ಅನಿವಾಸಿ ಭಾರತೀಯ ಹನೀಫ್ ಮೂಳೂರು ಅಭಿಮಾನಿ ಬಳಗದಿಂದ ಡಾ.ಫಾರೂಕ್ ಚಂದ್ರನಗರ ಇವರಿಗೆ ಅಭಿವೃದ್ಧಿ ರತ್ನ ಪದಕ ಪುರಸ್ಕಾರ

ಕಾಪು: ಅನಿವಾಸಿ ಭಾರತೀಯ ಉದ್ಯಮಿ ಸಮಾಜ ಸೇವಕ ಹನೀಫ್ ಮೂಳೂರು (ಕೆ.ಎಸ್.ಎ)ಅಭಿಮಾನಿ ಬಳಗದಿಂದ ಬದ್ರಿಯ ಜುಮ್ಮಾ ಮಸ್ಜಿದ್ (ರಿ.)ಮಲ್ಲಾರು -ಮಜೂರು ಅಧ್ಯಕ್ಷ ಸಮಾಜ ಸೇವಕ ಡಾ.ಎಂ ಫಾರೂಕ್ ಚಂದ್ರನಗರ ಇವರಿಗೆ ಬಿ.ಜೆ.ಎಂ ಮಿಲಾದುನ್ನಬಿ ಕಾರ್ಯಕ್ರಮದ ವೇದಿಕೆಯಲ್ಲಿ ಕಳೆದ 2 ವರ್ಷದಲ್ಲಿ ಮಸ್ಜಿದ್ ನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ಮಸ್ಜಿದ್ ಇನ್ನಷ್ಟು ಅಂದ ಚಂದ ಹೆಸರುವಾಸಿಯಾಗಲು ಕಾರಣರಾದ ತಮಗೆ ಅಭಿವೃದ್ಧಿ ರತ್ನ ಪದವಿ ಬೆಳ್ಳಿಯ ಪದಕ ಪುರಸ್ಕಾರವನ್ನು ಬಿ.ಜೆ.ಎಂ ಮುದರೀಸ್ ಬಹು|ಸಯ್ಯಿದ್ ಮುಹಮ್ಮದ್ ಶಹಿರ್ ಅಲ್ ಹಿಕಮಿ ಅಲ್ […]
ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಥಮ ವರ್ಷದ ಬಿ.ಇ. ವಿದ್ಯಾರ್ಥಿಗಳ ಇಂಡಕ್ಷನ್ ಕಾರ್ಯಕ್ರಮ

ಕುಂದಾಪುರ: ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MITK) ಕಾಲೇಜಿನಲ್ಲಿ 2026-2027ನೇ ಸಾಲಿನ ಪ್ರಥಮ ವರ್ಷದ ಬಿ.ಇ. ವಿದ್ಯಾರ್ಥಿಗಳ ಇಂಡಕ್ಷನ್ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಣಿಪಾಲದ ಕಾರ್‌ಮಿಕ್ ಡಿಸೈನ್ ಪ್ರೈವೇಟ್ ಲಿಮಿಟೆಡ್‌ನ (KarMic Design Pvt. Ltd.) ಸಿಇಒ ಶ್ರೀ ರತ್ನಾಕರ ಭಟ್ ಅವರು ಭಾಗವಹಿಸಿ ಮಾತನಾಡಿ, “ವಿದ್ಯಾರ್ಥಿ ಜೀವನದಲ್ಲಿ ತಾಂತ್ರಿಕ ಕೌಶಲ್ಯಗಳ ಜೊತೆಗೆ ಸೃಜನಶೀಲತೆ, ನಿರಂತರ ಕಲಿಕೆ ಮತ್ತು ಶಿಸ್ತು ಬಹಳ ಮುಖ್ಯ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊಸ […]
ಮಂಗಳೂರಿನ KSRTC ವಿಭಾಗದಲ್ಲಿದೆ ಕೆಲಸ, ನೇರ ಸಂದರ್ಶನ, ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

ಮಂಗಳೂರು: ಉದ್ಯೋಗ ಹಾಗೂ ತರಬೇತಿಗಾಗಿ ಕಾಯುತ್ತಿರುವ ಯುವಜನರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ (KSRTC) ಸಿಹಿಸುದ್ದಿಯೊಂದು ಹೊರಬಿದ್ದಿದೆ. ಪುತ್ತೂರು ವಿಭಾಗದಲ್ಲಿ ಖಾಲಿ ಇರುವ ವಿವಿಧ ಶಿಶಿಕ್ಷು (Apprenticeship) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಸಾರಿಗೆ ಸಂಸ್ಥೆಯಲ್ಲಿ ತರಬೇತಿ ಪಡೆಯುವುದರ ಜೊತೆಗೆ ಮಾಸಿಕ ಭತ್ಯೆ ಪಡೆಯಬಹುದಾದ ಈ ಅವಕಾಶವನ್ನು ಅರ್ಹ ಅಭ್ಯರ್ಥಿಗಳು ಬಳಸಿಕೊಳ್ಳಬಹುದಾಗಿದೆ. ಯಾವ ಟ್ರೇಡ್‌ಗಳಲ್ಲಿ ಎಷ್ಟು ಹುದ್ದೆ? ITI ವಿದ್ಯಾರ್ಹತೆ ಹೊಂದಿದವರಿಗೆ: SSLC ವಿದ್ಯಾರ್ಹತೆ ಹೊಂದಿದವರಿಗೆ: ತಿಂಗಳಿಗೆ […]
ಉಡುಪಿಯಲ್ಲಿ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ; 83ಕ್ಕೂ ಹೆಚ್ಚು ತಂಡಗಳ ಭಾಗಿ

ಉಡುಪಿ: ಮೀನುಗಾರಿಕೆಗೆ ಹೆಸರುವಾಸಿಯಾದ ಉಡುಪಿ ಜಿಲ್ಲೆಯಲ್ಲಿ ಹವ್ಯಾಸಿ ಮೀನುಗಾರರು ಗಾಳ ಹಾಕಿ ಮೀನು ಹಿಡಿಯುವ ವಿಶಿಷ್ಟ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಸಮುದ್ರ ಮೀನುಗಾರಿಕೆಯ ಮೂಲಕ ಸಾವಿರಾರು ಕುಟುಂಬಗಳಿಗೆ ಬದುಕಿನ ಆಧಾರವಾಗಿರುವ ಜಿಲ್ಲೆಯಲ್ಲಿ, ಬೃಹತ್ ಬಲೆಗಳ ಬದಲಿಗೆ ಗಾಳ ಬಳಸಿ ಮೀನು ಹಿಡಿಯುವ ಸ್ಪರ್ಧೆ ಗಮನ ಸೆಳೆಯಿತು. ಸಮುದ್ರ ತೀರದಲ್ಲಿ ನಡೆದ ಸ್ಪರ್ಧೆಯಲ್ಲಿ 83ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಸ್ಪರ್ಧಿಗಳು ಸಮುದ್ರದ ಅಲೆಗಳ ನಡುವೆ ಗಾಳ ಹಾಕಿ ಮೀನು ಬರುವಿಕೆಗಾಗಿ ಕಾದು ಕುಳಿತಿದ್ದರು. ಗಾಳಕ್ಕೆ ಮೀನು ಸಿಕ್ಕ ಪ್ರತಿಯೊಂದು ಕ್ಷಣವೂ […]
ಮಂಗಳೂರಿನ ಹೊಟೇಲಿನಲ್ಲಿ ಜಿರಳೆ ಪತ್ತೆ: ಪರಿಶೀಲನೆ ವೇಳೆ ಅಶುಚಿ ಕಂಡು ಅಧಿಕಾರಿಗಳು ಗರಂ ಮಾಲೀಕರಿಗೆ ನೋಟಿಸ್

ಚಿತ್ರ: ಸಾಂಕೇತಿಕ ಮಂಗಳೂರು: ಸಾಂಬಾರ್‌ನಲ್ಲಿ ಜಿರಳೆ ಪತ್ತೆಯಾಗಿದೆ ಎಂಬ ಗ್ರಾಹಕರ ದೂರಿನ ಮೇರೆಗೆ ಜಿಲ್ಲಾ ಆಹಾರ ಸುರಕ್ಷತಾ ನಿಯೋಜಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಉಳ್ಳಾಲದ ತೊಕ್ಕೊಟ್ಟಿನಲ್ಲಿರುವ ವೃಂದಾವನ್ ಹೋಟೆಲ್ ಮೇಲೆ ದಿಢೀರ್ ದಾಳಿ ನಡೆಸಲಾಯಿತು. ಬುಧವಾರ ಮಧ್ಯಾಹ್ನ 1.30ರ ಸುಮಾರಿಗೆ ಅಧಿಕಾರಿಗಳು ಹೋಟೆಲ್‌ನ ಶೆಟರ್‌ಗಳನ್ನು ತೆರೆದು ಅಡುಗೆಮನೆ ಸೇರಿದಂತೆ ವಿವಿಧೆಡೆ ಕೂಲಂಕಷ ತಪಾಸಣೆ ನಡೆಸಿದರು. ತಪಾಸಣೆ ವೇಳೆ ಆಹಾರ ಪದಾರ್ಥಗಳ ಸಂಗ್ರಹಕ್ಕೆ ಪ್ರತ್ಯೇಕ ಕೊಠಡಿ ಇಲ್ಲದಿರುವುದು ಹಾಗೂ ಅಡುಗೆಮನೆಯಾದ್ಯಂತ ಪದಾರ್ಥಗಳನ್ನು ಅಡ್ಡಾದಿಡ್ಡಿಯಾಗಿ ರಾಶಿ ಹಾಕಿರುವುದು […]