MSDCಯ ಈ ಹೇರ್ ಸ್ಟೈಲಿಂಗ್ ಕಾರ್ಯಗಾರದಲ್ಲಿ ಕಲೀರಿ ಅದ್ಬುತ ಶೈಲಿಯ ಕೇಶವಿನ್ಯಾಸ: ಆಸಕ್ತರು ಮಿಸ್ ಮಾಡದಿರಿ!

ಮಣಿಪಾಲ: ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (TMA Pai Foundation‌ನ ಘಟಕ) MSDCಯಲ್ಲಿ ನಿಮಗಾಗಿ ಆಯೋಜನೆಗೊಂಡಿದೆ ಹೇರ್ ಸ್ಟೈಲಿಂಗ್ ಕಾರ್ಯಾಗಾರ .ನಿಮ್ಮ ಕೈಯಿಂದಲೇ ಸಲೂನ್ ಮಟ್ಟದ ಸ್ಟೈಲ್ಸ್ ಸೃಷ್ಟಿಸಿ ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೆ ಈ ಕಾರ್ಯಾಗಾರ. ಡಿಸೆಂಬರ್ 9 ರಂದು ಮಧ್ಯಾಹ್ನ 2:00 ರಿಂದ ಸಂಜೆ 5:00 ರ ತನಕ ಈ ಕಾರ್ಯಾಗಾರ ನಡೆಯಲಿದೆ.ಕೂದಲು ಸ್ಟ್ರೈಟನಿಂಗ್ (ಐರನಿಂಗ್), ಕೂದಲು ಕರ್ಬಣೆ (ಕರ್ಳಿಂಗ್), ಹ್ಯಾಂಡ್ಸ್-ಆನ್ practically ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ. ಕಾರ್ಯಗಾರದ ಶುಲ್ಕ ರೂ 1999/- ಮಾತ್ರ.ಭಾಗವಹಿಸಿದವರಿಗೆ ಸಂಸ್ಥೆಯ […]

ಬಾಕ್ಸ್ ಆಫೀಸ್ ನಲ್ಲಿ ‘ಧುರಂದರ್’ ಅಬ್ಬರ; ಮೊದಲ ದಿನ ಕಲೆಕ್ಷನ್ ಎಷ್ಟು?

ಬಿಡುಗಡೆಯಿಗೂ ಮುನ್ನವೇ ಹಲವು ನೆಗೆಟಿವ್ ಚರ್ಚೆಗಳು ಮತ್ತು ಫ್ಲಾಪ್ ಭವಿಷ್ಯವಾಣಿಗಳ ನಡುವೆ ತೆರೆಗೆ ಬಂದ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಮೊದಲ ದಿನವೇ ಅಚ್ಚರಿ ಮೂಡಿಸಿದೆ. ಭಾರೀ ಬಜೆಟ್, ವಿವಾದಾತ್ಮಕ ವಿಷಯ ಮತ್ತು ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಶಕ್ತಿಯುತ ಆರಂಭ ಮಾಡಿದೆ. ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರ ಮೊದಲ ದಿನ 18 ಕೋಟಿ ರೂ. ಗಳಿಸಬಹುದು ಎಂಬ ಅಂದಾಜು ಕೇಳಿಬಂದಿತ್ತು. ಆದರೆ, ಎಲ್ಲ ಲೆಕ್ಕಾಚಾರಗಳನ್ನು […]

ಉಡುಪಿ: ಹೆನಿಟಾ ಜೋಸ್ನಾ ಮಿನೇಜಸ್‌ಗೆ ಪಿಎಚ್‌ಡಿ ಪದವಿ

ಉಡುಪಿ: ಹೃದಯ ರಕ್ತನಾಳದ ಕಾಯಿಲೆ ಇರುವ ಮಹಿಳೆಯರಿಗೆ ತಂತ್ರಜ್ಞಾನ-ಆಧಾರಿತ ಸಮಗ್ರ ಹೃದಯ ಪುನರ್ವಸತಿ ಚಿಕಿತ್ಸೆಯ ಕುರಿತು ಪೂರ್ಣಾವಧಿ ಸಂಶೋಧನಾ ವಿದ್ಯಾರ್ಥಿನಿಯಾಗಿ ಸಂಶೋಧನಾ ಅಧ್ಯಯನ ನಡೆಸಿ ಮಂಡಿಸಿರುವ ಮಹಾಪ್ರಬಂಧಕ್ಕೆ, ಕಾಪು ತಾಲೂಕು, ಬೆಳ್ಳೆ ಗ್ರಾಮದ, ಪಾಂಬೂರಿನ ಹೆನಿಟಾ ಜೋಸ್ನಾ ಮಿನೇಜಸ್ ಅವರಿಗೆ ಮಣಿಪಾಲದ ಮಾಹೆ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಲಭಿಸಿದೆ. ಮಣಿಪಾಲ ನರ್ಸಿಂಗ್ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ನರ್ಸಿಂಗ್ ನ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥೆ ಡಾ.ಸೋನಿಯಾ ಆರ್.ಬಿ. ಡಿಸೋಜ ಹಾಗೂ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಹೃದ್ರೋಗ ವಿಭಾಗದ […]

ಉಡುಪಿ: ಲಾರಿ- ಕಾರು ನಡುವೆ ಅಪಘಾತ; ನಾಲ್ವರಿಗೆ ಗಾಯ

ಉಡುಪಿ: ಲಾರಿಯೊಂದು ಕಾರಿ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸಹಿತ ನಾಲ್ವರು ಗಾಯಗೊಂಡ ಘಟನೆ ಡಿ.4ರಂದು ಸಂಜೆ ವೇಳೆ ಸಂತೆಕಟ್ಟೆ ಅಂಡರ್ ಪಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಗಾಯಗೊಂಡವರನ್ನು ಕಲ್ಯಾಣಪುರದ ಬಡಗುನಯಂಪಳ್ಳಿ ನಿವಾಸಿ ವರುಣ್ ಕುಮಾರ್ ಎಸ್.ಜಿ.(40), ಅವರ ಅತ್ತೆ ಜಯಂತಿ ಬಲ್ಲಾಳ್ (72), ಮಕ್ಕಳಾದ ತೇಜಸ್(12) ದೀಕ್ಷಾ(7) ಎಂದು ಗುರುತಿಸಲಾಗಿದೆ. ಇದರಲ್ಲಿ ತೀವ್ರವಾಗಿ ಗಾಯಗೊಂಡ ಜಯಂತಿ ಬಲ್ಲಾಳ್ ಹಾಗೂ ವರುಣ್ ಕುಮಾರ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂತೆಕಟ್ಟೆ ಕಡೆಯಿಂದ […]

ಉಡುಪಿಯ ಕರಾವಳಿ ಆಟೋಮೊಬೈಲ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಉಡುಪಿಯ ಕರಾವಳಿ ಆಟೋಮೊಬೈಲ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: 🔹ಸೇಲ್ಸ್ ಆಫೀಸರ್ಸ್ಪುರುಷ – 3ಮಹಿಳೆ – 1 ಅರ್ಹತೆಗಳು: 🔹ಪಿಯುಸಿ / ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು.🔹ಕಾರ್ಯತಂತ್ರದ ಯೋಜನಾ ಕೌಶಲ್ಯಗಳನ್ನು ಹೊಂದಿರಬೇಕು.🔹ಬಲವಾದ ಸಂವಹನ ಸಾಮರ್ಥ್ಯಗಳು ಇರಬೇಕು.🔹ಉದ್ಯಮ ಜ್ಞಾನ ಹೊಂದಿರಬೇಕು.🔹4 ಚಕ್ರ ಚಾಲನೆ (ಪುರುಷ) ಅತ್ಯುತ್ತಮವಾದ ಸಂಬಳ,ಇನ್ಸೆಂಟಿವ್, ಪ್ರಯಾಣ ಭತ್ಯೆ, ವಾರ್ಷಿಕ ಬೋನಸ್ ಹಾಗೂ ಆರೋಗ್ಯ ವಿಮೆಯ ಸೌಲಭ್ಯವಿದೆ. ನಿಮ್ಮ ಸಿವಿಯನ್ನು ಇಮೇಲ್‌ಗೆ ಕಳುಹಿಸಿ: [email protected]+91 8050092644 www.karavaliatomobiles.in