆಸ್ ಫಿಲ್ಮ್ ಅವಾರ್ಡ್ಗ್ ಗೆ ದಕ್ಷಿಣ ಕನ್ನಡದ ವಿಟ್ಲ, ಅಡ್ಯ ನಡ್ಕದ ಯುವಕ ರಂಜಿತ್ ಅಡ್ಯನಡ್ಕ ನಿರ್ದೇಶಿಸಿದ ಚಿತ್ರ ‘ಬಾಂಧವ್ಯ’ಆಯ್ಕೆಯಾಗಿದೆ. ದೇಶ-ವಿದೇಶಗಳಿಂದ ಈ ಚಿತ್ರೋತ್ಸವಕ್ಕೆ ಎರಡು ಸಾವಿರಕ್ಕೂ ಹೆಚ್ಚಿನ ಕಿರುಚಿತ್ರಗಳು ಪೈಪೋಟಿ ನೀಡಿತ್ತು. ವಿದೇಶಫಿಲ್ಮ್ ವಿಭಾಗದಲ್ಲಿ 16, ಮತ್ತು ಇಂಡಿಯನ್ ಫಿಲ್ಮ್ ವಿಭಾಗದಲ್ಲಿ 35 ಕಿರುಚಿತ್ರಗಳು ಕೊನೆಯ ಹಂತದಲ್ಲಿ ಭಾರೀ […]

ಶ್ರೀಮುರಳಿ ಮತ್ತು ಶ್ರೀಲೀಲಾ ನಟನೆಯ “ಭರಾಟೆ”ಈ ವಾರ ರಿಲೀಸ್: ತಪ್ಪದೇ ನೋಡಿ ಈ ಮಾಸ್ ಸಿನಿಮಾ

ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಶ್ರೀಲೀಲಾ ನಟನೆಯ “ಭರಾಟೆ” ಸಿನಿಮಾ ಈ ವಾರ ತೆರೆಕಾಣುತ್ತಿದೆ. ಅ.18 ರಂದು  ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿರುವ ಈ ಸಿನಿಮಾವನ್ನು ಚೇತನ್ ಕುಮಾರ್ ನಿರ್ದೇಶಿಸಿದ್ದು ಭಾರಿ ಕುತೂಹಲ ಮೂಡಿಸಿದೆ. ಈಗಾಗಲೇ ಟ್ರೈಲರ್, ಹಾಡುಗಳ ಮೂಲಕ ಭರಾಟೆ ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಸೆಳೆಯುತ್ತಿದೆ. ಸಾಯಿಕುಮಾರ್, ಅಯ್ಯಪ್ಪ ಹಾಗೂ ರವಿಶಂಕರ್ ಸಹೋದರರು ಇದೇ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ನಟಿಸಿರುವುದು ವಿಶೇಷ. ಮಾಸ್ ಸಿನಿಮಾ ಮಿಸ್ ಮಾಡ್ಕೊಬೇಡಿ:  ಇದೊಂದು ಪಕ್ಕಾ ಮಾಸ್ ಕಥನ ಹೊಂದಿರೋ ಚಿತ್ರ. ಶ್ರೀಮುರಳಿ […]

ಡ್ರೀಮ್ಸ್‌ ಕ್ರಿಯೇಷನ್ಸ್‌ ಅರ್ಪಿಸುವ ರಾಕ್ಷಸ ‌ತುಳು ‌ಕಿರುಚಿತ್ರ ಬಿಡುಗಡೆ

ಉಡುಪಿ: ಡ್ರೀಮ್ಸ್‌ ಕ್ರಿಯೇಷನ್ಸ್‌ ಅರ್ಪಿಸುವ ‘ರಾಕ್ಷಸ’ ತುಳು ಕಿರುಚಿತ್ರವನ್ನು ಉಡುಪಿ ಮಹಿಳಾ ಪೊಲೀಸ್‌ ಠಾಣೆಯ ಪಿಎಸ್‌ಐ ವಾಯ್ಲೆಟ್‌ -ಮಿನಾ ಮಂಗಳವಾರ ಉಡುಪಿಯಲ್ಲಿ ಬಿಡುಗಡೆಗೊಳಿಸಿದರು. ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ೨೦ಕ್ಕೂ ಅಧಿಕ ಹವ್ಯಾಸಿ ಕಲಾವಿದರು ಸೇರಿಕೊಂಡು ೨೦೧೫ರಲ್ಲಿ ಡ್ರೀಮ್ಸ್‌ ಕ್ರಿಯೇಷನ್ಸ್‌ ತಂಡವನ್ನು ರಚಿಸಲಾಗಿದೆ. ಅತ್ಯಾಚಾರಕ್ಕೆ ಒಳಗಾದ ಹೆಣ್ಣಿನ ನರಕಯಾತೆಯನ್ನು ನೋಡಿ ಅತ್ಯಾಚಾರಿಗಳ ರಾಕ್ಷಸತನ ಸುಟ್ಟು ಹೋಗಲಿ ಎಂಬ ಉದ್ದೇಶದಿಂದ ಈ ಕಿರುಚಿತ್ರವನ್ನು ತಯಾರಿಸಿದ್ದೇವೆ ಎಂದು ನಿರ್ದೇಶಕ ಸುಕೇಶ್‌ ಕುಮಾರ್‌ ಹೇಳಿದರು. ಅಕ್ಕ ತಂಗಿ ಸಣ್ಣ ಸಂಸಾರದ […]

‘ಜೊತೆ ಜೊತೆಯಲಿ’ ಧಾರಾವಾಹಿ ಈ ವಾರವೂ ನಂ.1

ಕೆಲವೆ ಕೆಲವು ದಿನಗಳಲ್ಲಿ ಅತೀ ಹೆಚ್ಚು ಪ್ರೇಕ್ಷಕರ ಮನಗೆಲ್ಲುವ ಮೂಲಕ ಉಳಿದೆಲ್ಲ ಧಾರಾವಾಹಿಗಳನ್ನು ಹಿಂದಿಕ್ಕಿ ಟಾಪ್ ಒನ್ ಸ್ಥಾನ ಅಲಂಕರಿಸುವ ಮೂಲಕ ಜೊತೆ ಜೊತೆಯಲಿ ದಾಖಲೆ ನಿರ್ಮಿಸಿದೆ. ಧಾರಾವಾಹಿ ಪ್ರಪಂಚಕ್ಕೆ ರೀ ಎಂಟ್ರಿ ಕೊಟ್ಟ ವಿಷ್ಣು ದಾದನ ಅಳಿಯ ಅನಿರುದ್ಧ ಧಾರಾವಾಹಿ  ಹೀರೋ ಸಾಹಸಸಿಂಹ ವಿಷ್ಣುವರ್ಧನ್ ಅಳಿಯ ಅನಿರುದ್ಧ ಅಭಿನಯ, ಲುಕ್ ಮತ್ತು ಸ್ಟೈಲ್ ಗೆ ಕಿರುತೆರೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಧಾರಾವಾಹಿಯ ಪ್ರತಿಯೊಂದು ಪಾತ್ರವು ಪ್ರೇಕ್ಷಕರ ಮನಗೆದ್ದಿದೆ. ಪ್ರೇಕ್ಷಕರು ತಂಬ ಇಷ್ಟಪಟ್ಟಿರುವ ಜೊತೆ ಜೊತೆಯಲಿ ಎಲ್ಲಾ ಸಿರಿಯಲ್ […]