ಕಮಾಂಡೋ ಚಿತ್ರದ ಶೂಟಿಂಗ್ ವೇಳೆ ನಟಿ ರಾಗಿಣಿ ಕೈಗೆ ಗಾಯ

ನಟಿ ರಾಗಿಣಿ ದ್ವಿವೇದಿ ‘ನಾನು ಒಬ್ಬ ಭಾರತೀಯ’ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ತೆರೆಯ ಮೇಲೆ ಬರಲು ಸಜ್ಜಾಗಿದ್ದಾರೆ. ಕಮಾಂಡೋ ಚಿತ್ರದ ಚಿತ್ರೀಕರಣ ಚೆನ್ನೈನಲ್ಲಿ ನಡೆಯುತ್ತಿದ್ದು, ಶೂಟಿಂಗ್​ ಸಮಯದಲ್ಲಿ ರಾಗಿಣಿ ಅವರ ಕೈಗೆ ಬಲವಾದ ಪೆಟ್ಟು ಬಿದ್ದಿದೆ. ಹೀಗಾಗಿ ವೈದ್ಯರು 4 ದಿನಗಳ ಕಾಲ ಬೆಡ್ ರೆಸ್ಟ್​ನಲ್ಲಿರಲು ಹೇಳಿದ್ದಾರೆ ಎಂದು ವರದಿಯಾಗಿದೆ.

ಅರ್ಧ ಶತಕ ಬಾರಿಸಿದ ಕಾಂತಾರ: ಪಂಜುರ್ಲಿ ಮತ್ತು ಗುಳಿಗ ದೈವದ ಆಶೀರ್ವಾದವೆಂದ ರಿಷಬ್ ಶೆಟ್ಟಿ

ಜಗತ್ತಿನಾದ್ಯಂತ ಹಿರಿ-ಕಿರಿ ಎಂಬ ಬೇಧವಿಲ್ಲದೆ ಎಲ್ಲರ ಹೃದಯಗಳನ್ನು ಗೆದ್ದ ಕಾಂತಾರ ಚಿತ್ರವು ಯಶಸ್ವಿ 50 ದಿನಗಳನ್ನು ಪೂರೈಸಿದೆ. ಚಿತ್ರವೊಂದು ಎಷ್ಟು ಕೋಟಿ ಗಳಿಸಿತು ಎನ್ನುವುದನ್ನೇ ಲೆಕ್ಕ ಹಾಕುತ್ತಿದ್ದ ಈ ದಿನಗಳಲ್ಲಿ, ಹಿಂದಿನಂತೆ ಚಿತ್ರ ಎಷ್ಟು ದಿನ ಓಡಿತು ಎಂದು ಕೇಳುವುದನ್ನು ಮರೆತೇ ಬಿಟ್ಟಿದ್ದ ಕಾಲಘಟ್ಟದಲ್ಲಿ ಕಾಂತಾರ ಚಿತ್ರವು 50 ದಿನಗಳನ್ನು ಪೂರೈಸಿರುವುದು ಚಿತ್ರತಂಡದಲ್ಲಿ ಸಂತಸ ಮೂಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿ ಸಂತೋಷವನ್ನು ಹಂಚಿಕೊಂಡಿರುವ ನಟ ನಿರ್ದೇಶಕ ರಿಷಬ್ ಶೆಟ್ಟಿ,” ನಮಗೆ ದಿವ್ಯ ಸಂಭ್ರಮದ ಕ್ಷಣ. ಜಗತ್ತಿನಾದ್ಯಂತ […]

ರಾಜ್ ಬಿ ಶೆಟ್ಟಿ ನಿರ್ದೇಶನದ ಮೂರನೇ ಚಿತ್ರ ಸ್ವಾತಿ ಮುತ್ತಿನ ಮಳೆ ಹನಿಯೆ: 18 ದಿನಗಳಲ್ಲಿ ಚಿತ್ರೀಕರಣ ಪೂರ್ಣ

ಒಂದು ಮೊಟ್ಟೆಯ ಕಥೆ ಮತ್ತು ಗರುಡ ಗಮನ ವೃಷಭ ವಾಹನದಂತಹ ಚಿತ್ರಗಳನ್ನು ತೆರೆಗೆ ತಂದ ರಾಜ್ ಬಿ ಶೆಟ್ಟಿ ತಮ್ಮ ನಿರ್ದೇಶನದ ಮೂರನೇ ಚಿತ್ರ ಸ್ವಾತಿ ಮುತ್ತಿನ ಮಳೆ ಹನಿಯ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಶೂಟಿಂಗ್ ಪೂರ್ಣಗೊಂಡಿರುವ ಬಗ್ಗೆ ಅಧಿಕೃತ ಪೋಸ್ಟ್ ಅನ್ನು ನಿರ್ಮಾಣ ಸಂಸ್ಥೆ ಆಪಲ್ ಬಾಕ್ಸ್ ಸ್ಟುಡಿಯೋಸ್ ಪೋಸ್ಟ್ ಮಾಡಿದೆ. ನಟಿ ರಮ್ಯಾ ಅವರ ನಿರ್ಮಾಣ ಸಂಸ್ಥೆ ಇದಾಗಿದೆ. ಲೈಟರ್ ಬುದ್ದ ಫಿಲ್ಮ್ಸ್ ಸಹಯೋಗ ನೀಡಿದೆ. ಸ್ವಾತಿ ಮುತ್ತಿನ ಮಳೆ ಹನಿ ರಮ್ಯಾ ಅವರ ಪುನರಾಗಮನದ […]

ನಟ ಮಹೇಶ್ ಬಾಬ್ ಗೆ ಪಿತೃವಿಯೋಗ: ಒಂದೇ ವರ್ಷದಲ್ಲಿ ಕುಟುಂಬದ ಮೂವರ ಅಗಲಿಕೆ

ಹೈದರಾಬಾದ್: ತೆಲುಗು ಚಿತ್ರರಂಗದಲ್ಲಿ ‘ಸೂಪರ್‌ಸ್ಟಾರ್’ ಎಂದೇ ಪರಿಚಿತರಾಗಿದ್ದ ಹಿರಿಯ ನಟ ಕೃಷ್ಣ ಅವರು ಆಸ್ಪತ್ರೆಗೆ ದಾಖಲಾದ ಒಂದು ದಿನದ ಬಳಿಕ ಮಂಗಳವಾರ ಹೈದರಾಬಾದ್‌ನಲ್ಲಿ ನಿಧನರಾಗಿದ್ದಾರೆ. ಕೃಷ್ಣ ಜನಪ್ರಿಯ ನಟ ಮಹೇಶ್ ಬಾಬು ಅವರ ತಂದೆ. ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ಈ ವರ್ಷದ ಸೆಪ್ಟೆಂಬರ್‌ನಲ್ಲಿ ನಿಧನರಾಗಿದ್ದರು ಮತ್ತು ಅದಕ್ಕೂ ಮುನ್ನ ಅವರ ಹಿರಿಯ ಸಹೋದರ ರಮೇಶ್ ಬಾಬು ಜನವರಿಯಲ್ಲಿ ನಿಧನರಾಗಿದ್ದಾರೆ. ಒಂದೇ ವರ್ಷದಲ್ಲಿ ಕುಟುಂಬದ ಮೂವರನ್ನು ಮಹೇಶ್ ಕಳೆದುಕೊಂಡಿದ್ದಾರೆ. ಘಟ್ಟನಾನೇನಿ ಶಿವರಾಮ ಕೃಷ್ಣ ಮೂರ್ತಿ […]

ಆರ್‌ಆರ್‌ಆರ್-2 ಗೆ ಪೃಷ್ಠಭೂಮಿ ತಯಾರು: ಚಿತ್ರಕಥೆ ಬರೆಯುವುದಲ್ಲಿ ನಿರತರಾಗಿರುವ ವಿಜಯೇಂದ್ರ ಪ್ರಸಾದ್

ಈ ವರ್ಷದ ಮಾರ್ಚ್‌ನಲ್ಲಿ ಬಿಡುಗಡೆಯಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅಭಿನಯದ ಆರ್‌ಆರ್‌ಆರ್ ಚಿತ್ರವು ದೇಶ ಮತ್ತು ವಿದೇಶದ ಪ್ರೇಕ್ಷಕರನ್ನು ಚಿತ್ರಮಂದಿರದೆಡೆಗೆ ಆಕರ್ಷಿಸಿತ್ತು ಜೊತೆಗೆ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಕೂಡಾ ಮಾಡಿತ್ತು. ಇದೀಗ ಆರ್‌ಆರ್‌ಆರ್ ಭಾಗ 2 ತೆರೆಗೆ ಬರಲಿದೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಇಂಡಿಯಾ ಟುಡೇ ಗೆ ನೀಡಿದ ಇತ್ತೀಚಿನ ಸಂದರ್ಶನವೊಂದರಲ್ಲಿ, ಚಿತ್ರದ ನಿರ್ದೇಶಕ ಎಸ್‌ಎಸ್ ರಾಜಮೌಳಿಯವರು ಆರ್‌ಆರ್‌ಆರ್ 2 ಅಭಿವೃದ್ಧಿಯಲ್ಲಿದೆ ಎಂದು ದೃಢಪಡಿಸಿದ್ದಾರೆ ಮತ್ತು ರಾಜಮೌಳಿ ತಂದೆ ಈಗಾಗಲೇ ಉತ್ತರಭಾಗದ ಕಥೆ […]