ಮುತ್ತಜ್ಜ ನೆಟ್ಟ ಮರ ಮರಿಮೊಮ್ಮಗನಿಗೆ ನೆರಳು ಮಾತ್ರ ಕೊಡ್ತಿಲ್ಲ, ಪ್ರತೀ ದಿನ ಕೊಡ್ತಿದೆ ಸಂಪತ್ತು, ಮರದಿಂದ ಬದಲಾಯ್ತು ಬದುಕು!

ರಾಂಚಿ: ಜಾರ್ಖಂಡ್ ರಾಜಧಾನಿ ರಾಂಚಿಯ ಗ್ರಾಮೀಣ ಭಾಗಗಳಲ್ಲಿ ಹಲಸಿನ ಮರಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಆದರೆ ಮನಾಟು ಗ್ರಾಮದಲ್ಲಿರುವ ಒಂದು ವಿಶಿಷ್ಟ ಹಲಸಿನ ಮರ ಇದೀಗ ಕುಟುಂಬದ ಆರ್ಥಿಕ ಬಲವಾಗಿದ್ದು, ಗ್ರಾಮಸ್ಥರ ಗಮನ ಸೆಳೆಯುತ್ತಿದೆ. ಸುಮಾರು 50 ವರ್ಷಗಳ ಹಿಂದೆ ಸುರೇಶ್ ಅವರ ಮುತ್ತಜ್ಜ ನೆಟ್ಟ ಈ ಮರ ಇಂದು ಕುಟುಂಬಕ್ಕೆ ಆಶೀರ್ವಾದವಾಗಿ ಪರಿಣಮಿಸಿದೆ. ಜೊತೆಗೆ ಗಿಡಿಗಳನ್ನು ಯಾಕೆ ನೆಡಬೇಕು, ಅದನ್ನು ಮರವಾಗುವ ತನಕ ಯಾಕೆ ಬೆಳೆಸಬೇಕು, ಉಳಿಸಬೇಕು ಎನ್ನುವುದನ್ನು ಈ ಒಂದು ಪ್ರಸಂಗ ಅರ್ಥ ಮಾಡಿಸಿದೆ. ಬೃಹತ್ […]

ಬರಿದಾಗುತ್ತಿದೆ ಅಂತರ್ಜಲ: ಕರಾವಳಿಗರಿಗೆ “ಹಾಟ್” ನ್ಯೂಸ್! ಮುಂದಿದೆ ಸಂಕಷ್ಟ?

ದಕ್ಷಿಣ ಕನ್ನಡದಲ್ಲಿ ಬಿಸಿಲಿನ ತೀವ್ರತೆ: ಅಂತರ್ಜಲ ಮಟ್ಟ ಕುಸಿತ, ಕುಡಿಯುವ ನೀರಿಗೆ ಆತಂಕ ರಾಜ್ಯದಲ್ಲಿ ಅತೀ ಹೆಚ್ಚು ಮಳೆಯಾಗುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಈ ಬಾರಿ ಪರಿಸ್ಥಿತಿ ತೀವ್ರವಾಗಿ ಬದಲಾಗಿದೆ. 35–36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದ್ದು, ಬಿಸಿಲಿನ ತೀವ್ರತೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಕುಸಿಯುತ್ತಿದೆ ಅಂತರ್ಜಲ, ಬರಿದಾಗುತ್ತಿವೆ ಬಾವಿಗಳು ಜಿಲ್ಲೆಯ ಹಲವು ಭಾಗಗಳಲ್ಲಿ, ವಿಶೇಷವಾಗಿ ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ಪ್ರದೇಶಗಳಲ್ಲಿ, ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದೆ. ಎಂದಿಗೂ ನೀರಿನಿಂದ […]

ಬದುಕಿನ ಕಷ್ಟಗಳನ್ನು ಮೆಟ್ಟಿ ಸಾವಯವ ಕೃಷಿಯಲ್ಲಿ ಗೆದ್ದ ಮಹಿಳೆಯ ಸಕ್ಸಸ್ ಸ್ಟೋರಿಯಿದು :ಮಹಿಳಾ ದಿನದ ವಿಶೇಷ ಕೃಷಿಗಾಥೆ

2014ರ ಆಗಸ್ಟ್ ತಿಂಗಳಲ್ಲಿ ಕೇರಳದ ಕೆ.ಎಸ್. ಶೀಜ ಅವರ ಜೀವನದಲ್ಲಿ ಅನಿರೀಕ್ಷಿತ ಸಂಕಷ್ಟ ಎದುರಾಯಿತು. ಮೆಕಾನಿಕಲ್ ಇಂಜಿನಿಯರ್ ಆಗಿದ್ದ ಅವರ ಮಗ ಕೊಯಂಬತ್ತೂರಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕಾಲಿಗೆ ದೊಡ್ಡ ಹಾನಿಯಾಯಿತು. ಮಗನ ಚಿಕಿತ್ಸೆಗಾಗಿ ಶೀಜ ಮತ್ತು ಅವರ ಕುಟುಂಬ ತಮಿಳುನಾಡಿಗೆ ತಾತ್ಕಾಲಿಕವಾಗಿ ಸ್ಥಳಾಂತರಗೊಂಡು, ಆಸ್ಪತ್ರೆಯ ಸಮೀಪದಲ್ಲಿರುವ ಮನೆವೊಂದರಲ್ಲಿ ಸುಮಾರು ಒಂದೂವರೆ ವರ್ಷ ವಾಸವಿದ್ದರು. ಆ ಅವಧಿಯಲ್ಲಿ ಆಸ್ಪತ್ರೆ ಓಡಾಟ ಹಾಗೂ ನಿರಂತರ ಚಿಕಿತ್ಸೆಯಿಂದ ಶೀಜ ಮಾನಸಿಕವಾಗಿ ಬಹಳ ಒತ್ತಡ ಅನುಭವಿಸಿದರು. ಈ ಸಮಯದಲ್ಲಿ […]

ರಾಜ್ಯ ಸರಕಾರದ ರೈತಸಿರಿ ಯೋಜನೆಯಿಂದ ಕೃಷಿಕರಿಗೆ ಏನೆಲ್ಲಾ ಲಾಭವಿದೆ? ಈ ಮಾಹಿತಿ ನಿಮಗೆ ಗೊತ್ತಿರಲಿ!

ಸಿರಿಧಾನ್ಯಗಳೆಂದರೆ ರಾಗಿ, ಹಾರಕ, ನವಣೆ, ಸಾಮೆ, ಬರಗು, ಕೊರಲೆ ಊದಲು, ಸಜ್ಜೆ ಮತ್ತು ಜೋಳ ಬೆಳೆಗಳ ಸಮೂಹ. ಇವುಗಳಿಗೆ 5೦೦೦ ಇತಿಹಾಸವಿದೆ. ಭಾರತದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಒರಿಸ್ಸಾ, ಛತ್ತೀಸ್ಗಡ, ಜಾರ್ಖಂಡ್ ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ಉತ್ತರಖಂಡ ರಾಜ್ಯಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಸಿರಿಧಾನ್ಯಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಅವುಗಳಲ್ಲಿ ಪೋಷಕಾಂಶಗಳು ನಾರಿನಿಂದ ಮತ್ತು ಖನಿಜಾಂಶಗಳು ಹೇರಳವಾಗಿದೆ. ಸಿರಿಧಾನ್ಯಗಳು ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಬೊಜ್ಜಿನಂತ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಪೌಷ್ಟಿಕ ಆಹಾರ, […]

ಮನೆಯಲ್ಲೇ ಸುಲಭದಲ್ಲಿ ಅಣಬೆ ಬೆಳೆಸಿ ಒಳ್ಳೆಯ ಹಣ ಗಳಿಸಿ : ಅಣಬೆ ಕೃಷಿಯ ಬಗ್ಗೆ ಸಿಂಪಲ್ಲಾಗ್ ಹೇಳ್ತಿವಿ ಕೇಳಿ!

ಕೃಷಿ ಮಾಡಬೇಕು ಅಂದರೆ ಎಕರೆಗಟ್ಟಲೆ ಜಮೀನು, ಲಕ್ಷಗಟ್ಟಲೆ ಹೂಡಿಕೆ ಬೇಕು ಎನ್ನುವುದು ಸಾಮಾನ್ಯವಾಗಿ ಕೇಳಿಬರುವ ಮಾತು. ಆದರೆ ಇದು ಸಂಪೂರ್ಣ ತಪ್ಪು ಕಲ್ಪನೆ. ಇಂದಿನ ದಿನಗಳಲ್ಲಿ ಅಣಬೆ (ಮಶ್ರೂಮ್) ಬೆಳೆ ಅತ್ಯಂತ ಬೇಡಿಕೆಯಲ್ಲಿದ್ದು, ಹೋಟೆಲ್ಗಳಿಂದ ಹಿಡಿದು ಮನೆಗಳವರೆಗೆ ಎಲ್ಲೆಡೆ ಗ್ರಾಹಕರಿದ್ದಾರೆ. ವಿಶೇಷವೆಂದರೆ, ಈ ಬೆಳೆಗೆ ಹೆಚ್ಚಿನ ಜಾಗವೂ ಅಗತ್ಯವಿಲ್ಲ, ದೊಡ್ಡ ಹೂಡಿಕೆಯೂ ಬೇಕಾಗಿಲ್ಲ. ಮನೆಯ ಒಂದು ಮೂಲೆಯಲ್ಲೇ ಬೆಳೆಸಬಹುದಾದ ಈ ಅಣಬೆಗಳು ಕೈತುಂಬಾ ಆದಾಯ ತರುವ ಸಾಮರ್ಥ್ಯ ಹೊಂದಿವೆ.ಬನ್ನಿ ಹಾಗಾದ್ರೆ ಅಣಬೆ ಕೃಷಿ ಹೇಗೆ ಮಾಡ್ಬೋದು ಅನ್ನೋದ್ರ […]