ಲಾಭ ತರಬೇಕಿದ್ದ ಕಲ್ಲಂಗಡಿ ಕೃಷಿ ನಷ್ಟದ ಹಳ್ಳ ಹಿಡಿಯಿತು: ಅಕಾಲಿಕ ಮಳೆಗೆ ಕಂಗಾಲಾದ ಕೋಟದ ಈ ಕೃಷಿಕ

ಕೋಟ: ಇಲ್ಲಿನ ಕೋಟ ಗಿಳಿಯಾರು ಪರಿಸರದ ಯುವ ಕೃಷಿಕ ಭೋಜ ಪೂಜಾರಿ ತನ್ನ ಎರಡು ಎಕ್ಕರೆ ಪ್ರದೇಶದ ಕೃಷಿ ಭೂಮಿಯಲ್ಲಿ ಕಲ್ಲಂಗಡಿ ಬೆಳೆದಿದ್ದಾರೆ ಆದರೆ ಲಾಭವಾಗಬೇಕಿದ್ದ ಕಲ್ಲಂಗಡಿ ಹಣ್ಣಿನ ಕೃಷಿ ನಷ್ಟದ ಹಳ್ಳ ಹಿಡಿದಿದೆ. ಪ್ರತಿವರ್ಷ ತಾನು ಪ್ರೀತಿಸುವ ಕೃಷಿ ಭೂಮಿಯಲ್ಲಿ ಭತ್ತ,ಉದ್ದು,ಅವಡೆ ಹೀಗೆ ನಾನಾ ರೀತಿಯ ಬೆಳೆಯ ಜೊತೆ ಲಾಭದಾಯಕ ಕಲ್ಲಂಗಡಿ ಹಣ್ಣಿನ ಕೃಷಿ ಬೆಳೆಯುತ್ತಾರೆ.ಆದರೆ ಪ್ರತಿ ವರ್ಷ ಒಂದಲ್ಲ ಒಂದು ರೀತಿಯ ಸಮಸ್ಯೆ ಎದುರಿಸುವ ಭೋಜ ಪೂಜಾರಿಗೆ ಈ ಬಾರಿ ದೊಡ್ಡ ಮಟ್ಟದ ಸಂಕಷ್ಟ […]
ಫ್ಯಾಷನ್ ಫ್ರುಟ್ ಪೆಪ್ಸಿ ತಯಾರಿಸಿ ಸೈ ಎನ್ನಿಸಿಕೊಂಡ ಕೃಷಿಕ: ಆಹಾ ಏನ್ ಟೇಸ್ಟು ಇವರು ಮಾಡುವ ಫ್ಯಾಷನ್ ಫ್ರುಟ್‍ನ ಪೆಪ್ಸಿ

«ಗಣಪತಿ ಹಾಸ್ಪುರ ನೀವು ಮಾರುಕಟ್ಟೆಯಲ್ಲಿ ಸಿಗುವ ಮ್ಯಾಂಗೋ, ಆರೆಂಜ್ ಇತ್ಯಾದಿಗಳಿಂದ ಸಿದ್ಧಗೊಂಡ ರುಚಿರುಚಿಯಾದ ಪೆಪ್ಸಿಗಳನ್ನು ಸವಿದಿರಬಹುದು. ಆದ್ರೆ, ಫ್ಯಾಷನ್ ಫ್ರುಟ್‍ನಿಂದ ತಯಾರಿಸಿದ ಪೆಪ್ಸಿಯ ರುಚಿಯನ್ನು ಸವಿದಿದ್ದೀರಾ? ಅಂತಹ ಹಣ್ಣಿನ ರಸದಿಂದ ಪೆಪ್ಸಿ ಮಾಡಬಹುದು ಎಂಬುದು ಸಹಾ ಗೊತ್ತಿರಲಿಕ್ಕಿಲ್ಲ ಅಲ್ಲವೇ? ಅಂಥದೊಂದು ಸಾಧನೆ ಮಾಡಿ ತೋರಿಸಿದ್ದಾರೆ ಕಾನಕೊಡ್ಲಿನ ಕೃಷಿಕ ಪ್ರಸಾದ ಹೆಗಡೆ. ಇವರು ಉ.ಕ.ಜಿಲ್ಲೆಯ ಯಲ್ಲಾಪುರ ತಾಲೂಕಿನ ಹೆಮ್ಮಾಡಿ (ಕುಂದರಗಿ ಗ್ರಾಂ. ಪಂ.) ಸಮೀಪದ ಕಾನಕೊಡ್ಲಿನವರು. ಬಿ. ಎ. ಪದವೀಧರರಾದ ಇವರು ಕೃಷಿಯನ್ನೆ ಉಸಿರಾಗಿಸಿಕೊಂಡವರು. ಕೃಷಿಯಲ್ಲಿ ವಿಶಿಷ್ಟ ಸಾಧನೆ […]
ಮಿಶ್ರ ಕೃಷಿಯಲ್ಲಿ ಬಂಗಾರದಂತಹ ಬೆಳೆ ಪಡೆದ ಹಿರ್ಗಾನದ ಕೃಷಿಕ ದಿನೇಶ್ ಕುಮಾರ್ ಕತೆ ಇದು !

ಕೃಷಿ ಕ್ಷೇತ್ರ ಕೃಷಿಕರಿಗೆ ವಿಪುಲ ಅವಕಾಶಗಳನ್ನು ತೆರೆದಿಡುತ್ತದೆ. ನಿತ್ಯ ಶ್ರಮ ವಹಿಸುವ ಶ್ರಮಿಕ ರೈತರಿಗೆ ಕೃಷಿಯೆ ಜೀವಾಳ. ಇಲ್ಲೊಂದು ಕೃಷಿಕರೊಬ್ಬರ ಸಾಧನೆ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಇವರ ಹೆಸರು ದಿನೇಶ್ ಕುಮಾರ್ ಪೆರ್ನೆಬೆಟ್ಟು. ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಕ್ರಿಯಾಶೀಲ ಕೃಷಿಕರಿವರು. ತಮ್ಮ ಕೃಷಿ ಭೂಮಿಯಲ್ಲಿ ಮಿಶ್ರ ಬೆಳೆಗಳನ್ನು ಬೆಳೆದು ಉತ್ತಮ ಫಸಲನ್ನು ಪಡೆಯುತ್ತಿರುವ ಕೃಷಿಕ ದಿನೇಶ್ ಕುಮಾರ್ ಅವರ ಕತೆ ಇಲ್ಲಿದೆ. ದಿನೇಶ್ ಕುಮಾರ್ ತಮ್ಮ ತೋಟದ ಬದಿಗಳಲ್ಲಿ 75 ತೆಂಗಿನ ಮರಗಳಿದ್ದು ವಾರ್ಷಿಕವಾಗಿ ಎರಡು […]
ಮಲ್ಲಿಗೆಯಲ್ಲೇ ಅರಳಿತು ಕಾರ್ಕಳದ ಈ ಕೃಷಿಕನ ಬದುಕು: ತಾರಾನಾಥ ಪ್ರಭು ಅವರ ಕತೆಯಿದು !

ಅಪಾರ ಆದಾಯ ತಂದುಕೊಡಬಲ್ಲ ಮಲ್ಲಿಗೆ ಕೃಷಿ ಕೃಷಿನರ ಕೈಯಿಡಿದು ಬದುಕುಕಟ್ಟಿಕೊಡುತ್ತದೆ. ನಮಗೆಲ್ಲಾ ಗೊತ್ತು ಈ ಮಲ್ಲಿಗೆ ಹೂವಿನ ಪರಿಮಳಕ್ಕೆ ಮನಸೋಲದವರು ಯಾರೂ ಇಲ್ಲ. ಒಂದು ಕುಟುಂಬದ ದಿಕ್ಕನ್ನು ಈ ಮಲ್ಲಿಗೆ ಕೃಷಿ ಬದಲಾಯಿಸಿದೆ ಎಂದರೆ ನಂಬಲೇಬೇಕು. ಹೌದು,ಕಾರ್ಕಳದ ಎಳ್ಳಾರೆಯ ಸಂಪಿಗೆಟ್ಟೆಯ ತಾರನಾಥ ಪ್ರಭು ದಂಪತಿ ಮಲ್ಲಿಗೆ ಹೂವಿನ ಕೃಷಿ ಮಾಡಿ ಉತ್ತಮ ಆದಾಯ ಗಳಿಸಿ ಬದುಕುಕಟ್ಟಿಕೊಂಡಿದ್ದಾರೆ. ತಾರಾನಾಥ ಜ್ಯೋತಿ ದಂಪತಿಗಳು ಶಂಕರಪುರ ಮಲ್ಲಿಗೆ ನಾಟಿ ಕಾರ್ಯ ಹಾಗೂ ನಿರ್ವಹಣೆ ಮಾಡುತ್ತಾರೆ. ತಮ್ಮ ಹದಿನೈದು ಸೆಂಟ್ಸ್ ಜಾಗದಲ್ಲಿ ಎಂಬತ್ತು […]
ಗೇರು ಬೆಳೆಯಲ್ಲಿ ಎಲೆ ತಿನ್ನುವ ದುಂಬಿಗಳನ್ನು ಹೇಗೆ ನಿಯಂತ್ರಿಸೋದು :ಇಲ್ಲಿದೆ ಕೃಷಿಕರಿಗೆ ಸಲಹೆ

ಉಡುಪಿ : ಉಡುಪಿ ಜಿಲ್ಲೆಯ ಹಲವು ಭಾಗಗಳಲ್ಲಿ ಗೇರು ಬೆಳೆಯಲ್ಲಿ ಎಲೆ ತಿನ್ನುವ ದುಂಬಿಗಳು ಕಾಣಿಸಿಕೊಳ್ಳುತ್ತಿದ್ದು, ಸೂಕ್ತ ಹತೋಟಿ ಕ್ರಮವನ್ನು ಕೈಗೊಳ್ಳುವುದು ಉತ್ತಮ. ಈ ದುಂಬಿಗಳನ್ನು ವೈಜ್ಞಾನಿಕವಾಗಿ ಮೋನೊಲಿಪ್ಟಾ ಲೊಂಗಿಟಾರ್ಸಸ್ ಎಂದು ಕರೆಯಲಾಗುತ್ತದೆ. ಪಶ್ಚಿಮ ಕರಾವಳಿ ಭಾಗದಲ್ಲಿ ಕಂಡು ಬರುವ ಪ್ರಮುಖ ಕೀಟವಾಗಿದ್ದು, ಕೆಂಪು ಬಣ್ಣದಿಂದ ಕೂಡಿರುತ್ತದೆ. ಈ ದುಂಬಿಗಳು, ಅಧಿಕ ಪ್ರಮಾಣದಲ್ಲಿ ಗುಂಪು ಗುಂಪಾಗಿ ಕಂಡು ಬಂದು, ಎಳೆಯ ಗಿಡಗಳು, ಮರದ ಚಿಗುರುಗಳು ಹಾಗೂ ಸಸ್ಯಾಗಾರದ ಗಿಡಗಳಲ್ಲಿ ಅಧಿಕ ಹಾನಿಯನ್ನುಂಟು ಮಾಡುತ್ತದೆ. ಮುಂಗಾರಿನ ಸಮಯದಲ್ಲಿ (ಜೂನ್-ಅಗಸ್ಟ್) […]