ಸ್ಯಾಂಡಲ್​ವುಡ್​ಗೆ ರಾಧಿಕಾ ಕುಮಾರಸ್ವಾಮಿ ಸಹೋದರನ​ ಎಂಟ್ರಿ : ಹಾರರ್​ ಕಥೆಗೆ ರವಿರಾಜ್ ನಿರ್ಮಾಪಕ

ಸೌಂದರ್ಯ ಮತ್ತು ಅಭಿನಯದಿಂದಲೇ ಕನ್ನಡ ಸಿನಿಮಾರಂಗದಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟಿ ರಾಧಿಕಾ ಕುಮಾರಸ್ವಾಮಿ. ನಟನೆ ಜೊತೆಗೆ ನಿರ್ಮಾಣದಲ್ಲೂ ಗುರುತಿಸಿಕೊಂಡಿರುವ ಸ್ಯಾಂಡಲ್​ವುಡ್​ ಸ್ವೀಟಿ, ಶಮಿಕಾ ಎಂಟರ್​ಪ್ರೈಸಸ್​ ಮೂಲಕ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಆದರೆ, ರವಿರಾಜ್​ ಅವರಿಗೆ ಸಿಮಾ ರಂಗ ಹೊಸತೇನಲ್ಲ. ರಾಧಿಕಾ ಅವರ ಶಮಿಕಾ ಎಂಟರ್​ಪ್ರೈಸಸ್ ಮೂಲಕ ಸಹ ನಿರ್ಮಾಪಕರಾಗಿ ಕೆಲಸ ಮಾಡಿರುವ ಅನುಭವ ಅವರಿಗಿದೆ. ‘ಲಕ್ಕಿ’, ‘ಸ್ವೀಟಿ ನನ್ನ ಜೋಡಿ’, ಭೈರಾದೇವಿ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಚಿತ್ರ ವಿತರಣೆ ವಿಭಾಗದಲ್ಲೂ ಕೈಯಾಡಿಸಿದ್ದಾರೆ. ಆದರೀಗ ರವಿರಾಜ್​ ಸ್ವತಂತ್ರ ನಿರ್ಮಾಪಕರಾಗಿ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ.

ನಟಿ ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್​ ನಿರ್ಮಾಪಕರಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡುತ್ತಿದ್ದಾರೆ. ಇದೀಗ ಅವರ ಸಹೋದರ ರವಿರಾಜ್​ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ನಿರ್ಮಾಪಕನಾಗಿ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ.ರವಿರಾಜ್​ ತಮ್ಮದೇ ಆದ ಹೊಸ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದ್ದು, ಈಗಾಗಲೇ ಮೊದಲ ಸಿನಿಮಾದ ಚಿತ್ರೀಕರಣ ಕೂಡ ಮುಗಿಸಿದ್ದಾರೆ. ತಮ್ಮ ಕನಸಿನ ನಿರ್ಮಾಣ ಸಂಸ್ಥೆಗೆ ‘ಶ್ರೀ ದುರ್ಗಾಪರಮೇಶ್ವರಿ ಪ್ರೊಡಕ್ಷನ್’ ಎಂದು ಹೆಸರಿಟ್ಟಿದ್ದಾರೆ. ಅಂದ ಹಾಗೆ, ಇದು ರವಿರಾಜ್​ ಅವರ ತಂದೆಯ ಕನಸಿನ ಬ್ಯಾನರ್​. ಅಪ್ಪನ ಕನಸನ್ನು ‘ಶ್ರೀ ದುರ್ಗಾಪರಮೇಶ್ವರಿ ಪ್ರೊಡಕ್ಷನ್’ ಮೂಲಕ ರವಿರಾಜ್​ ನನಸು ಮಾಡಿದ್ದಾರೆ. ಈ ಬ್ಯಾನರ್​ ಅಡಿ ಮೊದಲ ಸಿನಿಮಾವಾಗಿ ಹಾರರ್​ ಚಿತ್ರ ಬಿಡುಗಡೆಗೆ ತಯಾರಾಗಿದೆ.

ರವಿರಾಜ್​ ‘ಶ್ರೀ ದುರ್ಗಾಪರಮೇಶ್ವರಿ ಪ್ರೊಡಕ್ಷನ್’ ಬ್ಯಾನರ್​ ಮೂಲಕ ಉತ್ತಮ ಸಿನಿಮಾಗಳನ್ನು ಮಾಡುವ ಆಸೆ ಇಟ್ಟುಕೊಂಡಿದ್ದಾರೆ. ವರ್ಷಕ್ಕೆ ಸಾಕಷ್ಟು ಚಿತ್ರಗಳನ್ನು ನಿರ್ಮಾಣ ಮಾಡಿ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಬೇಕು ಅನ್ನೋದು ಅವರ ಕನಸು. ಸದ್ಯ ಹಾರರ್​ ಸಿನಿಮಾ ಮೂಲಕ ಮೊದಲ ಹೆಜ್ಜೆ ಇಟ್ಟಿದ್ದಾರೆ. ಸಹೋದರಿ ರಾಧಿಕಾ ಈಗಾಗಲೇ ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ತಂಗಿಯ ಹಾಗೆಯೇ ಅಣ್ಣ ಕೂಡ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಲಿ ಎನ್ನುವುದು ಸಿನಿ ಪ್ರೇಮಿಗಳ ಆಶಯ.ಇದುವರೆಗೂ ಕಂಡಿರದ, ಕೇಳಿರದ ಹಾರರ್​ ಸಬ್ಜೆಕ್ಟ್​ ಮೂಲಕ ಅಭಿಮಾನಿಗಳನ್ನು ಭಯ ಬೀಳಿಸಲು ರವಿರಾಜ್​ ಹಾಗೂ ತಂಡ ತಯಾರಾಗಿದ್ದಾರೆ. ರವಿರಾಜ್​ ಚೊಚ್ಚಲ ನಿರ್ಮಾಣದ ಈ ಸಿನಿಮಾದಲ್ಲಿ ದೊಡ್ಡ ದೊಡ್ಡ ಸ್ಟಾರ್ಸ್​ ನಟಿಸಿದ್ದಾರೆ. ಸ್ಯಾಂಡಲ್​ವುಡ್​ನ ಖ್ಯಾತ ನಿರ್ದೇಶಕ ಈ ಹಾರರ್​ ಚಿತ್ರಕ್ಕೆ ಆಯಕ್ಷನ್​ ಕಟ್​ ಹೇಳಿದ್ದಾರೆ. ಸಿನಿಮಾದಲ್ಲಿ ಯಾರೆಲ್ಲಾ ನಟಿಸಿದ್ದಾರೆ? ನಿರ್ದೇಶಕ ಯಾರು? ಎಂಬೆಲ್ಲಾ ಪ್ರಶ್ನೆಗಳನ್ನು ನಿರ್ಮಾಪಕ ರವಿರಾಜ್​ ಸೀಕ್ರೆಟ್​ ಆಗಿಯೇ ಇಟ್ಟಿದ್ದಾರೆ. ಈ ಹಾರರ್​ ಕಥೆಯಾಧಾರಿತ ಚಿತ್ರ ಅತೀ ಶೀಘ್ರದಲ್ಲೇ ರವಿರಾಜ್​ ಪ್ರೇಕ್ಷಕರ ಮುಂದೆ ಇಡಲಿದ್ದಾರೆ.