ಸಚಿವ ಅನುರಾಗ್ ಠಾಕೂರ್ ಘೋಷಣೆ: ದೇಶದಲ್ಲಿ ಮೊದಲ ಬಾರಿಗೆ ‘ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌’ ಆಯೋಜನೆ

ಇತ್ತೀಚಿನ ಹ್ಯಾಂಗ್‌ಝೌ ಏಷ್ಯನ್ ಪ್ಯಾರಾ ಗೇಮ್ಸ್ ತಾರೆಯರಾದ ಶೀತಲ್ ದೇವಿ, ಭಾವಿನಾ ಪಟೇಲ್, ಏಕ್ತಾ ಭಯ್, ನೀರಜ್ ಯಾದವ್, ಸಿಂಗ್‌ರಾಜ್, ಮನೀಶ್, ಸೋನಾಲ್, ರಾಕೇಶ್ ಕುಮಾರ್ ಮತ್ತು ಸರಿತಾ ಸೇರಿದಂತೆ ಇತರರು ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌ನ ಮೊದಲ ಆವೃತ್ತಿಯಲ್ಲಿ ತಮ್ಮ ರಾಜ್ಯಗಳನ್ನು ಪ್ರತಿನಿಧಿಸುವ ನಿರೀಕ್ಷೆಯಿದೆ.ಹ್ಯಾಂಗ್‌ಝೌನಲ್ಲಿ ಇತ್ತೀಚೆಗೆ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಅಭೂತಪೂರ್ವ 111 ಪದಕಗಳನ್ನು ಗೆದ್ದ ಭಾರತೀಯ ಪ್ಯಾರಾ-ಅಥ್ಲೀಟ್‌ಗಳ ಸಾಧನೆ ಶ್ಲಾಘನೀಯ ಎಂದು ಸಚಿವರು ಬಣ್ಣಿಸಿದ್ದಾರೆ. ಮೂರು ಕ್ರೀಡಾಂಗಣಗಳಲ್ಲಿ (ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ) […]

ಮಾನದಂಡಗಳನ್ನು ಉಲ್ಲಂಘಿಸಿದ ಹಿನ್ನೆಲೆ : ಏರ್ ಇಂಡಿಯಾಗೆ ₹10 ಲಕ್ಷ ದಂಡ ವಿಧಿಸಿದ ಡಿಜಿಸಿಎ

ನವದೆಹಲಿ: ಮಾನದಂಡಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎನ್ನುವ ಕಾರಣಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಏರ್ ಇಂಡಿಯಾಗೆ 10 ಲಕ್ಷ ದಂಡ ವಿಧಿಸಿದೆ.ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮಾನದಂಡಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂಬ ಕಾರಣಕ್ಕೆ ಏರ್ ಇಂಡಿಯಾಗೆ ಎರಡನೇ ಬಾರಿಗೆ 10 ಲಕ್ಷ ರೂಗಳನ್ನ ದಂಡ ವಿಧಿಸಲಾಗಿದೆ. ಏರ್ ಇಂಡಿಯಾ ಸರಿಯಾಗಿ ಮಾನದಂಡಗಳನ್ನು ಪಾಲಿಸಿಲ್ಲ, ವಿಳಂಬವಾದ ವಿಮಾನಗಳಿಂದ ತೊಂದರೆಗೊಳಗಾದ ಪ್ರಯಾಣಿಕರಿಗೆ ಹೋಟೆಲ್ ವ್ಯವಸ್ಥೆ ಮಾಡದಿರುವುದು, ಸಿಬ್ಬಂದಿಗೆ ತರಬೇತಿ ನೀಡದಿರುವುದು ಮತ್ತು ಯೋಗ್ಯವಲ್ಲದ ಆಸನಗಳಲ್ಲಿ ಪ್ರಯಾಣಿಸಿರುವುದಕ್ಕಾಗಿ ಅಂತಾರಾಷ್ಟ್ರೀಯ ಬಿಸಿನೆಸ್ ಕ್ಲಾಸ್ ಪ್ರಯಾಣಿಕರಿಗೆ […]

ಹೊಸ ಸಂಶೋಧನೆಯಿಂದ ಹೊರ ಬಂತು ಸೀಕ್ರೇಟ್: ನದಿಯಲ್ಲಿ ಅಪರೂಪದ ಲೋಹ ಪತ್ತೆ!

ಇನ್‌ಸ್ಟಿಟ್ಯೂಟ್‌ನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರೆಸ್ಮಿ ಸೆಬಾಸ್ಟಿಯನ್ ನೇತೃತ್ವದ ತಂಡವು ಈ ಮಹತ್ವದ ಆವಿಷ್ಕಾರವನ್ನು ಮಾಡಿದೆ. “ನನ್ನ ಸಂಶೋಧನಾ ವಿದ್ಯಾರ್ಥಿಯೊಬ್ಬರು (Student) ಸಟ್ಲೆಜ್ ನದಿಯ ಮರಳಿನ ಗುಣಲಕ್ಷಣಗಳ ಮೇಲೆ ಪ್ರಯೋಗಗಳನ್ನು ನಡೆಸುವಾಗ ಟ್ಯಾಂಟಲಮ್ ಇರುವಿಕೆಯನ್ನು ಪತ್ತೆ ಹಚ್ಚಿದ್ದಾರೆ ” ಎಂದು ಅವರು ಹೇಳಿದ್ದಾರೆ.ಪಂಜಾಬ್‌ನ ಸಟ್ಲೆಜ್ ನದಿ ಮರಳಿನಲ್ಲಿ ರೋಪರ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಸಂಶೋಧಕರು ಅಪರೂಪದ ಲೋಹವನ್ನು ಪತ್ತೆ ಹಚ್ಚಿದ್ದಾರೆ. ಸಟ್ಲೆಜ್ ನದಿ ತೀರದ ಮರಳಿನಲ್ಲಿ ಎಲೆಕ್ಟ್ರಾನಿಕ್ ಘಟಕಗಳ ತಯಾರಿಕೆಯಲ್ಲಿ ಬಳಸುವ […]

ಹೊಸ ಪ್ರಭೇದದ ‘ಮ್ಯೂಸಿಕ್​ ಕಪ್ಪೆ’ ಪತ್ತೆ :ಗಂಡು – ಹೆಣ್ಣಿನ ಧ್ವನಿಯಲ್ಲಿ ವಟಗುಟ್ಟುವ ಹೊಸ ಜಾತಿಯ ಕಪ್ಪೆ

ಇಟಾನಗರ (ಅರುಣಾಚಲಪ್ರದೇಶ) :ಪತ್ತೆಯಾದ ಹೊಸ ಜಾತಿಯ ಕಪ್ಪೆಯು ಧ್ವನಿಯು ಸಂಗೀತದಂತೆ ಕೇಳಿಬರುತ್ತಿದ್ದು ‘ಮ್ಯೂಸಿಕ್​ ಫ್ರಾಗ್​’ ಎಂದು ವಿಜ್ಞಾನಿಗಳು ಕರೆದಿದ್ದಾರೆ. ಈ ಕಪ್ಪೆಯು ಮೂರು ರೀತಿಯಲ್ಲಿ ಧ್ವನಿ ಮಾಡುವ ವಿಶೇಷತೆ ಹೊಂದಿದೆ. ನಾವು ನೋವಾ ಡಿಹಿಂಗ್ ನದಿ ಬಳಿಯ ಜೌಗು ಪ್ರದೇಶದಲ್ಲಿ ಪತ್ತೆ ಮಾಡಿದೆವು. ಇದು ಹೆಚ್ಚೂ ಕಮ್ಮಿ ಕಾಡು ಬಾತುಕೋಳಿ ಜಾತಿಗೆ ಹೋಲುತ್ತದೆ. ಇದರ ಧ್ವನಿಯನ್ನೂ ನಾವು ಹಿಂದೆಂದೂ ಕೇಳಿರಲಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾಗಿ ಝೂಟಾಕ್ಸಾ ಜರ್ನಲ್‌ನಲ್ಲಿ ನವೆಂಬರ್ 15 ರಂದು ಪ್ರಕಟವಾದ ಲೇಖನದಲ್ಲಿ ಪ್ರಕಟವಾಗಿದೆ. ನೋವಾ […]

ಚಂದ್ರನಿಂದ ಕಲ್ಲು-ಮಣ್ಣಿನ ಮಾದರಿ ತರುವ ಗುರಿ: ಚಂದ್ರಯಾನ-4ರತ್ತ ಇಸ್ರೋ ಚಿತ್ತ

ಪುಣೆ(ಮಹಾರಾಷ್ಟ್ರ): ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಚಂದ್ರಯಾನ-4 ಉಡಾವಣೆಗೆ ಸಿದ್ಧತೆ ನಡೆಸುತ್ತಿದೆ.ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ ನಿರ್ದೇಶಕ ನಿಲೇಶ್ ದೇಸಾಯಿ, ಚಂದ್ರಯಾನ-4 ಕುರಿತು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದರು. ಚಂದ್ರಯಾನ-3ಯೋಜನೆಯ ಯಶಸ್ಸಿನೊಂದಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಇತಿಹಾಸ ಬರೆದಿದೆ. ಇದೀಗ ಸಂಸ್ಥೆ ಮತ್ತೊಂದು ಮಹತ್ವದ ಯೋಜನೆಗೆ ಸಿದ್ಧವಾಗಿದೆ. ಅದುವೇ ಚಂದ್ರಯಾನ-4. ‘ಐದರಿಂದ 10 ವರ್ಷ […]