“ಪಂಚಾಯತ್” ಅಭಿಮಾನಿಗಳಿಗೆ ಸಿಹಿಸುದ್ದಿ- ಸದ್ಯದಲ್ಲೇ ಹೊರಬರಲಿದೆ ಸೀಸನ್-5

ಅಮೆಜಾನ್ ಪ್ರೈಂ ನಲ್ಲಿ ಸ್ಟ್ರೀಮಿಂಗ್ ಆಗಿ ವಿಭಿನ್ನ ಕಥೆಗಳಿಂದ ಹಾಸ್ಯಭರಿತ ಸನ್ನಿವೇಶಗಳಿಂದ ಫುಲ್ ಫೇಮಸ್ ಆಗಿದೆ “ಪಂಚಾಯತ್ ವೆಬ್ ಸೀರೀಸ್. ಹಳ್ಳಿಯ ಪಂಚಾಯತಿ ಕಾರ್ಯಾಲಯಕ್ಕೆ ಮುಖ್ಯಸ್ಥನಾಗಿ ಬರುವ ಯುವಕನೊಬ್ಬನ ಕಥೆ ಉತ್ತರ ಭಾರತದ ಹಳ್ಳಿಯ ಸೊಗಡಿನೊಂದಿಗೆ ಸಾಗುತ್ತಾ ಹೋಗುತ್ತದೆ. ಇದರ  4 ಸೀಸನ್ ಗಳು ಈಗಾಗಲೇ ಹೊರಬಂದಿದ್ದು, ಮುಂದಿನ ಸೀಸನ್ ಗೆ ಕಾತುರರಾಗಿ ಕಾಯ್ತಾ ಇದ್ದಾರೆ ಅಭಿಮಾನಿಗಳು. ಇದೀಗ “ಪಂಚಾಯತ್” ತಂಡ ಸರಣಿಯ 6ನೇ ವಾರ್ಷಿಕೋತ್ಸವವನ್ನು ಆಚರಿಸಿ ಇನ್‌ಸ್ಟಾಗ್ರಾಂನಲ್ಲಿ, ಹೊಸ ಸೀಸನ್‌ ಶೂಟಿಂಗ್ ಪ್ರಾರಂಭದ ಘೋಷಣೆಯನ್ನು ಮಾಡಿದೆ […]

ಮದುವೆ ಆಗಿ ಒಂದು ತಿಂಗಳಿಗೇ “ರಶ್ಮಿಕಾ ಮಂದಣ್ಣ” ಸಿಹಿಸುದ್ದಿ? “ಈಗ ನಾವು ಮೂವರು” ಎಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌

ನಟಿ ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್‌ನಲ್ಲಿ “Now it’s us three” “ಈಗ ನಾವು ಮೂವರು” ಎಂಬ ಕ್ಯಾಪ್ಷನ್‌ನೊಂದಿಗೆ ಹಂಚಿಕೊಂಡಿರುವ ಗ್ರಾಫಿಕ್ ವಿಡಿಯೋ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ. ವಿಜಯ್ ದೇವರಕೊಂಡ ಅವರೊಂದಿಗೆ ಫೆ. 26ರಂದು ಅದ್ಧೂರಿ ಮದುವೆಯ ನಂತರ ಹಂಚಿಕೊಂಡಿರುವ ಈ ಪೋಸ್ಟ್ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ವಿಡಿಯೋದಲ್ಲಿ ಸಾಂಕೆತಿಕ ದೃಶ್ಯಗಳಿದ್ದು, Terribly Tiny Tales ಅನ್ನು ಟ್ಯಾಗ್ ಮಾಡಿರುವುದು ಗಮನ ಸೆಳೆಯುತ್ತಿದೆ. ಇದರಿಂದಾಗಿ ಇದು ವೈಯಕ್ತಿಕ ಸುದ್ದಿಯೋ ಅಥವಾ ಪ್ರಚಾರದ ಭಾಗವೋ ಎಂಬುದು ಸ್ಪಷ್ಟವಾಗಿಲ್ಲ. ಅಧಿಕೃತ ದೃಢೀಕರಣಕ್ಕಾಗಿ […]

ಒಂದೇ ವಾರದಲ್ಲಿ 1000 ಕೋಟಿ ರೂ. ಕ್ಲಬ್ ಸೇರಿದ `ಧುರಂಧರ್ 2′: ಕಡಿಮೆ ಅವಧಿಯಲ್ಲಿ ರೆಕಾರ್ಡ್ ಮಾಡಿದ ಎರಡನೇ ಭಾರತೀಯ ಸಿನಿಮಾ.!

ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ಅಭಿನಯದ `ಧುರಂಧರ್ 2′ ಸಿನಿಮಾ ಬಿಡುಗಡೆಯಾದ ಒಂದೇ ವಾರದಲ್ಲಿ 1000 ಕೋಟಿ ರೂ. ಕ್ಲಬ್ ಸೇರಿದೆ. ಯಶಸ್ವಿ ಪ್ರದರ್ಶನದೊಂದಿಗೆ ಒಂದರ ನಂತರ ಒಂದರಂತೆ ದಾಖಲೆಗಳನ್ನು ಮುರಿಯುತ್ತಿದೆ. ವಿಶ್ವದಾದ್ಯಂತ ಒಟ್ಟು 1,006 ಕೋಟಿ ರೂ.ಗಳಷ್ಟು ಗಳಿಕೆ ಮಾಡಿದೆ. ಕಡಿಮೆ ಅವಧಿಯಲ್ಲಿ ಈ ರೆಕಾರ್ಡ್ ಮಾಡಿದ ಎರಡನೇ ಭಾರತೀಯ ಚಿತ್ರವಾಗಿ ಗುರುತಿಸಿಕೊಂಡಿದೆ. ಆರು ದಿನಗಳಲ್ಲಿ 1,000 ಕೋಟಿ ರೂ.ಗಳ ಗಡಿ ದಾಟಿದ್ದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪಾ 2′ ಮೊದಲ […]

ಬಾಕ್ಸಾಫೀಸ್‌ನಲ್ಲಿ ‘ಧುರಂಧರ್‌ 2’ ದಾಖಲೆಯ ಗಳಿಕೆ; ಕಲೆಕ್ಷನ್‌ ಎಷ್ಟು?

ಆದಿತ್ಯ ಧಾರ್‌ ನಿರ್ದೇಶನದ, ರಣವೀರ್‌ ಸಿಂಗ್‌ ಅಭಿನಯದ ‘ಧುರಂಧರ್‌ 2’ ಸಿನಿಮಾ ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾಗಿ ಕೇವಲ ಮೂರು ದಿನಗಳಲ್ಲೇ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಗಳಿಕೆ ಮಾಡಿದ್ದು, ವಿಶ್ವದಾದ್ಯಂತ 500 ಕೋಟಿ ರೂ. ಕ್ಲಬ್‌ ಸೇರಿದೆ. ಮೂರನೇ ದಿನ 113 ಕೋಟಿ ರೂ. ಸಂಗ್ರಹ:ಬಿಡುಗಡೆಯಾದ ಎರಡು ದಿನಗಳಲ್ಲಿ ಭಾರತದಲ್ಲಿ ಸಿನಿಮಾ 226.27 ಕೋಟಿ ರೂ. ಗಳಿಸಿತ್ತು. ಮೂರನೇ ದಿನ 113 ಕೋಟಿ ರೂ. ಸಂಗ್ರಹಿಸಿದೆ ಎಂದು ಇಂಡಸ್ಟ್ರಿ ಟ್ರ್ಯಾಕರ್ ಸಕ್ನಿಲ್ಕ್ ಹೇಳಿದ್ದಾರೆ. ದೇಶದಲ್ಲಿ […]

ಮಹೇಶ್ ಬಾಬು ಅಭಿನಯದ ‘ವಾರಣಾಸಿ’ ಸಿನಿಮಾ ಏ.07ರಂದು ಬಿಡುಗಡೆ!

ಎಸ್‌.ಎಸ್‌.ರಾಜಮೌಳಿ ನಿರ್ದೇಶನದ, ಮಹೇಶ್‌ ಬಾಬು ನಟನೆಯ ಬಹುನಿರೀಕ್ಷಿತ ‘ವಾರಾಣಸಿ’ ಸಿನಿಮಾ 2027ರ ಏಪ್ರಿಲ್‌ 07ರಂದು ತೆರೆಗೆ ಬರುತ್ತಿದೆ.ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್‌ ಸುಕುಮಾರನ್‌ ತಾರಾಬಳಗದಲ್ಲಿದ್ದಾರೆ. ಸಿನಿಮಾದಲ್ಲಿ ಮಹೇಶ್‍ ಬಾಬು ‘ರುದ್ರ’ ಎಂಬ ಪಾತ್ರದಲ್ಲಿ ಅಭಿನಯಿಸಿದರೆ, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್‍ ಸುಕುಮಾರನ್‍ ಕ್ರಮವಾಗಿ ‘ಮೋಹಿನಿ’ ಮತ್ತು ‘ಕುಂಭ’ ಎಂಬ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಈ ಚಿತ್ರವು ಪ್ರೀಮಿಯಂ ಫುಲ್ ಸ್ಕ್ರೀಮ್ ಐಮ್ಯಾಕ್ಸ್ ಫಾರ್ಮ್ಯಾಟ್‌ನಲ್ಲಿ ಇರಲಿದೆ. ಇದೊಂದು ಪೌರಾಣಿಕ ಹಿನ್ನೆಲೆಯ ಫ್ಯಾಂಟಸಿ ಚಿತ್ರವಾಗಿದ್ದು, ಶ್ರೀ ದುರ್ಗಾ ಆರ್ಟ್ಸ್ ಮತ್ತು ಶೋಯಿಂಗ್‍ […]