ಡಿಸೆಂಬರ್​ 2ನೇ ವಾರದಲ್ಲಿ ಸುಪ್ರೀಂಕೋರ್ಟ್​ನಿಂದ ತೀರ್ಪು ಪ್ರಕಟ ಸಾಧ್ಯತೆ : 370ನೇ ವಿಧಿ ರದ್ದು ಪ್ರಕರಣ

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಸಂವಿಧಾನದ 370ನೇ ವಿಧಿ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿ, ರಾಜ್ಯವನ್ನು 2 ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಾಗಿಸಿದ್ದರ ವಿರುದ್ಧದ ಅರ್ಜಿಗಳ ಅಂತಿಮ ತೀರ್ಪನ್ನು ಸುಪ್ರೀಂಕೋರ್ಟ್​ ಈ ತಿಂಗಳ (ಡಿಸೆಂಬರ್​) ಎರಡನೇ ವಾರದಲ್ಲಿ ನೀಡುವ ಸಾಧ್ಯತೆ ಇದೆ.ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ನೇತೃತ್ವದ ಸಾಂವಿಧಾನಿಕ ಪೀಠ ಪ್ರಕರಣ ವಿಚಾರಣೆಯನ್ನು ಮುಗಿಸಿದ್ದು, ಡಿಸೆಂಬರ್​ ಎರಡನೇ ವಾರದ ಅಂತ್ಯದೊಳಗೆ ತನ್ನ ತೀರ್ಪನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ಈಟಿವಿ ಭಾರತ್​ಗೆ […]

ಐಸಿಆರ್​ಎ ವರದಿ : ನಿಧಾನವಾಗಲಿದೆ ಐಟಿ ಉದ್ಯೋಗಿಗಳ ನೇಮಕಾತಿ

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ಅಲೆಯ ನಂತರ ಡಿಜಿಟಲೀಕರಣದ ಬೇಡಿಕೆ ವೇಗಗೊಂಡಿದ್ದರಿಂದ, ಭಾರತೀಯ ಐಟಿ ಸೇವಾ ಕಂಪನಿಗಳು ಹಣಕಾಸು ವರ್ಷ 2021 ರ ಎರಡನೇ ತ್ರೈಮಾಸಿಕದಿಂದ ಹಣಕಾಸು ವರ್ಷ 2023 ರ ಎರಡನೇ ತ್ರೈಮಾಸಿಕದವರೆಗೆ ವ್ಯಾಪಕವಾಗಿ ಉದ್ಯೋಗಿಗಳನ್ನು ನೇಮಿಸಿಕೊಂಡಿವೆ ಎಂದು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಐಸಿಆರ್​ಎ ವರದಿ ತಿಳಿಸಿದೆ.ಮುಂದಿನ ಎರಡು-ಮೂರು ತ್ರೈಮಾಸಿಕಗಳಲ್ಲಿ ಭಾರತದ ಐಟಿ ವಲಯದ ನೇಮಕಾತಿ ಬಹುತೇಕ ಸ್ತಬ್ಧವಾಗುವ ಸಾಧ್ಯತೆಯಿದೆ ಎಂದು ಹೊಸ ವರದಿಯೊಂದು ಸೋಮವಾರ ತಿಳಿಸಿದೆ. ಬೇಡಿಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಐಟಿ ಕಂಪನಿಗಳು ತಮ್ಮ […]

ಬಂಡುಕೋರರ ಗುಂಡಿನ ಚಕಮಕಿಯಲ್ಲಿ 13 ಜನರ ಹತ್ಯೆ : ಮಣಿಪುರದಲ್ಲಿ ಮತ್ತೆ ಸಂಘರ್ಷ

ಇಂಫಾಲ: ತೆಂಗನೌಪಾಲ್ ಜಿಲ್ಲೆಯ ಲೀತು ಎಂಬ ಗ್ರಾಮದಲ್ಲಿ ಸೋಮವಾರ ಈ ದಾಳಿ ನಡೆದಿದೆ. ಮ್ಯಾನ್ಮಾರ್​ಗೆ ತೆರಳುತ್ತಿದ್ದ ಗುಂಪಿನ ಮೇಲೆ ಬಂಡುಕೋರರ ಪಡೆ ಗುಂಡಿನ ದಾಳಿ ಮಾಡಿದೆ. ಇದರಿಂದ ಸ್ಥಳದಲ್ಲೇ 13 ಮಂದಿ ಪ್ರಾಣ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಸೋಮವಾರ ನಡೆದ ದಾಳಿಯಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ. ಭದ್ರತಾ ಪಡೆಯಿಂದ ಘಟನೆ ನಡೆದ ಗ್ರಾಮದಲ್ಲಿ ಹೈಅಲರ್ಟ್​ ಘೋಷಿಸಲಾಗಿದೆ.ಜನಾಂಗೀಯ ಸಂಘರ್ಷಕ್ಕೀಡಾಗಿ ಹಿಂಸಾಚಾರ ಅನುಭವಿಸಿದ್ದ ಮಣಿಪುರದಲ್ಲಿ ಮತ್ತೆ ಗಲಾಟೆ ಮರುಕಳಿಸಿದೆ. ಕೆಲ ದಿನಗಳಿಂದ ಶಾಂತವಾಗಿದ್ದ ಗುಡ್ಡಗಾಡು ರಾಜ್ಯ ಮಣಿಪುರದಲ್ಲಿ ಮತ್ತೆ […]

ಅಂಚೆ ಕಚೇರಿ ತಿದ್ದುಪಡಿ ಮಸೂದೆ ಅಂಗೀಕಾರ : ಅಂಚೆ ಕಚೇರಿ ಖಾಸಗೀಕರಣ ಇಲ್ಲ- ಕೇಂದ್ರ ಸರ್ಕಾರ

ನವದೆಹಲಿ: ಬದಲಿಗೆ ದೇಶಾದ್ಯಂತ ಸುಮಾರು 5 ಸಾವಿರ ಹೊಸ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇನ್ನೂ 5746 ಕಚೇರಿಗಳನ್ನು ತೆರೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.ದೇಶದ ಅತ್ಯಂತ ಹಳೆಯ ಸೇವೆಯಾದ ಅಂಚೆ ಕಚೇರಿಯನ್ನು ಖಾಸಗೀಕರಣ ಮಾಡುವುದಿಲ್ಲ.2014 ರಿಂದ 2023 ರ ವರೆಗೆ ಸುಮಾರು 5 ಸಾವಿರ ಅಂಚೆ ಕಚೇರಿಗಳನ್ನು ತೆರೆಯಲಾಗಿದೆ. ಸುಮಾರು 5,746 ಹೊಸ ಕಚೇರಿಗಳನ್ನು ತೆರೆಯುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. ಅಂಚೆ ಸೇವೆಗಳು ವಿಸ್ತರಣೆ: ಅಂಚೆ ಸೇವೆಗಳು, ಕಚೇರಿಗಳು […]

ಟೀಮ್ ಇಂಡಿಯಾದ ಕೋಚ್ ದ್ರಾವಿಡ್ ನಿಂದ ಚಾಮುಂಡಿ ದೇವಿಯ ದರ್ಶನ

ಟೀಮ್ ಇಂಡಿಯಾದ ಕೋಚ್‌ ರಾಹುಲ್ ದ್ರಾವಿಡ್ ಸದ್ಯ ರಜೆಯ ಮೂಡ್‌ನಲ್ಲಿದ್ದಾರೆ. ಸದ್ಯ ಅವರು ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಗಂಣದಲ್ಲಿ ಮೈಸೂರ ವಲಯ ಆಯೋಜಿಸಿದ್ದ ಕೂಚ್ ಬೆಹಾರ್‌ ರಾಷ್ಟ್ರೀಯ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಮಗ ಸುಮೀತ್ ದ್ರಾವಿಡ್‌ ಆಟವನ್ನು ಕಣ್ಣು ತುಂಬಿಕೊಳ್ಳಲು ಆಗಮಿಸಿದ್ದರು. ಭಾರತ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಬೆಳೆಸಲಿದೆ.ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್‌ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದು ದೇವಿಯ ದರ್ಶನ ಪಡೆದಿದ್ದಾರೆ. ದೇವಿಯ ದರ್ಶನದ ವೇಳೆ ರಾಹುಲ್‌ಗೆ ಪತ್ನಿ […]