ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ‘ಕೇಂದ್ರ ರೈತ ಐಡಿ’ ಕಡ್ಡಾಯ

ಮಂಗಳೂರು: ಕೇಂದ್ರ ಸರ್ಕಾರದ ಬರ ಪರಿಹಾರ, ಬೆಳೆವಿಮೆ ಹಾಗೂ ಪಿ.ಎಂ. ಕಿಸಾನ್ ಯೋಜನೆಯಡಿ ಸೌಲಭ್ಯಗಳನ್ನು ಪಡೆಯಲು ರಾಜ್ಯದ “ಫ್ರೂಟ್ಸ್” ಮಾದರಿಯಂತೆಯೇ ಕೇಂದ್ರ ಸರ್ಕಾರವು ‘ಕೇಂದ್ರ ರೈತ ಐಡಿ’ ವಿತರಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ. ಮಂಗಳೂರು ತಾಲೂಕಿನಲ್ಲಿ ಒಟ್ಟು ಎಫ್.ಐ.ಡಿ. ಹೊಂದಿರುವ 35,990 ರೈತರ ಪೈಕಿ ಇನ್ನು 14,520 ರೈತರು ನೋಂದಣಿಗೆ ಬಾಕಿ ಉಳಿದಿದ್ದಾರೆ. ರೈತರು ಮೊದಲು ಇ-ಕೆವೈಸಿ  ಮಾಡಿಸಿ, ಬಳಿಕ ವಿದ್ಯುನ್ಮಾನ ಸಹಮತಿ ಪತ್ರ ನೀಡುವುದು ಕಡ್ಡಾಯವಾಗಿದೆ. ಇದರ ನಂತರವಷ್ಟೇ ಕೇಂದ್ರದ ರೈತ ಐಡಿ ಸೃಜನೆಯಾಗುತ್ತದೆ. ಇನ್ನು ಕೆಲವೇ […]

ಮಂಗಳೂರು: ಪಶುಪಾಲನಾ ಚಟುವಟಿಕೆಗಳ ಬಗ್ಗೆ ತರಬೇತಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಆಸಕ್ತ ರೈತರಿಗೆ ಪಶುಪಾಲನಾ ಇಲಾಖೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ಮಂಗಳೂರು ವತಿಯಿಂದ ಜೂನ್-2026ರ ಮಾಹೆಯಲ್ಲಿ ಪಶುಪಾಲನಾ ಚಟುವಟಿಕೆಗಳ ಬಗ್ಗೆ ತರಬೇತಿಯನ್ನು ಏರ್ಪಡಿಸಲಾಗಿದೆ. ತರಬೇತಿ ವಿವರ: ರೈತರಿಗೆ ಹಂದಿ ಸಾಕಾಣಿಕೆ ತರಬೇತಿ ಜೂನ್ 16 ರಿಂದ 17 ರವರೆಗೆ  ಹಾಗೂ ಕುರಿ/ಮೇಕೆ ಸಾಕಾಣಿಕೆ ತರಬೇತಿ ಜೂನ್ 23 ರಿಂದ 24 ರವರೆಗೆ ನಡೆಯಲಿದೆ.  ಹೆಚ್ಚಿನ ಮಾಹಿತಿಗೆ ಆಸಕ್ತ ರೈತ ಬಾಂಧವರು  ಮಂಗಳೂರು ತಾಲೂಕು – 9243306956/ 0824-2950369, ಉಳ್ಳಾಲ ತಾಲೂಕು […]

ಚಾರಣಿಗರಿಗೆ ಸಿಹಿಸುದ್ದಿ: ಜೂನ್ 1ರಿಂದ ಈ ಎಲ್ಲಾ ಟ್ರೆಕ್ಕಿಂಗ್ ಗಳಿಗೆ ಗ್ರೀನ್ ಸಿಗ್ನಲ್

ಬೆಳ್ತಂಗಡಿ: ತಾಲೂಕಿನ ಪ್ರಕೃತಿ ಪ್ರಿಯರು ಮತ್ತು ಚಾರಣಿಗರಿಗೆ ಸಂತಸದ ಸುದ್ದಿ ಸಿಕ್ಕಿದೆ. ಮಳೆಗಾಲ ಆರಂಭದ ಹೊತ್ತಿಗೆ ಪಶ್ಚಿಮ ಘಟ್ಟದ ಹಸಿರು ಮರುಕಳಿಸಿದ್ದು, ಪ್ರಮುಖ ಚಾರಣ ಸ್ಥಳಗಳು ಹಾಗೂ ಜಲಪಾತಗಳು ಮತ್ತೆ ಪ್ರವಾಸಿಗರನ್ನು ಆಕರ್ಷಿಸಲು ಸಜ್ಜಾಗಿವೆ. ಜೂನ್ 1ರಿಂದ ನೇತ್ರಾವತಿ ಪೀಕ್, ಬಂಡಾಜೆ ಫಾಲ್ಸ್, ಗಡಾಯಿಕಲ್ಲು ಸೇರಿದಂತೆ ಹಲವು ಪ್ರವಾಸಿ ತಾಣಗಳು ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗುತ್ತಿದೆ. ಕಳೆದ ಜನವರಿಯಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗವು ಕಾಡಿಚ್ಚಿನ ಭೀತಿ ಮತ್ತು ಅರಣ್ಯ ಸಂರಕ್ಷಣೆ ದೃಷ್ಟಿಯಿಂದ ಈ ಪ್ರದೇಶಗಳಿಗೆ ಪ್ರವೇಶ ನಿಷೇಧ […]

ಗ್ರೀನ್ ಸ್ಪೇಸ್, ಪೀಸ್‌ಫುಲ್ ಮೈಂಡ್: ಮನೆ ಮತ್ತು ಆಫೀಸ್‌ನಲ್ಲಿರಲಿ ಒಳಾಂಗಣ ಗಿಡಗಳು

ಇಂದಿನ ವೇಗದ ಜೀವನಶೈಲಿಯಲ್ಲಿ ಮಾನಸಿಕ ಒತ್ತಡ, ಆತಂಕ ಮತ್ತು ದಣಿವು ಸಾಮಾನ್ಯ ಸಮಸ್ಯೆಗಳಾಗಿವೆ. ಇಂತಹ ಸಂದರ್ಭದಲ್ಲಿ ಮನೆಯೊಳಗೆ ಅಥವಾ ಆಫೀಸ್ ಕೆಲಸದ ಸ್ಥಳದಲ್ಲಿ ಸಣ್ಣ ಸಣ್ಣ ಹಸಿರು ಗಿಡಗಳನ್ನು ಬೆಳೆಸುವುದು ಕೇವಲ ಅಲಂಕಾರವಲ್ಲ, ಅದು ಮನಸ್ಸಿಗೆ ನೆಮ್ಮದಿ ನೀಡುವ ಸಹಜ ಚಿಕಿತ್ಸೆ ಎನ್ನಬಹುದು. ಮನಸ್ಸಿಗೆ ಒಳ್ಳೆಯದು ಹಸಿರು ಗಿಡಗಳು ಮನೋವಿಜ್ಞಾನ ತಜ್ಞರ ಪ್ರಕಾರ, ಪ್ರಕೃತಿಯೊಂದಿಗೆ ಸಂಪರ್ಕ ಹೊಂದಿರುವವರು ಹೆಚ್ಚು ಶಾಂತ ಮನಸ್ಥಿತಿಯನ್ನು ಅನುಭವಿಸುತ್ತಾರೆ. ಮನೆಯ ಕೋಣೆ, ಬಾಲ್ಕನಿ ಅಥವಾ ಕಚೇರಿ ಮೇಜಿನ ಮೇಲೆ ಇರುವ ಹಸಿರು ಗಿಡಗಳು […]

ತೆಂಗು ಬೆಳೆಗಾರರಿಗೆ ಸಿಹಿ ಸುದ್ದಿ: 3,250 ರೂ.ಗೆ 65 ಸಾವಿರ ರೂ. ವಿಮಾ ರಕ್ಷಣೆ! ಜೂನ್‌ನಿಂದ ಯೋಜನೆ ಜಾರಿ?

ತೋಟಗಾರಿಕಾ ಇಲಾಖೆ ವತಿಯಿಂದ ರಾಜ್ಯದ ತೆಂಗು ಬೆಳೆಗಾರರಿಗೆ ಮಹತ್ವದ ಭರವಸೆ ದೊರೆಯುವ ಸಾಧ್ಯತೆ ಇದೆ. ಹಲವು ವರ್ಷಗಳಿಂದ ರೈತರು ಕೇಳುತ್ತಿದ್ದ ತೆಂಗು ಬೆಳೆ ವಿಮೆ ಯೋಜನೆ ಇದೀಗ ಅಂತಿಮ ಹಂತ ತಲುಪಿದ್ದು, ಜೂನ್ ತಿಂಗಳಿನಿಂದ ‘ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ’ ಜಾರಿಗೆ ಬರಲಿದೆ ಎನ್ನಲಾಗಿದೆ. ಈ ಯೋಜನೆಯಡಿ ಪ್ರತಿ ಹೆಕ್ಟೇರ್ ತೆಂಗು ಬೆಳೆಗೆ 65,000 ರೂ.ವರೆಗೆ ವಿಮಾ ರಕ್ಷಣೆ ಸಿಗಲಿದ್ದು, ರೈತರು ಕೇವಲ 5% ಪ್ರೀಮಿಯಂ ಅಂದರೆ ಸುಮಾರು 3,250 ರೂ. ಪಾವತಿಸಿದರೆ ಸಾಕಾಗುತ್ತದೆ. ಪ್ರಕೃತಿ […]