ಗೋ ಕಳ್ಳರಿಗೆ ಸಹಕರಿಸಲು ‘ಗೋ ಹತ್ಯೆ ನಿಷೇಧ’ ಕಾನೂನಿಗೆ ತಿದ್ದುಪಡಿ ತರಲು ಹೊರಟ ಕಾಂಗ್ರೆಸ್ ಸರಕಾರ- ವಿಶ್ವ ಹಿಂದೂ ಪರಿಷತ್

ಉಡುಪಿ: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020 ಅನ್ನು ಸಡಿಲುಗೊಳಿಸಿ ತಿದ್ದುಪಡಿ ತರಲು ಹೊರಟಿರುವ ರಾಜ್ಯ ಕಾಂಗ್ರೆಸ್ ಸರಕಾರದ ಕ್ರಮವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಇದೇ ಡಿ.8ರ ಸೋಮವಾರದಂದು ಉಡುಪಿ ಜಟ್ಕಾ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿಎಚ್ ಪಿ ಕರ್ನಾಟಕ ದಕ್ಷಿಣ ಪ್ರಾಂತ್ಯದ ಗೋ ರಕ್ಷಾ ಪ್ರಮುಖರಾದ ಸುನೀಲ್ ಕೆ.ಆರ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಹಿಂದೂ ಸಂಘಟನೆ ಹಾಗೂ ಕಾರ್ಯಕರ್ತರ ಮೇಲೆ […]
ಹಿರಿಯಡ್ಕ: ಡಿ.6 ರಂದು ಸಹಾಯಹಸ್ತ ಟ್ರಸ್ಟ್ (ರಿ.) ಇದರ ಉದ್ಘಾಟನಾ ಸಮಾರಂಭ, ಸಹಾಯಧನ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ

ಹಿರಿಯಡ್ಕ: ಸಹಾಯಹಸ್ತ ಟ್ರಸ್ಟ್ (ರಿ.) ಮುಂಡುಜೆ ಇದರ ಉದ್ಘಾಟನಾ ಸಮಾರಂಭ, ಸಹಾಯಧನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಡಿ.6 ರಂದು ಸಂಜೆ 7 ಗಂಟೆಗೆ ಹಿರಿಯಡ್ಕ ಮುರತ್ತಗುಡ್ಡೆ ಮೈದಾನ, ವರುಣ್ ಪೈಪ್ಸ್ ಫ್ಯಾಕ್ಟರಿಯ ಹತ್ತಿರ ನಡೆಯಲಿದೆ. ಸಭಾ ಕಾರ್ಯಕ್ರಮ:ಅಧ್ಯಕ್ಷತೆ:ಗುರ್ಮೆ ಶ್ರೀ ಸುರೇಶ್ ಶೆಟ್ಟಿ ಶಾಸಕರು, ಕಾಪು ವಿಧಾನಸಭಾ ಕ್ಷೇತ್ರ ಉದ್ಘಾಟನೆ:ಡಾ. ದೇವದಾಸ ಕಾಮತ್, ವೈದ್ಯರು, ಕಾಮತ್ ನರ್ಸಿಂಗ್ ಹೋಮ್, ಹಿರಿಯಡ್ಕ ಪ್ರಧಾನ ಭಾಷಣಕಾರರು:ಶ್ರೀ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮುಖ್ಯ ಅತಿಥಿಗಳು:ಶ್ರೀ ಸುರೇಶ್ ನಾಯಕ್ ಕುಯಿಲಾಡಿ, ಉದ್ಯಮಿ ಹಾಗೂ […]
ಉಡುಪಿ: ರೇಷ್ಮಾಗೆ ಪಿಎಚ್.ಡಿ. ಪದವಿ

ಉಡುಪಿ: ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಮಣಿಪಾಲ್ ಇಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರೇಷ್ಮಾ ಅವರು ಸಲ್ಲಿಸಿದ ಸಂಶೋಧನಾ ಪ್ರಬಂಧಕ್ಕೆ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾನಿಲಯವು ಪಿಎಚ್.ಡಿ. ಪದವಿಯನ್ನು ಪ್ರದಾನ ಮಾಡಿದೆ. ರೇಷ್ಮಾ ಅವರು ಕುವೆಂಪು ವಿಶ್ವವಿದ್ಯಾನಿಲಯದ ಮ್ಯಾನೇಜ್ ಮೆಂಟ್ ಸ್ಟಡೀಸ್ ಇದರ ಹಿರಿಯ ಪ್ರೊಫೆಸರ್ ಡಾ. ಎಚ್.ಎನ್.ರಮೇಶ್ ಅವರ ಮಾರ್ಗದರ್ಶನದಲ್ಲಿ ‘ಪರ್ಫಾರ್ಮೆನ್ಸ್ ಇವಾಲ್ಯುವೇಷನ್ ಆಫ್ ಮ್ಯೂಚುವಲ್ ಫಂಡ್ಸ್ -ಎ ಕಂಪಾರೇಟಿವ್ ಸ್ಟಡಿ ಆನ್ ಸೆಲೆಕ್ಟ್ ಈಕ್ವಿಟಿ ಆಂಡ್ ಡೆಟ್ ಫಂಡ್ಸ್ ಇನ್ ಇಂಡಿಯಾ ’ ಎಂಬ […]
ಉಡುಪಿ : ಶೀರೂರು ಪರ್ಯಾಯದ ಪೂರ್ವಭಾವಿಯಾಗಿ ಸಮಾಲೋಚನಾ ಸಭೆ

ಉಡುಪಿಯ ಶೀರೂರು ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಯಶ್ ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿದ ಅವರು ಶ್ರೀ ಶ್ರೀ ವೇದವರ್ಧನ ತೀರ್ಥರು ಕೇವಲ ಅಷ್ಟಮಠಕ್ಕೆ ಸೀಮಿತವಾಗದೆ ದೇಶದೆಲ್ಲೆಡೆ ಖ್ಯಾತಿ ಗಳಿಸಿ ದೇಶಕ್ಕೆ ಮಾರ್ಗದರ್ಶನ ನೀಡುವ ಯತಿಗಳಾಗಬೇಕೆಂಬ ಸಂಕಲ್ಪ ನಮ್ಮದು. ಮುಂದಿನ ದಿನಗಳಲ್ಲಿ ಹಿಂದೂ ಸಮಾಜ ಅವರ ಮಾರ್ಗದರ್ಶನದಲ್ಲಿ ಮುಂದುವರಿಯಬೇಕು , ಶೀರೂರು ಪರ್ಯಾಯ ನಮ್ಮೆಲ್ಲರನ್ನೂ ಒಗ್ಗೂಡಿಸುವ ಪರ್ಯಾಯ ಎಂದರು. ಮಠದ ದಿವಾನರಾದ ಡಾ. ಉದಯ ಸರಳತ್ತಾಯ ಮಾತನಾಡಿ ಕೃಷ್ಣ ಭಕ್ತರನ್ನು […]
ಡಿ. 13ರಂದು ವಿಶ್ವ ಶಾಂತಿ ಸಮಾವೇಶ- ಪರ್ಯಾಯ ಪುತ್ತಿಗೆ ಶ್ರೀ

ಉಡುಪಿ: ಪರ್ಯಾಯ ಪುತ್ತಿಗೆ ಮಠ, ಶ್ರೀಕೃಷ್ಣ ಮಠ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಗೀತೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ ಇದೇ ಡಿ.7ರಂದು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದ್ದಾರೆ. ಗೀತಾ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ವಿಶ್ವಗೀತಾ ಪರ್ಯಾಯ ಮಹೋತ್ಸವದ ಅಂಗವಾಗಿ ಡಿ. 13ರಂದು ರಾಜಾಂಗಣದಲ್ಲಿ ವಿಶ್ವಶಾಂತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ […]