ಲಾಭ ತರಬೇಕಿದ್ದ ಕಲ್ಲಂಗಡಿ ಕೃಷಿ ನಷ್ಟದ ಹಳ್ಳ ಹಿಡಿಯಿತು: ಅಕಾಲಿಕ ಮಳೆಗೆ ಕಂಗಾಲಾದ ಕೋಟದ ಈ ಕೃಷಿಕ

ಕೋಟ: ಇಲ್ಲಿನ ಕೋಟ ಗಿಳಿಯಾರು ಪರಿಸರದ ಯುವ ಕೃಷಿಕ ಭೋಜ ಪೂಜಾರಿ ತನ್ನ ಎರಡು ಎಕ್ಕರೆ ಪ್ರದೇಶದ ಕೃಷಿ ಭೂಮಿಯಲ್ಲಿ ಕಲ್ಲಂಗಡಿ ಬೆಳೆದಿದ್ದಾರೆ ಆದರೆ ಲಾಭವಾಗಬೇಕಿದ್ದ ಕಲ್ಲಂಗಡಿ ಹಣ್ಣಿನ ಕೃಷಿ ನಷ್ಟದ ಹಳ್ಳ ಹಿಡಿದಿದೆ.

ಪ್ರತಿವರ್ಷ ತಾನು ಪ್ರೀತಿಸುವ ಕೃಷಿ ಭೂಮಿಯಲ್ಲಿ ಭತ್ತ,ಉದ್ದು,ಅವಡೆ ಹೀಗೆ ನಾನಾ ರೀತಿಯ ಬೆಳೆಯ ಜೊತೆ ಲಾಭದಾಯಕ ಕಲ್ಲಂಗಡಿ ಹಣ್ಣಿನ ಕೃಷಿ ಬೆಳೆಯುತ್ತಾರೆ.ಆದರೆ ಪ್ರತಿ ವರ್ಷ ಒಂದಲ್ಲ ಒಂದು ರೀತಿಯ ಸಮಸ್ಯೆ ಎದುರಿಸುವ ಭೋಜ ಪೂಜಾರಿಗೆ ಈ ಬಾರಿ ದೊಡ್ಡ ಮಟ್ಟದ ಸಂಕಷ್ಟ ಎದುರಾಗಿದೆ.ಕಳೆದ ವರ್ಷ ಹಳದಿ ಎಲೆ ರೋಗದಿಂದ ಕಂಗೆಟ್ಟ ಭೋಜ ಪೂಜಾರಿ ಈ ವರ್ಷ ಅತಿ ಉತ್ಸಾಹದಿಂದ ಲಾಭದ ನಿರೀಕ್ಷೆ ಹುಸಿಯಾಗುವಂತೆ ಮಾಡಿತು.ಕೊಯ್ಲಿಗೆ ಬರುವ ಸನ್ನಿವೇಶದಲ್ಲಿ ಅಕಾಲಿಕ ಮಳೆ ಎಂಬುವುದು ಬೆಂಬಿಡದ ಭೂತದಂತೆ ಕಾಡಿತು.
ಸಾಧಾರಣವಾಗಿ ೨೦ರಿಂದ ೨೫ಟನ್ ಬೆಳೆಯ ನೀರಿಕ್ಷೆಯೊಂದಿಗೆ ಕೊಯ್ಲಿಗಿಳಿದ ಭೋಜ ಪೂಜಾರಿ ೧೦ಟನ್ ಗೆ ಸಂತುಷ್ಟರನ್ನಾಗಿಸಿತು.

ಇನ್ನುಳಿದ ಕಾಯಿಗಳ ಕೊಯುಷ್ಟುರಲ್ಲಿ ಮಳೆ ರೌದ್ರ ನೃತನ ಕಲ್ಲಂಗಡಿಯ ಮೇಲೆ ಬೀರಿ ಹುಳಗಳ ಭಾದೆಯೊಂದಿಗೆ ಸುಮಾರು ೧೫ ಟನ್ ಕೊಳೆಯುವಂತೆ ಮಾಡಿತು.ಈ ರೀತಿಯ ಸನ್ನಿವೇಶದಲ್ಲಿ ತನ್ನ ಹೊಲದಲ್ಲಿ ಉಳಿದ ಹಣ್ಣಿನ್ನು ತನ್ನ ಮಕ್ಕಳೊಂದಿಗೆ ಹೊಲಕ್ಕಿಳಿದು ಕೊಯ್ದು ಮಾಧ್ಯಮಕ್ಕೆ ಬಿತ್ತರಿಸಿದರು.ಹೀಗಾದರೆ ರೈತರ ಪಾಡೇನು ಎಂಬ ನೋವನ್ನು ವ್ಯಕ್ತಪಡಿಸಿ ಸರಕಾರ ರೈತರಿಗಾದ ನಷ್ಟಕ್ಕೆ ಸ್ಪಂದಿಸಲು ಆಗ್ರಹಿಸಿದರು.

ಲಾಕ್ ಡೌನ್ ಬಿಸಿಯೂ ಅಕಾಲಿಕ ಮಳೆಯೂ:
ಅತ್ತ ಲಾಕ್ ಡೌನ್ ಬಿಸಿ ಒಂದೆಡೆಯಾದರೆ ಇತ್ತ ಅಕಾಲಿಕ ಮಳೆಯ ರೌದ್ರ ನೃತನ ರೈತನನ್ನು ಮಂಕಾಗಿಸಿದೆ.ತಾನು ನಿರೀಕ್ಷೆಯಲ್ಲಿದ್ದ ಲಾಭದ ಖಾತೆಯನ್ನು ಅಕಾಲಿಕ ಮಳೆ ನುಂಗಿಬಿಟ್ಟಿತು.ಒಳ್ಳೆಯ ದರ ತನ್ನಗೆ ಸಿಗಬಹುದೊ ಎನೋ ಎಂಬ ನಿರೀಕ್ಷಯೊಂದಿಗೆ ಕಾಯಕಕ್ಕೆ ಇಳಿದ ಭೋಜ ಪೂಜಾರಿಗೆ ಲಾಕ ಡೌನ್, ಅಕಾಲಿಕ ಮಳೆ ನಿರೀಕ್ಷೆಯನ್ನು ಹುಸಿಯಾಗುವಂತೆ ಮಾಡಿತು.ಅಲ್ಲದೆ ಸಾಲಮಾಡಿ ಕಲ್ಲಂಗಡಿ ಬೆಳೆದವರ ಪಾಡು ಶೋಚನೀಯವಾಗಿರುವುದು ಬೇಸರದ ಸಂಗತಿ.