ಮಂಗಳೂರಿನ KSRTC ವಿಭಾಗದಲ್ಲಿದೆ ಕೆಲಸ, ನೇರ ಸಂದರ್ಶನ, ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

ಮಂಗಳೂರು: ಉದ್ಯೋಗ ಹಾಗೂ ತರಬೇತಿಗಾಗಿ ಕಾಯುತ್ತಿರುವ ಯುವಜನರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ (KSRTC) ಸಿಹಿಸುದ್ದಿಯೊಂದು ಹೊರಬಿದ್ದಿದೆ. ಪುತ್ತೂರು ವಿಭಾಗದಲ್ಲಿ ಖಾಲಿ ಇರುವ ವಿವಿಧ ಶಿಶಿಕ್ಷು (Apprenticeship) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಸಾರಿಗೆ ಸಂಸ್ಥೆಯಲ್ಲಿ ತರಬೇತಿ ಪಡೆಯುವುದರ ಜೊತೆಗೆ ಮಾಸಿಕ ಭತ್ಯೆ ಪಡೆಯಬಹುದಾದ ಈ ಅವಕಾಶವನ್ನು ಅರ್ಹ ಅಭ್ಯರ್ಥಿಗಳು ಬಳಸಿಕೊಳ್ಳಬಹುದಾಗಿದೆ.

ಯಾವ ಟ್ರೇಡ್‌ಗಳಲ್ಲಿ ಎಷ್ಟು ಹುದ್ದೆ?

ITI ವಿದ್ಯಾರ್ಹತೆ ಹೊಂದಿದವರಿಗೆ:

  • ಮೆಕ್ಯಾನಿಕ್ ಡೀಸೆಲ್ – 25
  • ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ – 15
  • ಇಲೆಕ್ಟ್ರೀಷಿಯನ್ – 20
  • ಮೋಟಾರ್ ಮೆಕ್ಯಾನಿಕ್ ವೆಹಿಕಲ್ – 5
  • ವೆಲ್ಡರ್ – 6
  • ಫಿಟ್ಟರ್ – 19
  • ಮೋಟಾರ್ ವೆಹಿಕಲ್ ಬಾಡಿ ಬಿಲ್ಡರ್ – 7
  • ಮೆಕ್ಯಾನಿಕ್ ಆಟೋಮೊಬೈಲ್ – 20

SSLC ವಿದ್ಯಾರ್ಹತೆ ಹೊಂದಿದವರಿಗೆ:

  • ಮೆಕ್ಯಾನಿಕ್ ಡೀಸೆಲ್ – 33 ಹುದ್ದೆಗಳು

ತಿಂಗಳಿಗೆ ಎಷ್ಟು ಭತ್ಯೆ?

ITI ಅಭ್ಯರ್ಥಿಗಳಿಗೆ 1 ವರ್ಷದ ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು ₹9,600 ಭತ್ಯೆ ನೀಡಲಾಗುತ್ತದೆ.

SSLC ಅಭ್ಯರ್ಥಿಗಳಿಗೆ ಮೊದಲ ವರ್ಷ ₹8,200 ಮಾಸಿಕ ಭತ್ಯೆ ಸಿಗಲಿದೆ. ಎರಡನೇ ವರ್ಷ ಮಡಿಕೇರಿ ಘಟಕದಲ್ಲಿ ₹9,250 ಹಾಗೂ ಪುತ್ತೂರು, ಬಿ.ಸಿ.ರೋಡ್, ಧರ್ಮಸ್ಥಳ ಸೇರಿದಂತೆ ಇತರ ಘಟಕಗಳಲ್ಲಿ ₹9,020 ಮಾಸಿಕ ಭತ್ಯೆ ನೀಡಲಾಗುತ್ತದೆ.

ವಯೋಮಿತಿ ಎಷ್ಟು?

ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು. SSLC ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 30 ವರ್ಷ ಮೀರಿರಬಾರದು. ನಿಯಮಾನುಸಾರ ಎಸ್‌ಸಿ, ಎಸ್‌ಟಿ ಹಾಗೂ ಸೈನಿಕರ ಮಕ್ಕಳಿಗೆ ಮೀಸಲಾತಿ ಅನ್ವಯವಾಗಲಿದೆ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಕೊನೆಯ ದಿನ: ಆಗಸ್ಟ್ 30

ನೇರ ಸಂದರ್ಶನ: ಆಗಸ್ಟ್ 31ರಂದು ಬೆಳಿಗ್ಗೆ 10 ಗಂಟೆಗೆ

ಅಭ್ಯರ್ಥಿಗಳು ಮೂಲ ದಾಖಲೆಗಳೊಂದಿಗೆ ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿಯಲ್ಲಿ ಶಿಶಿಕ್ಷು ಆಯ್ಕೆ ಸಮಿತಿಯ ಮುಂದೆ ಹಾಜರಾಗಬೇಕು.

ಯಾವ ದಾಖಲೆಗಳು ಬೇಕು?

ಸಂದರ್ಶನಕ್ಕೆ ಹಾಜರಾಗುವಾಗ ಅಭ್ಯರ್ಥಿಗಳು ಕೆಳಗಿನ ದಾಖಲೆಗಳನ್ನು ತರಬೇಕು:

  • ಎಸ್‌ಎಸ್‌ಎಲ್‌ಸಿ, ಐಟಿಐ ಅಥವಾ ಪಿಯುಸಿ ಮೂಲ ಅಂಕಪಟ್ಟಿಗಳು
  • ಜನ್ಮದಿನಾಂಕದ ದಾಖಲೆ
  • ಜಾತಿ ಪ್ರಮಾಣ ಪತ್ರ
  • ಆಧಾರ್ ಕಾರ್ಡ್ – 2 ಪ್ರತಿಗಳು
  • ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ – 2 ಪ್ರತಿಗಳು
  • ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರುವ ಕುರಿತು ಬ್ಯಾಂಕ್‌ನಿಂದ ಪಡೆದ ದೃಢೀಕರಣ ಪತ್ರ
  • ಇ-ಮೇಲ್ ಐಡಿ
  • ಇತ್ತೀಚಿನ 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು

ಅರ್ಜಿದಾರರಿಗೆ ಮುಖ್ಯ ಸೂಚನೆ

ಆನ್‌ಲೈನ್‌ನಲ್ಲಿ ನೋಂದಣಿ ಮಾಡಿದ ಬಳಿಕ ಅರ್ಜಿಯ ಪ್ರತಿಯನ್ನು ಕಚೇರಿ ವೇಳೆಯೊಳಗೆ ಪುತ್ತೂರು ವಿಭಾಗೀಯ ಕಚೇರಿಗೆ ಸಲ್ಲಿಸುವುದು ಕಡ್ಡಾಯ.

ಕಚೇರಿ ಸಮಯ ಸೋಮವಾರದಿಂದ ಶುಕ್ರವಾರ ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ಹಾಗೂ ಶನಿವಾರ ಮಧ್ಯಾಹ್ನ 1.30ರವರೆಗೆ ಇರಲಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನದವರೆಗೆ ಕಾಯದೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸುವುದು ಸೂಕ್ತ.