ಪುಷ್ಪಾ 2, ಜ. 30 ರಂದು OTT ಯಲ್ಲಿ ರಿಲೀಸ್: ದಾಖಲೆ ಮೊತ್ತಕ್ಕೆ ಸೇಲ್ ಆಯ್ತಾ ಸಿನಿಮಾ!

ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರ ಇನ್ನೂ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಸದ್ದು ಮಾಡುತ್ತಲೇ ಇದೆ. ಆದ್ರೂ ಚಿತ್ರ ರಿಲೀಸಾಗಿ ತುಂಬಾ ದಿನಗಳಾಗಿರುದರಿಂದ ಓಟಿಟಿಯಲ್ಲಿ ಆದಷ್ಟು ಬೇಗ ಚಿತ್ರ ನೋಡಲು ಅಭಿಮಾನಿಗಳು ಕಾತರಗೊಂಡಿದ್ದಾರೆ, ಈ ನಡುವೆ ಜನವರಿ ಅಂತ್ಯದ ವೇಳೆಗೆ ನೆಟ್‌ಫ್ಲಿಕ್ಸ್ನಲ್ಲಿ ಪುಷ್ಪ 2 ಸಿನಿಮಾ ಸ್ಟ್ರೀಮ್ ಆಗುವ ಸಾಧ್ಯತೆಯಿದೆ. ಸಿನಿಮಾ ಬಿಡುಗಡೆಯಾಗಿ 56 ದಿನಗಳಾದ ಬಳಿಕ ಓಟಿಟಿಗೆ ಬರಲಿದೆ.

ಜನವರಿ 17 ರಂದು ಚಿತ್ರತಂಡ 20 ನಿಮಿಷಗಳ ಹೆಚ್ಚುವರಿ ದೃಶ್ಯಗಳನ್ನು ಪುಷ್ಪ 2 ಗೆ ರೀಲೋಡ್ ಮಾಡಿ ಬಿಡುಗಡೆ ಮಾಡಿತ್ತು. ಈ ಸಿನಿಮಾ ಪ್ರೇಕ್ಷಕರಲ್ಲಿ ತೀವ್ರ ಕ್ರೇಜ್ ಸೃಷ್ಟಿಸಿತ್ತು. ಇದೀಗ ಪುಷ್ಪ ಓಟಿಟಿಗೆ ಬರುತ್ತಂತೆ ಎನ್ನುವ ಸುದ್ದಿ ಹರಡಿದೆ. ಓಟಿಟಿಯಲ್ಲಿ ಮೊದಲಿನ ಆವೃತ್ತಿ ಬಿಡುತ್ತಾರಾ, ಹೊಸ ಆವೃತ್ತಿ ಬಿಡುತ್ತಾರಾ ಎನ್ನುವ ಮಾಹಿತಿಯೂ ಲಭ್ಯವಾಗಿಲ್ಲ. ಅದಾಗ್ಯೂ ಭಾರೀ ಮೊತ್ತಕ್ಕೆ ಓಟಿಟಿ ಹಕ್ಕುಗಳು ಸೇಲ್ ಆಗಿದೆ ಎನ್ನುವ ಸುದ್ದಿ ಇದೆ. ಮೊದಲೇ ಭಾರೀ ಲಾಭದಲ್ಲಿರುವ ಚಿತ್ರತಂಡ, ಓಟಿಟಿ ಮೂಲಕ ಇನ್ನಷ್ಟು ಕೋಟಿ ಲಾಭ ಗಳಿಸಲಿದೆ ಎಂದು ಸಿನಿಮಾ ಪ್ರಿಯರು ಮಾತಾಡಿಕೊಳ್ಳುತ್ತಿದ್ದಾರೆ.