ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ‘ಹನುಮಾನ್’: ಪ್ರತಿ ಟಿಕೆಟ್‌ನಿಂದ 5 ರೂ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿಕೆ

ಹೈದರಾಬಾದ್: ತೆಲುಗು ನಟ ತೇಜ ಸಜ್ಜ ಮತ್ತು ನಿರ್ದೇಶಕ ಪ್ರಶಾಂತ್ ವರ್ಮಾ ಅವರ ‘ಹನುಮಾನ್’ ಜನವರಿ 12 ರಂದು ಸಂಕ್ರಾಂತಿ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಹೈದರಾಬಾದ್ ನಲ್ಲಿ ನಡೆದ ಚಿತ್ರದ ಬಿಡುಗಡೆ ಪೂರ್ವ ಸಮಾರಂಭದಲ್ಲಿ ಮೆಗಾಸ್ಟಾರ್ ಚಿರಂಜೀವಿ ಭಾಗವಹಿಸಿ ‘ಹನುಮಾನ್’ ನಿರ್ಮಾಪಕರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರತಿ ಟಿಕೆಟ್‌ನಿಂದ ರೂ 5 ದೇಣಿಗೆ ನೀಡಲು ವಾಗ್ದಾನ ಮಾಡಿದ್ದಾರೆ ಮತ್ತು ತಂಡದ ವತಿಯಿಂದ ಈ ಸುದ್ದಿಯನ್ನು ತಿಳಿಸುವಂತೆ ಆಗ್ರಹಿಸಿದ್ದಾರೆ ಎಂದು ಮಾಹಿತಿ ನೀಡಿದ್ದರು. ಇಂದು ಚಿತ್ರದ […]

ಬಾಕ್ಸ್ ಆಫೀಸ್ ಸೂರೆಹೊಡಿಯುತ್ತಿರುವ ಪ್ರಭಾಸ್ ‘ಸಲಾರ್’: ಬಾಹುಬಲಿ ಅಬ್ಬರದೆದುರು ಮಂಕಾದ ಶಾರೂಖ್ ಖಾನ್ ‘ಡಂಕಿ’

ಹೊಂಬಾಳೆ ಫಿಲ್ಂಸ್ ನಿರ್ಮಾಣ, ಪ್ರಶಾಂತ್ ನೀಲ್ ನಿರ್ದೇಶನ ಹಾಗೂ ಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ಚಿತ್ರದ ಹುಚ್ಚು ಗಗನಕ್ಕೇರುತ್ತಿದೆ. ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸಲು ಜನಸಾಗರವೇ ಹರಿದು ಬರುತ್ತಿದೆ. ಅಷ್ಟೇ ಅಲ್ಲ, ಮೊದಲ ದಿನದಿಂದಲೂ ಈ ಚಿತ್ರ ಹೊಸ ದಾಖಲೆಗಳನ್ನು ಮಾಡುತ್ತಿದೆ. ವಾರಾಂತ್ಯದಲ್ಲೂ ಪ್ರಭಾಸ್ ನ ಸಲಾರ್ ಸಂಚಲನ ಮೂಡಿಸಿದೆ. ಬಿಡುಗಡೆಯಾದ ಮೊದಲ ದಿನದಿಂದಲೇ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿರುವ ‘ಸಲಾರ್’ ಸಿನಿಮಾದ ಗಳಿಕೆಯ ವೇಗ ಬುಲೆಟ್ ಗಿಂತಲೂ ಹೆಚ್ಚಾಗಿದೆ. 90 […]

ಹಿರಿಯ ಬಹುಭಾಷಾ ನಟಿ ಹೇಮಾ ಚೌಧರಿ ಆಸ್ಪತ್ರೆಗೆ ದಾಖಲು

ಭಾರತೀಯ ಚಿತ್ರರಂಗದ ಹಿರಿಯ ನಟಿ ಹೇಮಾ ಚೌಧರಿ ಅವರು ಮೆದುಳಿನ ರಕ್ತಸ್ರಾವದಿಂದ (ಬ್ರೈನ್ ಹ್ಯಾಮರೇಜ್) ಬಳಲುತ್ತಿದ್ದು, ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಹೇಮಾ ಚೌಧರಿ ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ತಿಳಿದು ಬಂದಿದೆ. ಪುತ್ರ ಐರ್ಲ್ಯಾಂಡ್‌ನಲ್ಲಿದ್ದಾರೆ. ಕುಟುಂಬಸ್ಥರು ಮಗನ ಬರುವಿಕೆಗಾಗಿ ಕಾಯುತ್ತಿದ್ದಾರೆ. ಎರಡು ದಿನಗಳ ಹಿಂದೆ ಬ್ರೈನ್ ಹ್ಯಾಮರೇಜ್​ ಆಗಿದ್ದು, ತೀವ್ರ ನಿಗಾ ಘಟಕದಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ. ಹೇಮಾ ಚೌಧರಿ ದಕ್ಷಿಣ ಭಾರತ ಚಲನಚಿತ್ರರಂಗದ ಹೆಸರಾಂತ ಕಲಾವಿದೆ. ಕನ್ನಡ […]

ಬಾಲಿವುಡ್​ ನಟ ಶ್ರೇಯಸ್ ತಲ್ಪಾಡೆಗೆ ಹೃದಯಾಘಾತ

ಮುಂಬೈ (ಮಹಾರಾಷ್ಟ್ರ): ಗುರುವಾರ ಮುಂಬೈನಲ್ಲಿ ಶೂಟಿಂಗ್ ಮುಗಿಸಿ ಹಿಂದುರುಗುವ ವೇಳೆ ನಟ ಶ್ರೇಯಸ್ ತಲ್ಪಾಡೆ ಗೆ ಹೃದಯಾಘಾತವಾಗಿದ್ದು ಆಂಜಿಯೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.ಚಿತ್ರೀಕರಣ ಮುಗಿಸಿ ಹಿಂದಿರುಗುವ ವೇಳೆ ಬಾಲಿವುಡ್​ ನಟ ಶ್ರೇಯಸ್ ತಲ್ಪಾಡೆ ಅವರಿಗೆ ಹೃದಯಾಘಾತವಾಗಿದೆ. ಸದ್ಯ ಶಸ್ತ್ರ ಚಿಕಿತ್ಸೆ ನಡೆದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೆಲ್‌ಕಮ್ ಟು ದ ಜಂಗಲ್ ಚಿತ್ರವು 2007ಎ ‘ವೆಲ್‌ಕಮ್’ ಮೂವೀ 1 ರ ಮುಂದುವರೆದ ​3 ನೇ ಭಾಗವಾಗಿದೆ. ಎರಡನೇ ಭಾಗ ‘ವೆಲ್‌ಕಮ್ ಬ್ಯಾಕ್’ 2015 ರಲ್ಲಿ ತೆರೆ ಕಂಡಿತು. ವೆಲ್‌ಕಮ್ […]

ಏಳು ವರ್ಷಗಳ ಬಳಿಕ ಮತ್ತೆ ಬರುತ್ತಿದೆ ಕಿರಿಕ್ ಶೆಟ್ಟರ “ಬ್ಯಾಚುಲರ್ ಪಾರ್ಟಿ”… ಈ ಬಾರಿ ಪಾರ್ಟಿ ಇನ್ನೂ ಜೋರು!!

ಏಳುವರ್ಷಗಳ ಹಿಂದೆ ರಕ್ಷಿತ್ ಶೆಟ್ಟಿ-ರಿಷಬ್ ಶೆಟ್ಟಿ ತಂಡದಿಂದ “ಕಿರಿಕ್ ಪಾರ್ಟಿ” ಹಿರಿ ಕಿರಿಯರೆನ್ನದೆ ಎಲ್ಲರನ್ನೂ ರಂಜಿಸಿ ಗಲ್ಲಾಪೆಟ್ಟಿಗೆಯನ್ನು ಧೂಳೀಪಟ ಮಾಡಿ ದಾಖಲೆ ಬರೆದಿತ್ತು. ಕಿರಿಕ್ ಪಾರ್ಟಿ ಬಿಡುಗಡೆಯಾಗಿ ಏಳು ವರ್ಷ ಕಳೆದಿದ್ದು, ಅಭಿಮಾನಿಗಳು ಕಿರಿಕ್ ಪಾರ್ಟಿ-2 ರ ಬಿಡುಗಡೆಗಾಗಿ ಕಾಯುತ್ತಲೇ ಇದ್ದರು. ಈ ಬಗ್ಗೆ ಚಿತ್ರದ ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ಮಾಹಿತಿ ನೀಡಿದ್ದು, ಈ ಬಾರಿ ಪಾರ್ಟಿ ಇನ್ನೂ ಜೋರು ಎಂದಿದ್ದು ಕುತೂಹಲವನ್ನು ಇನ್ನೂ ಕೆರಳಿಸಿದ್ದಾರೆ. ಬಹುತಾರಾಗಣದ ಬೆಂಬಲದೊಂದಿಗೆ, ಈ ಚಿತ್ರವು ಅಭಿಜಿತ್ ಮಹೇಶ್ ಅವರ […]