ಇಸ್ರೇಲ್ ನಲ್ಲಿ ಎಲ್ಲ ಸೂಪರ್ ಚಾರ್ಜಿಂಗ್ ಸ್ಟೇಷನ್ ಗಳು ಉಚಿತ ಬಳಕೆಗೆ ಲಭ್ಯ ಎಂದ ಟೆಸ್ಲಾ ದಿಗ್ಗಜ

ಕ್ಯಾಲಿಫೋರ್ನಿಯಾ: ಟೆಸ್ಲಾ ಮಾಲೀಕ ಏಲಾನ್ ಮಸ್ಕ್, ಇಸ್ರೇಲ್‌ನಲ್ಲಿ ಬಳಕೆದಾರರು ತಮ್ಮ ವಾಹನಗಳನ್ನು ಉಚಿತವಾಗಿ ಚಾರ್ಜ್ ಮಾಡಬಹುದು ಎಂದು X ನಲ್ಲಿ ತಿಳಿಸಿದ್ದಾರೆ. ಇಸ್ರೇಲ್-ಹಮಾಸ್ ಯುದ್ದದ ಉದ್ವಿಗ್ನತೆಯ ನಡುವೆ ಪ್ರಯಾಣವನ್ನು ಸುಲಭಗೊಳಿಸಲು ಯು.ಎಸ್ ವಾಹನ ತಯಾರಕ ಎಲ್ಲಾ ಸೂಪರ್ಚಾರ್ಜರ್‌ ಸ್ಟೇಷನ್ ಗಳನ್ನು ಬಳಕೆದಾರರಿಗೆ ಮುಕ್ತವಾಗಿಸಿದ್ದಾರೆ. ಟೆಸ್ಲಾ ಇಸ್ರೇಲ್‌ನಲ್ಲಿ 22 ಸೂಪರ್‌ಚಾರ್ಜರ್ ಸ್ಟೇಷನ್‌ಗಳನ್ನು ಹೊಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಸೂಪರ್‌ಚಾರ್ಜರ್‌ಗಳು ಟೆಸ್ಲಾದ ಅತ್ಯಂತ ವೇಗದ ಚಾರ್ಜಿಂಗ್ ಸ್ಟೇಷನ್‌ಗಳಾಗಿದ್ದು ಅದು 250 kW ವರೆಗೆ ಶಕ್ತಿಯನ್ನು ಒದಗಿಸುತ್ತದೆ. ಟೆಸ್ಲಾದ ಎಲೆಕ್ಟ್ರಿಕ್ ವಾಹನಗಳು […]

ಶೇ 6.1 ರಿಂದ 6.3ಕ್ಕೆ ಜಿಡಿಪಿ ಅಂದಾಜಿಸಿದ ಐಎಂಎಫ್​ : ಏರುಗತಿಯಲ್ಲಿ ಭಾರತದ ಆರ್ಥಿಕತೆ

ನವದೆಹಲಿ : ಆರ್ಥಿಕ ಪ್ರಗತಿ ಸಾಧಿಸುವಲ್ಲಿ ವಿಶ್ವ ಪ್ರಬಲ ರಾಷ್ಟ್ರಗಳನ್ನು ಹಿಂದಿಕ್ಕಿ ಮುಂಚೂಣಿಯಲ್ಲಿ ಸಾಗುತ್ತಿರುವ ಭಾರತ, ಪ್ರಸ್ತುತ ವರ್ಷದಲ್ಲಿ ತನ್ನ ಹಿಂದಿನ ಅಂದಾಜಿಗಿಂತ ಹೆಚ್ಚಿನ ದರದಲ್ಲಿ ಅಭಿವೃದ್ಧಿ ಸಾಧಿಸಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್​) ತನ್ನ ವರದಿಯಲ್ಲಿ ತಿಳಿಸಿದೆ.ಭಾರತವು ಪ್ರಸ್ತುತ ವರ್ಷದಲ್ಲಿ ಶೇ. 6.1ರಷ್ಟು ಆರ್ಥಿಕ ಪ್ರಗತಿ ಹೊಂದುವುದಾಗಿ ಅಂದಾಜಿಸಲಾಗಿತ್ತು. ಆದರೆ ಮೀರಿ ಈ ಬಾರಿ ಶೇ. 6.3ರಷ್ಟು ಆರ್ಥಿಕ ಪ್ರಗತಿ ಕಾಣಲಿದೆ ಎಂದು ಐಎಂಎಫ್​ ವಿಶ್ವಾಸ ವ್ಯಕ್ತಪಡಿಸಿದೆ. ಭಾರತದಲ್ಲಿನ ಆರ್ಥಿಕ ಚಟುವಟಿಕೆಗಳು ತೀವ್ರ ಪ್ರಮಾಣದಲ್ಲಿ ಏರಿಕೆಯಾದ […]

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 72 ಹೊಸ ಕೋವಿಡ್​ ಪ್ರಕರಣ ದಾಖಲು

ನವದೆಹಲಿ: ಭಾರತದಲ್ಲಿ ಒಂದೇ ದಿನದಲ್ಲಿ 72 ಹೊಸ ಕೋವಿಡ್​​ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸದ್ಯ ದೇಶದಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 348 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ದತ್ತಾಂಶವನ್ನು ಬಿಡುಗಡೆ ಮಾಡಿದೆ.ಕೋವಿಡ್​ ಹೊಸ ರೂಪಾಂತಾರಿ ತಳಿಗಳಿಂದಾಗಿ ಭಾರತ ಸೇರಿದಂತೆ ಹಲವು ದೇಶದಲ್ಲಿ ಸೋಂಕಿನ ಪ್ರಕರಣಗಳ ಏರಿಕೆ ಕಾಣುತ್ತಿವೆ. ಭಾರತ ಸೇರಿದಂತೆ ಜಗತ್ತಿನೆಲ್ಲೆಡೆ ಕೋವಿಡ್​ನ ಹೊಸ ಉಪತಳಿಗಳಾದ ಏರಿಸ್​, ಎಕ್ಸ್​ಬಿಬಿ ಸೇರಿದಂತೆ ಹಲವು ತಳಿಗಳು ಹೊಸ ಸೋಂಕಿನ ಪ್ರಕರಣಗಳಿಗೆ ಕಾರಣವಾಗಿದೆ. ಈ ಸೋಂಕುಗಳಿಂದ ಪ್ರಕರಣಗಳು ದಾಖಲಾಗುತ್ತಿದ್ದರೂ, […]

ಹಮಾಸ್ ಉಗ್ರ ತಾಣಗಳು ಭಗ್ನಾವಶೇಷ; ಗಾಜಾ ನಿಯಂತ್ರಣ ಮರಳಿ ಪಡೆದ ಇಸ್ರೇಲ್

ಟೆಲ್ ಅವೀವ್: ಇಸ್ರೇಲ್ ಮೇಲೆ ಹಮಾಸ್ ನ ಹಠಾತ್ ದಾಳಿಯು 3,000 ಕ್ಕೂ ಹೆಚ್ಚು ಜನರನ್ನು ಕೊಂದು ದುರಂತದ ಯುದ್ಧವನ್ನು ಪ್ರಚೋದಿಸಿದ ನಾಲ್ಕು ದಿನಗಳ ನಂತರ, ಉಗ್ರರಿಂದ ಗುಂಪಿನಿಂದ ಗಾಜಾ ಗಡಿ ಪ್ರದೇಶಗಳ ನಿಯಂತ್ರಣವನ್ನು ಮರಳಿ ಪಡೆದಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ರಾಷ್ಟ್ರದ 75 ವರ್ಷಗಳ ಇತಿಹಾಸದಲ್ಲಿ, ಅತ್ಯಂತ ಕೆಟ್ಟ ದಾಳಿಯಲ್ಲಿ ಇಸ್ರೇಲ್‌ನಲ್ಲಿ 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಗಾಜಾದಲ್ಲಿ 900 ಸಾವುಗಳ ವರದಿಯಾಗಿದೆ. ಮಂಗಳವಾರ, ಇಸ್ರೇಲ್‌ನ ಸೇನೆಯು ಗಾಜಾದ ಗಡಿ ಪ್ರದೇಶಗಳ ಬಳಿ ಸುಮಾರು […]

ಆರೋಗ್ಯ ತಜ್ಞರಿಂದ ಎಚ್ಚರಿಕೆ : ವಾಯು ಮಾಲಿನ್ಯದ ಹೆಚ್ಚಳ ಮಿದುಳಿನಲ್ಲಿ ಊರಿಯುತಕ್ಕೆ ಕಾರಣ

ನವದೆಹಲಿ: ದೀಪಾವಳಿ ಆರಂಭವಾಗುತ್ತಿದ್ದಂತೆ ದೆಹಲಿ – ಎನ್​ಸಿಆರ್​ಗಳಲ್ಲಿ ಗಾಳಿ ಮಟ್ಟ ಕುಸಿಯುತ್ತದೆ. ಈ ವಾಯು ಮಾಲಿನ್ಯವೂ ಮಿದುಳಿನಲ್ಲಿ ಊರಿಯೂತಕ್ಕೆ ಕಾರಣವಾಗುವ ಸಾಧ್ಯತೆ ಇದ್ದು, ಇದು ಆತಂಕ, ಖಿನ್ನತೆ ಮತ್ತು ಸ್ಮರಣೆ ಸಮಸ್ಯೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ. ಅಕ್ಟೋಬರ್​ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನದ ನಿಮಿತ್ತ ಈ ಕುರಿತು ಎಚ್ಚರಿಸಿರುವ ವೈದ್ಯರು, ಮಾಲಿನ್ಯವೂ ಮನುಷ್ಯನ ಯೋಗಕ್ಷೇಮಕ್ಕೆ ಹಾನಿ ಮಾಡುತ್ತದೆ ಎಂಬ ಅಂಶವನ್ನು ಒತ್ತಿ ಹೇಳಿದ್ದಾರೆ. ದೆಹಲಿಯಲ್ಲಿ ವಾಯು ಗುಣಮಟ್ಟ ಕುಸಿತವೂ ಅನೇಕ ದೈಹಿಕ ಮತ್ತು ಮಾನಸಿಕ ಆರೋಗ್ಯ […]