ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮುನಿಯಾಲ್ ಆಯುರ್ವೇದ ಕಾಲೇಜಿನಲ್ಲಿ ಔಷಧೀಯ ಸಸ್ಯ ಹಾಗೂ ಸೀಡ್ ಬಾಲ್ವಿತರಣೆ

ಮಣಿಪಾಲ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮುನಿಯಾಲ್ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಮೆಡಿಕಲ್ ಸೈನ್ಸಸ್‌ನಲ್ಲಿ ಜೂನ್ 5 ರಂದು ಔಷಧೀಯ ಸಸ್ಯ ವಿತರಣೆ ಹಾಗೂ ಸೀಡ್ ಬಾಲ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿ ಪ್ರಕೃತಿ ಪ್ರೇಮವನ್ನುಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ಡಾ. ಶುಭಾ, ಆಡಳಿತಾಧಿಕಾರಿ ಯೋಗೇಶ್ ಶೆಟ್ಟಿ, ಸ್ನಾತಕೋತ್ತರ ವಿಭಾಗದ ಡೀನ್ ಡಾ. ರವಿಶಂಕರ ಶೆಣೈ, ಡಾ. ದಿನೇಶ್ ನಾಯಕ್ ಹಾಗೂ ದ್ರವ್ಯಗುಣ ವಿಭಾಗದ […]

ಹಸಿರಲೆ ಗೊಬ್ಬರ ಬೀಜಗಳ ಬಳಕೆಯಿಂದ ಮಣ್ಣಿನ ಆರೋಗ್ಯ ವೃದ್ಧಿ.

ಕೃಷಿಯಲ್ಲಿ ಗುಣಮಟ್ಟದ ಆಹಾರ ಉತ್ಪಾದಿಸುವ ದೃಷ್ಟಿಯಿಂದ ಸರ್ಕಾರವು ಸಮಗ್ರ ಪೋಷಕಾಂಶ ನಿರ್ವಹಣೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಮಣ್ಣಿನ ಫಲವತ್ತತೆಯನ್ನು ಉತ್ತಮ ಪಡಿಸುವ ಸಲುವಾಗಿ ಮಣ್ಣಿಗೆ ಹೆಚ್ಚಿನ ಪ್ರಮಾಣದಲ್ಲಿ ವಿವಿಧ ಸಾವಯವ ಗೊಬ್ಬರಗಳನ್ನುಸೇರಿಸುವುದು ಅವಶ್ಯಕವಾಗಿರುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳ ಮಣ್ಣಿನಲ್ಲಿ ಸಾವಯವ ಅಂಶವು ಕಡಿಮೆಯಾಗುತ್ತಾ ಬಂದಿದ್ದು, ಮಣ್ಣಿನ ಆರೋಗ್ಯ ಕ್ಷೀಣಿಸುತ್ತಿದೆ. ರಾಜ್ಯದಲ್ಲಿ ಸುಮಾರು 58.00 ಲಕ್ಷ ಹೆಕ್ಟೇರ್ ಕೃಷಿ ಭೂಮಿಯ ಮಣ್ಣಿನಲ್ಲಿ ಶೇ.0.5ಕ್ಕೂ ಕಡಿಮೆ ಸಾವಯವ ಇಂಗಾಲ ಇರುವುದು ಮಣ್ಣು ಮಾದರಿಗಳ ವಿಶ್ಲೇಷಣೆಯಿಂದ ಕಂಡುಬಂದಿರುತ್ತದೆ. ಆದ್ದರಿಂದ ಮಣ್ಣಿಗೆ […]

ಕೇರಳಂನಿಂದಲೇ ಮುಂಗಾರು ಮಳೆ ಆರಂಭಕ್ಕೆ ಕಾರಣವೇನು?

ದೇಶದ ಹಲವು ಭಾಗಗಳಲ್ಲಿ ಬಿಸಿಗಾಳಿ ಮತ್ತು ಉಷ್ಣಾಂಶ ಏರಿಕೆಯಿಂದ ಜನರು ತತ್ತರಿಸುತ್ತಿರುವ ನಡುವೆಯೇ ಈ ಬಾರಿಯ ನೈಋತ್ಯ ಮುಂಗಾರು ಸ್ವಲ್ಪ ವಿಳಂಬವಾಗಿ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಆರಂಭದಲ್ಲಿ ಮೇ 26ರಂದೇ ಕೇರಳಕ್ಕೆ ಮುಂಗಾರು ಆಗಮಿಸಬಹುದು ಎಂದು ಅಂದಾಜಿಸಲಾಗಿದ್ದರೂ, ಬದಲಾಗಿರುವ ಹವಾಮಾನ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಮುಂಗಾರು ಪ್ರವೇಶ ಮುಂದೂಡಿಕೆಯಾಗಿದೆ. ಮುಂಗಾರು ಆರಂಭವನ್ನು ಹೇಗೆ ಘೋಷಿಸಲಾಗುತ್ತದೆ?ಕೇರಳದಲ್ಲಿರುವ 14 ಹವಾಮಾನ ಕೇಂದ್ರಗಳ ಪೈಕಿ ಕನಿಷ್ಠ 60 ಶೇಕಡಾ ಕೇಂದ್ರಗಳಲ್ಲಿ 2.5 ಮಿ.ಮೀ. ಅಥವಾ […]

ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ‘ಕೇಂದ್ರ ರೈತ ಐಡಿ’ ಕಡ್ಡಾಯ

ಮಂಗಳೂರು: ಕೇಂದ್ರ ಸರ್ಕಾರದ ಬರ ಪರಿಹಾರ, ಬೆಳೆವಿಮೆ ಹಾಗೂ ಪಿ.ಎಂ. ಕಿಸಾನ್ ಯೋಜನೆಯಡಿ ಸೌಲಭ್ಯಗಳನ್ನು ಪಡೆಯಲು ರಾಜ್ಯದ “ಫ್ರೂಟ್ಸ್” ಮಾದರಿಯಂತೆಯೇ ಕೇಂದ್ರ ಸರ್ಕಾರವು ‘ಕೇಂದ್ರ ರೈತ ಐಡಿ’ ವಿತರಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ. ಮಂಗಳೂರು ತಾಲೂಕಿನಲ್ಲಿ ಒಟ್ಟು ಎಫ್.ಐ.ಡಿ. ಹೊಂದಿರುವ 35,990 ರೈತರ ಪೈಕಿ ಇನ್ನು 14,520 ರೈತರು ನೋಂದಣಿಗೆ ಬಾಕಿ ಉಳಿದಿದ್ದಾರೆ. ರೈತರು ಮೊದಲು ಇ-ಕೆವೈಸಿ  ಮಾಡಿಸಿ, ಬಳಿಕ ವಿದ್ಯುನ್ಮಾನ ಸಹಮತಿ ಪತ್ರ ನೀಡುವುದು ಕಡ್ಡಾಯವಾಗಿದೆ. ಇದರ ನಂತರವಷ್ಟೇ ಕೇಂದ್ರದ ರೈತ ಐಡಿ ಸೃಜನೆಯಾಗುತ್ತದೆ. ಇನ್ನು ಕೆಲವೇ […]

ಮಂಗಳೂರು: ಪಶುಪಾಲನಾ ಚಟುವಟಿಕೆಗಳ ಬಗ್ಗೆ ತರಬೇತಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಆಸಕ್ತ ರೈತರಿಗೆ ಪಶುಪಾಲನಾ ಇಲಾಖೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ಮಂಗಳೂರು ವತಿಯಿಂದ ಜೂನ್-2026ರ ಮಾಹೆಯಲ್ಲಿ ಪಶುಪಾಲನಾ ಚಟುವಟಿಕೆಗಳ ಬಗ್ಗೆ ತರಬೇತಿಯನ್ನು ಏರ್ಪಡಿಸಲಾಗಿದೆ. ತರಬೇತಿ ವಿವರ: ರೈತರಿಗೆ ಹಂದಿ ಸಾಕಾಣಿಕೆ ತರಬೇತಿ ಜೂನ್ 16 ರಿಂದ 17 ರವರೆಗೆ  ಹಾಗೂ ಕುರಿ/ಮೇಕೆ ಸಾಕಾಣಿಕೆ ತರಬೇತಿ ಜೂನ್ 23 ರಿಂದ 24 ರವರೆಗೆ ನಡೆಯಲಿದೆ.  ಹೆಚ್ಚಿನ ಮಾಹಿತಿಗೆ ಆಸಕ್ತ ರೈತ ಬಾಂಧವರು  ಮಂಗಳೂರು ತಾಲೂಕು – 9243306956/ 0824-2950369, ಉಳ್ಳಾಲ ತಾಲೂಕು […]