ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ: ಕಿರಿಕ್ ಪಾರ್ಟಿಯಂತೆ ಕಚಗುಳಿಯಿಡುವ ಕಥೆಯೊಂದಿಗೆ ಬರುತ್ತಿದೆ ಪರಂವಃ ಪಿಕ್ಚರ್ಸ್

ರಕ್ಷಿತ್ ಶೆಟ್ಟಿಯ ಚಿತ್ರ ನಿರ್ಮಾಣ ಸಂಸ್ಥೆ ಪರಂವಃ ಪಿಕ್ಚರ್ಸ್ ಹೊಸ ಸಿನಿಮಾದೊಂದಿಗೆ ಮುಂದೆ ಬರುತ್ತಿದೆ. ಈ ಬಗ್ಗೆ ಕಿರಿಕ್ ಹುಡುಗ ರಕ್ಷಿತ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

ನಾವು ಹಿಂದೆ ಪ್ರಸ್ತುತಪಡಿಸಿದ್ದಕ್ಕಿಂತ ವಿಭಿನ್ನವಾದ ಪ್ರಕಾರದಿಂದ ಅಸಾಧಾರಣವಾಗಿ ನಿರ್ಮಿಸಿದ ಚಲನಚಿತ್ರ. ಸೃಜನಾತ್ಮಕವಾಗಿ ಪ್ರಚೋದಿತ ಯುವಕರ ಭಾವೋದ್ರಿಕ್ತ ಗುಂಪು ಈ ಉಲ್ಲಾಸದ ಮತ್ತು ತಂಗಾಳಿಯ ಚಲನಚಿತ್ರವನ್ನು ರಚಿಸಲು ಒಗ್ಗೂಡಿದೆ. ಅದು ನಿಮ್ಮನ್ನು ಭೂತಕಾಲದ ಸುಖದ ಸ್ಮೃತಿಯ ಹಾದಿಯಲ್ಲಿ ನಡೆಸುವುದು ಖಚಿತ. ಈ ಚಿತ್ರವನ್ನು ಚಿತ್ರಿಸಿದ ರೀತಿಯಲ್ಲಿ, ದೇಶದ ಯಾವುದೇ ಚಲನಚಿತ್ರವು ಈ ಶೈಲಿಯನ್ನು ಮೊದಲು ಅನ್ವೇಷಿಸಿಲ್ಲ ಎಂದು ನಾನು ವಿಶ್ವಾಸದಿಂದ ಹೇಳಿಕೊಳ್ಳಬಲ್ಲೆ. ನಮ್ಮ ಇಂಡಸ್ಟ್ರಿಯು ಹೆಮ್ಮೆ ಪಡುವ ಇನ್ನೊಂದು ಚಿತ್ರ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪರಂವಾ ಪಿಕ್ಚರ್ಸ್ ಹೆಮ್ಮೆಯಿಂದ ಪ್ರಸ್ತುತಪಡಿಸುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಪ್ರೀತಿಯಿರಲಿ ಎಂದು ರಕ್ಷಿತ್ ಹೇಳಿದ್ದಾರೆ.

ಚಿತ್ರವನ್ನು ನಿತಿನ್ ಕೃಷ್ಣಮೂರ್ತಿ ಬರೆದು ನಿರ್ದೇಶಿಸಿದ್ದಾರೆ. ಅರವಿಂದ್ ಎಸ್ ಕಶ್ಯಪ್ ಡಿಒಪಿ, ಬಿ ಅಜನೀಶ್ ಲೋಕನಾಥ್ ಸಂಗೀತ, ಸುರೇಶ್ ಸಂಕಲನ, ಧರಣಿ ಗಂಗೆ ಪುತ್ರ ಕಲಾನಿರ್ದೇಶನವಿದೆ.

ಹುಡುಗರ ಹಾಸ್ಟೆಲ್ ಜೀವನದ ಚಿತ್ರಣವು ಚಿತ್ರದಲ್ಲಿರಲಿದೆ ಎನ್ನುವುದು ಚಿತ್ರದ ಟ್ರೈಲರ್ ನಿಂದ ತಿಳಿದುಬರುತ್ತಿದೆ.