ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಂದನ್-ನಿವೇದಿತಾ

ಬಿಗ್ ಬಾಸ್ ಸೀಸನ್ 5ರ ವಿನ್ನರ್, ಕನ್ನಡ ರಾಪರ್ ಚಂದನ್ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ತಾವು ಇಷ್ಟ ಪಟ್ಟ ಹುಡುಗಿ ನಿವೇದಿತಾ ಗೌಡ ಜೊತೆಗೆ ಇಂದು ಚಂದನ್ ಶೆಟ್ಟಿ ಹೊಸ ಜೀವನ ಆರಂಭಿಸಿದ್ದಾರೆ.

ಇಂದು ಬೆಳಗ್ಗೆ 8.15 ರಿಂದ 9 ಗಂಟೆಯೊಳಗೆ ಇದ್ದ ಶುಭ ಮುಹೂರ್ತದಲ್ಲಿ ನಿವೇದಿತಾ ಗೌಡ ಕೊರಳಿಗೆ ಚಂದನ್ ಶೆಟ್ಟಿ ಮಾಂಗಲ್ಯಧಾರಣೆ ಮಾಡಿದರು.

ಮಾಧ್ಯಮಗಳ ಮುಂದೆ ಮಾತನಾಡಿದ ಅವರು ಇವತ್ತಿಂದ ಲೈಫ್ ಖಂಡಿತ ಬೇರೆ ತರಹ ಇರುತ್ತದೆ. ಇಷ್ಟು ದಿನ ಮನೆಯಲ್ಲಿ ಒಬ್ಬನೇ ಇರುತ್ತಿದ್ದೆ. ಇನ್ಮುಂದೆ ನನ್ನ ಜೊತೆ ಮನೆಯಲ್ಲಿ ಹೆಂಡತಿ ಕೂಡ ಇರುತ್ತಾಳೆ. ಬಹಳ ಖುಷಿಯಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು. ನನ್ನ ಜೀವನದಲ್ಲಿ ಇವತ್ತೊಂದು ಮರೆಯಲಾಗದ ದಿನವಾಗಿದೆ. ಕರ್ನಾಟಕ ಜನತೆಯ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ ಎಂದು ಹೇಳಿದರು.

ಹಾಗೂ ವಧು ನಿವೇದಿತಾ ಗೌಡ, ನಾನು ಇಷ್ಟಪಟ್ಟ ಹುಡುಗನೊಂದಿಗೆ ಮದುವೆಯಾಗಿರುವುದು ತುಂಬಾನೆ ಖುಷಿ ತಂದಿದೆ ಎಂದು ಹೇಳಿದರು.