ಈ ತಿಂಗಳ ಕೊನೆಯಲ್ಲಿ 3 ಸಿನಿಮಾಗಳು ತೆರೆಗೆ

ಸೆಪ್ಟೆಂಬರ್ 28ರಂದು ಬಹುನಿರೀಕ್ಷಿತ ಮೂರು ಸಿನಿಮಾಗಳು ಬಿಡುಗಡೆಯಾಗಲಿವೆ.ಭಾರತೀಯ ಚಿತ್ರರಂಗದಲ್ಲಿ ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಅತ್ಯುತ್ತಮ ಸಿನಿಮಾಗಳು ತೆರೆ ಕಾಣುತ್ತಿವೆ. ಕಾಂತಾರ, ಕೆಜಿಎಫ್, ಪಠಾಣ್, ಜೈಲರ್ ಹೀಗೆ ಸಾಕಷ್ಟು ಸಿನಿಮಾಗಳು ಪ್ರೇಕ್ಷಕರ ಮನರಂಜಿಸುವಲ್ಲಿ ಯಶಸ್ವಿಯಾಗಿವೆಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವಲ್ಲಿಯೂ ಸಫಲವಾಗಿವೆ. ವಿಶ್ವಾದ್ಯಂತ ಭಾರತದ ಸಿನಿಮಾಗಳು ತಿಂಗಳುಗಟ್ಟಲೆ ಪ್ರದರ್ಶನ ಕಾಣುತ್ತಿವೆ. ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ ಇದೀಗ ಎಲ್ಲೆಡೆ ಧೂಳೆಬ್ಬಿಸುತ್ತಿದೆ. ಈ ನಡುವೆ ಇದೇ ತಿಂಗಳು ಮತ್ತೆ ಮೂರು ಸಿನಿಮಾಗಳು ಒಂದೇ ದಿನ ಸಿಲ್ವರ್ ಸ್ಟ್ಕೀನ್‌ನಲ್ಲಿ ಮಿಂಚಲು ಸಜ್ಜಾಗಿವೆ. […]
ಶಾರುಖ್ ಖಾನ್ರ ‘ಜವಾನ್’ ಸಿನಿಮಾ..ಬಾಕ್ಸ್ ಆಫೀಸ್ನಲ್ಲಿ 8 ದಾಖಲೆ

ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಂಡ ಚಿತ್ರ ಕಲೆಕ್ಷನ್ ವಿಚಾರದಲ್ಲಿ ಅಬ್ಬರದ ಓಟ ಮುಂದುವರೆಸಿದೆ. ಶಾರುಖ್ ಸೇರಿದಂತೆ ನಯನತಾರಾ, ವಿಜಯ್ ಸೇತುಪತಿ ಅವರಿಗೂ ‘ಜವಾನ್’ ಉತ್ತಮ ಹೆಸರು ತಂದುಕೊಟ್ಟಿದೆ. ಬಿಡುಗಡೆಯಾದ ಐದೇ ದಿನಗಳಲ್ಲಿ ಹಲವು ದಾಖಲೆಗಳನ್ನು ಮುರಿದಿದೆ. ಜವಾನ್ ದೇಶೀಯವಾಗಿ ಮತ್ತು ಜಾಗತಿಕವಾಗಿ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ಅವುಗಳು ಹೀಗಿವೆ..ತಮಿಳು ಖ್ಯಾತ ನಿರ್ದೇಶಕ ಅಟ್ಲೀ ಮತ್ತು ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಕಾಂಬೋದಲ್ಲಿ ಮೂಡಿಬಂದ ‘ಜವಾನ್’ ಸಿನಿಮಾ ಸೆಪ್ಟೆಂಬರ್ 7, ಗುರುವಾರದಂದು ಬಿಡುಗಡೆಯಾಗಿ ವಿಶ್ವದಾದ್ಯಂತ […]
ರಜನಿಕಾಂತ್ ಮುಂದಿನ ಸಿನಿಮಾ ಲೋಕೇಶ್ ಕನಕರಾಜ್ ಜೊತೆ ಘೋಷಣೆ

ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ ಚಿತ್ರ ಇನ್ನೂ ಕೆಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಆಗಸ್ಟ್ 10ರಂದು ತೆರೆಕಂಡು ವಿಶ್ವಾದ್ಯಂತ 600 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿ ದಾಖಲೆ ಸೃಷ್ಟಿಸಿದೆ. ಈ ಮೂಲಕ ರಜನಿಕಾಂತ್ ಅವರ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಗಳಿಸಿದ ಸಿನಿಮಾಗಳಲ್ಲಿ ಇದು ಒಂದಾಗಿದೆ. ಇದರ ಹೊರತಾಗಿ ತಲೈವಾ ಮುಂದಿನ ಪ್ರಾಜೆಕ್ಟ್ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.ಕಾಲಿವುಡ್ ಸೂಪರ್ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿದೆ.ಸೂಪರ್ಸ್ಟಾರ್ ರಜನಿಕಾಂತ್ ಮತ್ತು ಸ್ಟಾರ್ […]
ಚಿತ್ರತಂಡದಿಂದ ಅಧಿಕೃತ ಘೋಷಣೆ : ಬಹುನಿರೀಕ್ಷಿತ ‘ಪುಷ್ಪ 2’ ರಿಲೀಸ್ಗೆ ಮುಹೂರ್ತ ಫಿಕ್ಸ

ಪುಷ್ಪ: ದಿ ರೈಸ್ ಹಿಟ್: 2021ರ ಡಿಸೆಂಬರ್ 17 ರಂದು ಪುಷ್ಪ: ದಿ ರೈಸ್ ತೆರೆಗೆ ಬಂದಿತ್ತು. ಚಿತ್ರವು ಜಗತ್ತಿನಾದ್ಯಂತ ಸಿನಿರಸಿಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಸುಕುಮಾರನ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಎಲ್ಲರನ್ನೂ ಸೆಳೆದಿತ್ತು. ಕೆಂಪು ಚಂದನ ಮರದ ಕಳ್ಳಸಾಗಣೆ ಕುರಿತ ಕಥಾವಸ್ತುವನ್ನು ಸಿನಿಮಾ ಹೊಂದಿತ್ತು. ಡಿಫರೆಂಟ್ ಪೋಸ್ಟರ್ ಮೂಲಕ ಪುಷ್ಪ 2 ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ಸೀಕ್ವೆಲ್ ನೋಡಲು ಸಿನಿ ಪ್ರೇಮಿಗಳು […]
ಬ್ರೆಜಿಲ್ ಅಧ್ಯಕ್ಷ : ‘ಆರ್ಆರ್ಆರ್ ನನ್ನ ಮೆಚ್ಚಿನ ಚಿತ್ರ’

ಇದೀಗ ಬ್ರೇಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೋ ಲುಲಾ ಡಾ ಸಿಲ್ವಾ (Luiz Inácio Lula da Silva) ಸಿನಿಮಾ ಕುರಿತು ಮಾತನಾಡಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಂಭೆಯಲ್ಲಿ ಭಾಗಿಯಾಗಿರುವ ಬ್ರೆಜಿಲ್ ಅಧ್ಯಕ್ಷರು ಆರ್ಆರ್ಆರ್ ವಿಷಯ ಪ್ರಸ್ತಾಪಿಸಿದ್ದಾರೆ. ಇದು ನನ್ನ ಮೆಚ್ಚಿನ ಭಾರತೀಯ ಸಿನಿಮಾ. ಚಿತ್ರ ಅದ್ಭುತವಾಗಿದೆ ಎಂದು ಚಿತ್ರತಂಡವನ್ನು ಶ್ಲಾಘಿಸಿದ್ದಾರೆ. ಸಿನಿ ಗಣ್ಯರು ಮಾತ್ರವಲ್ಲದೇ ಕ್ರೀಡಾಪಟುಗಳು, ರಾಜಕಾರಣಿಗಳೂ ಸೇರಿದಂತೆ ವಿಭಿನ್ನ ಕ್ಷೇತ್ರಗಳ ಗಣ್ಯರು ಆರ್ಆರ್ಆರ್ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ‘RRR’…ವಿಶೇಷ ಪರಿಚಯ ಬೇಕಿಲ್ಲ. ಭಾರತ ಮಾತ್ರವಲ್ಲದೇ ಜಾಗತಿಕ […]