ಶಿರ್ವದಲ್ಲೊಬ್ಬ ತದ್ರೂಪಿ ರಿಷಭ್ ಶೆಟ್ಟಿ: ಕಾಂತಾರದ ಶಿವ ಪಾತ್ರಧಾರಿ ರಿಷಭ್ ರೀತಿ ಕಾಣುವ ವ್ಯಕ್ತಿಗೆ ಬೇಸ್ತು ಬಿದ್ದ ಜನ!

ಶಿರ್ವ: ಉಡುಪಿಯ ಶಿರ್ವದ ಪಂಜಿಮಾರಿನಲ್ಲೊಬ್ಬ ಹೆಚ್ಚುಕಡಿಮೆ ಕಾಂತಾರದ ಶಿವ ಪಾತ್ರಧಾರಿಯಾದ ರಿಷಭ್ ಶೆಟ್ಟರಂತೆಯೆ ಕಾಣುವ ವ್ಯಕ್ತಿಯೊಬ್ಬರಿದ್ದಾರೆ. ದೂರದಿಂದ ನೋಡಿದಾಗ ರಿಷಭ್ ಶೆಟ್ರೇ ಬಂದರೇನೋ ಅನ್ನಿಸಿಬಿಡುತ್ತದೆ. ಆದರೆ ಹತ್ತಿರಹೋಗಿ ನೋಡಿದಾಗ ಇದು ರಿಷಭ್ ಶೆಟ್ರಲ್ಲ ಬದಲಿಗೆ ಅವರ ತದ್ರೂಪಿ ಎನ್ನುವುದು ಗೊತ್ತಾಗಿ ಜನ ಬೇಸ್ತು ಬೀಳುತ್ತಿದ್ದಾರೆ! ಶಿರ್ವದ ಪಂಜಿಮಾರಿನ ನಿವಾಸಿ ಪ್ರದೀಪ್ ಆಚಾರ್ಯ ಇವರೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿರುವ ಜ್ಯೂನಿಯರ್ ರಿಷಭ್ ಶೆಟ್ಟಿ. ಪ್ರಸ್ತುತ ಇವರು ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಕಾಂತಾರದ ಶಿವ ಪಾತ್ರದಲ್ಲಿ […]
ಕನ್ನಡದ ಬಗ್ಗೆ ಅಗೌರವದ ವರ್ತನೆ: ರಶ್ಮಿಕಾ ಮಂದಣ್ಣ ಸಿನಿಮಾ ನಿಷೇಧಕ್ಕೆ ಕನ್ನಡ ಚಿತ್ರರಂಗ ಚಿಂತನೆ?

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ರಶ್ಮಿಕಾ ಮಂದಣ್ಣ ನಿರಂತರವಾಗಿ ಕನ್ನಡ ಮತ್ತು ಕನ್ನಡಿಗರಿಗೆ ಅಗೌರವ ತೋರುತ್ತಿರುವುದರಿಂದ ಅವರ ಚಲನಚಿತ್ರಗಳನ್ನು ಕರ್ನಾಟಕದಿಂದ ಶಾಶ್ವತವಾಗಿ ನಿಷೇಧಿಸಲು ಕನ್ನಡ ಸಂಘಟನೆಗಳು ಮುಂದಾಗಿವೆ. ಕನ್ನಡ ಸಂಘಟನೆಗಳು, ಥಿಯೇಟರ್ ಮಾಲೀಕರು ಮತ್ತು ಕನ್ನಡ ಚಿತ್ರ ಮಂಡಳಿಯ ನಡುವೆ ಈ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ ಎಂದು ಬಾಕ್ಸ್ ಆಫೀಸ್ ಸೌತ್ ಇಂಡಿಯನ್ ಟ್ವೀಟ್ ಮಾಡಿದೆ. ಇದು ಇದೇ ರೀತಿ ಮುಂದುವರಿದಲ್ಲಿ ಪುಷ್ಪ2 ಕರ್ನಾಟಕದ ಯಾವುದೇ ಭಾಗದಲ್ಲಿ ಬಿಡುಗಡೆಯಾಗುವುದಿಲ್ಲ. ಇದರಿಂದ ನಿರ್ಮಾಪಕರಿಗೆ ಮತ್ತು ಕರ್ನಾಟಕದ ಅಲ್ಲು ಅರ್ಜುನ್ […]
ನಾಳೆ ಅಮೆಜಾನ್ ಪ್ರೈಮ್ ವೀಡಿಯೋನಲ್ಲಿ ಕಾಂತಾರ ಬಿಡುಗಡೆ

ಜಗತ್ತಿನಾದ್ಯಂತ ಸದ್ದು ಮಾಡಿ ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆ ಹೊಡೆದ ಕಾಂತಾರ ಚಿತ್ರ ಅಮೆಜಾನ್ ಪ್ರೈಮ್ ವೀಡಿಯೋ ನಲ್ಲಿ ನಾಳೆ ಬಿಡುಗಡೆ ಹೊಂದುತ್ತಿದೆ. ಚಿತ್ರದ ಹಕ್ಕನ್ನು ಪಡೆಯಲು ಅಮೆಜಾನ್ ಪ್ರೈಮ್ ಎಷ್ಟು ಬೆಲೆ ತೆತ್ತಿದೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಇನ್ನು ಎಲ್ಲಿ ಯಾವಾಗ ಬೇಕಿದ್ದರೂ ಕಾಂತಾರ ಚಲನಚಿತ್ರವನ್ನು ಕುಳಿತಲ್ಲಿಂದಲೇ ನೋಡಬಹುದು.
ಕಾಂತಾರ ದೈವನರ್ತಕ ನವೀನ್ ಬೊಂದೆಲ್ ಗೆ ಸಲಾರ್ ಚಿತ್ರದಲ್ಲಿ ನಟಿಸುವ ಅವಕಾಶ

ಕಾಂತಾರ ಸಿನಿಮಾದಲ್ಲಿ ದೈವನರ್ತಕನಾಗಿ ನಟಿಸಿದ್ದ ನವೀನ್ ಬೊಂದೆಲ್ ಅವರಿಗೆ ಸಲಾರ್ ಸಿನಿಮಾದಲ್ಲಿ ನಟಿಸಲು ಅವಕಾಶ ದೊರಕಿದೆ ಎಂದು ವರದಿಯಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ನಟನೆಯ ಹೊಂಬಾಳೆ ಫಿಲಂಸ್ ನ ಸಲಾರ್ ಚಿತ್ರದ ಒಂದು ಪಾತ್ರದಲ್ಲಿ ನಟಿಸಲು ನವೀನ್ ಅವರಿಗೆ ಅವಕಾಶ ದೊರೆತಿದೆ. ನವೀನ್ ಬೊಂದೆಲ್ ಒಬ್ಬ ನಟ ಮತ್ತು ನಿರ್ದೇಶಕ. ಕಾಂತಾರ ಚಿತ್ರದಲ್ಲಿ ಕಾಣಿಸಿಳ್ಳುವುದಕ್ಕೂ ಮುನ್ನ ಅವರು ಹಲವಾರು ನಾಟಕಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಬಸ್ ಕಂಡಕ್ಟರ್ ಆಗಿಯೂ ಕೆಲಸ ಮಾಡಿದ್ದಾರೆ. ಮಂಗಳೂರಿನ ಕೆನರಾ ಹೈಸ್ಕೂಲ್ ಮತ್ತು […]
ಜಗತ್ತಿನ ಮೊದಲ ಸುಪರ್ ಹೀರೋ ಆಧಾರಿತ ತೆಲುಗು ಚಲನಚಿತ್ರ ‘ಹನು-ಮಾನ್’ ಟ್ರೈಲರ್ ಬಿಡುಗಡೆ: ಕೈಮುಗಿದ ನೆಟ್ಟಿಗರು

‘ಹನು ಮಾನ್’ ಪ್ರಶಾಂತ್ ವರ್ಮಾ ಬರೆದು ನಿರ್ದೇಶಿಸಿದ ಮುಂಬರುವ ಭಾರತೀಯ ತೆಲುಗು ಭಾಷೆಯ ಸೂಪರ್ ಹೀರೋ ಚಿತ್ರವಾಗಿದೆ. ಪ್ರೈಮ್‌ಶೋ ಎಂಟರ್‌ಟೈನ್‌ಮೆಂಟ್ ನಿರ್ಮಿಸಿರುವ ಈ ಚಿತ್ರದಲ್ಲಿ ತೇಜ ಸಜ್ಜ ಮತ್ತು ಅಮೃತಾ ಅಯ್ಯರ್ ನಟಿಸಿದ್ದಾರೆ. ಈ ಚಿತ್ರವು ಕಾಲ್ಪನಿಕ ಗ್ರಾಮ ಅಂಜನಾದ್ರಿಯ ಮೇಲೆ ಚಿತ್ರಿತವಾಗಿದೆ ಮತ್ತು ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್ ನ ಭಾಗವಾಗಿದೆ. ಕೆ ನಿರಂಜನ್ ರೆಡ್ಡಿ ಚಿತ್ರದ ನಿರ್ಮಾಪಕರಾಗಿದ್ದಾರೆ. ಚಿತ್ರವು ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಚಿತ್ರದ ಶೀರ್ಷಿಕೆಯ ಬಗ್ಗೆ ಡೆಕ್ಕನ್ ಕ್ರೋನಿಕಲ್ ಜೊತೆ ಮಾತನಾಡಿದ […]