ಹೊಸವರ್ಷವನ್ನು ಶುಭ ಸುದ್ದಿಯೊಂದಿಗೆ ಪ್ರಾರಂಭಿಸಿದ ಇಸ್ರೋ: XPoSat ಮತ್ತು 10 ಇತರ ಉಪಗ್ರಹಗಳ ಯಶಸ್ವಿ ಉಡಾವಣೆ

ಶ್ರೀಹರಿಕೋಟಾ: ಇಸ್ರೋದ PSLV-C58 ರಾಕೆಟ್ ಪ್ರಾಥಮಿಕ ಪೇಲೋಡ್ XPoSat ಮತ್ತು 10 ಇತರ ಉಪಗ್ರಹಗಳನ್ನು ಸೋಮವಾರ ಬೆಳಗ್ಗೆ 9.10 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾಯಿಸಿ ಹೊಸವರ್ಷವನ್ನು ಶುಭ ಸುದ್ದಿಯಿಂದ ಆರಂಭಿಸಿದೆ. ISRO ತನ್ನ ಮೊದಲ X-ray Polarimeter Satellite (XpoSat) ಉಡಾವಣೆಯೊಂದಿಗೆ ವರ್ಷವನ್ನು ಪ್ರಾರಂಭಿಸುತ್ತಿದೆ. ಇದು ಎಕ್ಸ್-ರೇ ಧ್ರುವೀಕರಣ ಮತ್ತು ಅದರ ಕಾಸ್ಮಿಕ್ ಮೂಲಗಳನ್ನು ಅಧ್ಯಯನ ಮಾಡಲು ಬಾಹ್ಯಾಕಾಶ ಆಧಾರಿತ ವೀಕ್ಷಣಾಲಯವಾಗಿದೆ. XpoSat ವಿಶ್ವದ ಎರಡನೇ ಇಂತಹ ಮಿಷನ್ ಆಗಿದೆ. 2021 […]

ಭಾರತೀಯ ನೌಕಾಪಡೆಯಿಂದ ಮಹತ್ವದ ಕ್ರಮ ; ಅರೇಬಿಯನ್ ಸಮುದ್ರದಲ್ಲಿ ಹೆಚ್ಚುತ್ತಿರುವ ಡ್ರೋನ್ ದಾಳಿ

ನವದೆಹಲಿ : ಕಡಲ ಭದ್ರತಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಮತ್ತು ಯಾವುದೇ ಘಟನೆಯ ಸಂದರ್ಭದಲ್ಲಿ ವ್ಯಾಪಾರಿ ಹಡಗುಗಳಿಗೆ ಸಹಾಯ ಮಾಡಲು ವಿಧ್ವಂಸಕ ನೌಕೆಗಳು ಮತ್ತು ಯುದ್ಧನೌಕೆಗಳನ್ನು ಒಳಗೊಂಡ ನೌಕಾ ಕಾರ್ಯ ಗುಂಪುಗಳನ್ನು ನಿಯೋಜಿಸಲಾಗಿದೆ ಎಂದು ನೌಕಾಪಡೆ ಇಂದು ಹೇಳಿಕೆಯಲ್ಲಿ ತಿಳಿಸಿದೆ. ಅಂತರರಾಷ್ಟ್ರೀಯ ಹಡಗು ಮಾರ್ಗಗಳ ಮೂಲಕ ಪ್ರಯಾಣಿಸುವ ವ್ಯಾಪಾರಿ ಹಡಗುಗಳಲ್ಲಿ ಆಗಾಗ್ಗೆ ಭದ್ರತಾ ಘಟನೆಗಳ ನಂತರ ಭಾರತೀಯ ನೌಕಾಪಡೆಯು ಉತ್ತರ ಮತ್ತು ಮಧ್ಯ ಅರೇಬಿಯನ್ ಸಮುದ್ರ ಮತ್ತು ಅಡೆನ್ ಕೊಲ್ಲಿಯಲ್ಲಿ ಕಣ್ಗಾವಲು ಹೆಚ್ಚಿಸಿದೆ. ಭಾರತೀಯ ಕರಾವಳಿಯಿಂದ 400 ಕಿ.ಮೀ […]

4000ಕ್ಕೂ ಹೆಚ್ಚು ಜನರಲ್ಲಿ JN.1 ಸೋಂಕು ಪತ್ತೆ : ದೇಶದಲ್ಲಿ ರೂಪಾಂತರಿ ವೈರಸ್ ಅಟ್ಟಹಾಸ

ನವದೆಹಲಿ: ಕೊರೊನಾ ಸೋಂಕಿನ ನಡುವೆ ಮಹಾಮಾರಿ ರೂಪಾಂತರಿ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ದೇಶದಲ್ಲಿ 4000ಕ್ಕೂ ಹೆಚ್ಚು ಜನರಲ್ಲಿ JN.1 ಸೋಂಕು ಪತ್ತೆ ಆಗಿದೆ. ಇನ್ನು ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 3,997ಕ್ಕೂ ಅಧಿಕವಾಗಿದೆ. ಹೊಸ ವರ್ಷದ ಸಂಭ್ರಮಾಚರಣೆ ನಡುವೆಯೇ ಮಾಹಾಮಾರಿ ಕೋವಿಡ್ ಆತಂಕವೂ ಹೆಚ್ಚಾಗಿದೆ. ದೇಶದಲ್ಲಿ ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿರುವಾಗಲೇ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ದೇಶದಲ್ಲಿ ರೂಪಾಂತರಿ ವೈರಸ್ ಅಟಹಾಸ ಹೆಚ್ಚುತ್ತಿದೆ.

ಮಹಾರಾಷ್ಟ್ರದ ಕೈಗವಸು ತಯಾರಿಕಾ ಕಂಪನಿಯಲ್ಲಿ ಅಗ್ನಿ ಅವಘಡ: 6 ಸಾವು, ಹಲವರಿಗೆ ಗಾಯ

ಮುಂಬೈ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿರುವ ಕೈಗವಸು ತಯಾರಿಕಾ ಕಂಪನಿಯೊಂದರಲ್ಲಿ ಭಾನುವಾರ ನಸುಕಿನ ಜಾವ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ ಆರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇನ್ನೂ ಹಲವರು ಗಾಯಗೊಂಡಿದ್ದಾರೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಧಿಕಾರಿಗಳ ಪ್ರಕಾರ, ಅಗ್ನಿಶಾಮಕ ದಳದವರು ತಕ್ಷಣ ಸ್ಥಳಕ್ಕೆ ಧಾವಿಸಿ ಕಟ್ಟಡದೊಳಗೆ ಸಿಲುಕಿರುವ ವ್ಯಕ್ತಿಗಳನ್ನು ಹೊರತೆಗೆಯಲು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು ಬೆಳಗಿನ ವೇಳೆಗೆ ಬೆಂಕಿ ಹತೋಟಿಗೆ ಬಂದಿದೆ. ರಾತ್ರಿ ವೇಳೆ ಕಾರ್ಖಾನೆ ಮುಚ್ಚಿದ್ದು, ಬೆಂಕಿ ಹೊತ್ತಿಕೊಂಡಾಗ ತಾವು ಮಲಗಿದ್ದಾಗಿ ಕಾರ್ಮಿಕರು […]

ಮುಂದಿನ ವರ್ಷ ಭಾರತಕ್ಕೆ ಬರಲಿದೆ EV ದಿಗ್ಗಜ ಟೆಸ್ಲಾ? ಗುಜರಾತ್ ನಲ್ಲಿ ಮೊದಲ ಉತ್ಪಾದನಾ ಘಟಕ ಸ್ಥಾಪನೆ ಸಾಧ್ಯತೆ

ಅಹಮದಾಬಾದ್: ಟೆಸ್ಲಾ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಮತ್ತು ಅದರ ಮೊದಲ ಉತ್ಪಾದನಾ ಘಟಕವು ಮುಂದಿನ ವರ್ಷ ಗುಜರಾತ್‌ನಲ್ಲಿ ಸ್ಥಾಪನೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಭಾರತದಲ್ಲಿ EV ತಯಾರಕರ ಮೊದಲ ಉತ್ಪಾದನಾ ಘಟಕವನ್ನು ಸ್ಥಾಪಿಸಲು ನಡೆಯುತ್ತಿರುವ ಮಾತುಕತೆಗಳು ಅಂತಿಮ ಹಂತದಲ್ಲಿವೆ ಮತ್ತು ಮಾಧ್ಯಮ ವರದಿಗಳ ಪ್ರಕಾರ ಶೀಘ್ರದಲ್ಲೇ ಒಂದು ತೀರ್ಮಾನವನ್ನು ತಲುಪುವ ಸಾಧ್ಯತೆಯಿದೆ. ರಾಜ್ಯದಲ್ಲಿ ಟೆಸ್ಲಾ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಕುರಿತು ಪ್ರಕಟಣೆಯು ಮುಂಬರುವ “ವೈಬ್ರೆಂಟ್ ಗುಜರಾತ್” ಶೃಂಗಸಭೆಯಲ್ಲಿ ನಡೆಯಲಿದ್ದು, ಇದು ಜನವರಿ 2024 ರಲ್ಲಿ ನಡೆಯಲಿದೆ […]