ಐ.ಎಮ್.ಡಿ.ಬಿ ಟಾಪ್ 10 ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳ ಪಟ್ಟಿಯಲ್ಲಿ ಮೂರು ಕನ್ನಡದ ಚಿತ್ರಗಳು: ಚಾರ್ಲಿ777, ಕಾಂತಾರ, ಕೆ.ಜಿ.ಎಫ್ ಚಾಪ್ಟರ್-2

2022 ರ ಟಾಪ್ 10 ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳ ಪಟ್ಟಿಯನ್ನು ಐ.ಎಮ್.ಡಿ.ಬಿ ಪ್ರಸ್ತುತಪಡಿಸಿದೆ. ಇಂಟರ್ನೆಟ್ ಚಲನಚಿತ್ರ ಡೇಟಾಬೇಸ್ ಪ್ರಕಾರ ಜನವರಿ 1 ಮತ್ತು ನವೆಂಬರ್ 7, 2022 ರ ನಡುವೆ ಭಾರತದಲ್ಲಿ ಥಿಯೇಟರ್ ಗಳಲ್ಲಿ ಅಥವಾ ಡಿಜಿಟಲ್ ವೇದಿಕೆಯಲ್ಲಿ ಬಿಡುಗಡೆಯಾದ ಎಲ್ಲಾ ಚಲನಚಿತ್ರಗಳ ಪೈಕಿ ಕನಿಷ್ಠ 25,000 ಮತಗಳೊಂದಿಗೆ ಸರಾಸರಿ 7 ಅಥವಾ ಹೆಚ್ಚಿನ ಐ.ಎಮ್.ಡಿ.ಬಿ ಬಳಕೆದಾರರ ರೇಟಿಂಗ್ ಅನ್ನು ಹೊಂದಿರುವ ಚಿತ್ರಗಳಲ್ಲಿ 10 ಚಲನಚಿತ್ರಗಳು ಜನಪ್ರಿಯತೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿವೆ.

ಈ 10 ಚಿತ್ರಗಳ ಪೈಕಿ ಕನ್ನಡದ ಚಾರ್ಲಿ 777 ಗೆ 8.9, ಕಾಂತಾರ ಚಿತ್ರಕ್ಕೆ 8.6 ಮತ್ತು ಕೆ.ಜಿ.ಎಫ್ ಚಾಪ್ಟರ್-2 ಗೆ 8.4 ರೇಟಿಂಗ್ ದೊರೆತಿದೆ. ಕನ್ನಡದ 3 ಚಿತ್ರಗಳಲ್ಲಿ ಎರಡು ಕರಾವಳಿಯ ಪ್ರತಿಭೆಗಳ( ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ) ಚಿತ್ರಗಳು ಸ್ಥಾನ ಗಿಟ್ಟಿಸಿಕೊಂಡಿರುವುದು ಕರಾವಳಿಗರೆಲ್ಲರಿಗೂ ಸಂತೋಷ ಮತ್ತು ಹೆಮ್ಮೆಯ ವಿಚಾರ.

ಆರ್.ಆರ್.ಆರ್, ಕಶ್ಮೀರ್ ಫೈಲ್ಸ್, ವಿಕ್ರಮ್, ರಾಕೆಟ್ರಿ, ಮೇಜರ್, ಸೀತಾ ರಾಮಂ, ಪೊನ್ನಿಯನ್ ಸೆಲ್ವನ್ ಚಿತ್ರಗಳು ಟಾಪ್ 10 ಪಟ್ಟಿಯ ಇತರ ಚಿತ್ರಗಳಾಗಿವೆ.

ಈ ರೇಟಿಂಗ್ ಗಳನ್ನು ಪ್ರಪಂಚದಾದ್ಯಂತ ಐ.ಎಮ್.ಡಿ.ಬಿ ಯ 200 ಮಿಲಿಯನ್‌ಗಿಂತಲೂ ಹೆಚ್ಚು ಮಾಸಿಕ ಸಂದರ್ಶಕರ ನೈಜ ಪುಟ ವೀಕ್ಷಣೆಗಳಿಂದ ನಿರ್ಧರಿಸಲಾಗುತ್ತದೆ. ಈ ವಿಶೇಷ ಮತ್ತು ನಿರ್ಣಾಯಕ ಡೇಟಾವನ್ನು ಐ.ಎಮ್.ಡಿ.ಬಿ ಚಲನಚಿತ್ರ ಶ್ರೇಯಾಂಕಗಳಿಂದ ಪಡೆಯಲಾಗಿದ್ದು, ಇದನ್ನು ವರ್ಷವಿಡೀ ವಾರಕ್ಕೊಮ್ಮೆ ನವೀಕರಿಸಲಾಗುತ್ತದೆ ಎಂದು ಐ.ಎಮ್.ಡಿ.ಬಿ ತಿಳಿಸಿದೆ.