ಕಾಲ್ನಡಿಗೆಯಲ್ಲೇ 3,550 ಮೆಟ್ಟಿಲೇರಿ ಹರಕೆ ಪೂರೈಸಿದ 116 ವರ್ಷದ ಲಕ್ಷ್ಮವ್ವ: ಕರ್ನಾಟಕದ ಈ ಛಲಗಾತಿ ಅಜ್ಜಿಯ ಸಾಹಸಕ್ಕೆ ಬೆರಗಾದ ಭಕ್ತರು

ತಿರುಪತಿ: ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದನ್ನು ಕರ್ನಾಟಕ ಮೂಲದ ಶತಾಯುಷಿ ವೃದ್ಧೆ ಲಕ್ಷ್ಮವ್ವ ಅವರು ತಮ್ಮ ಅಪರೂಪದ ಸಾಧನೆಯ ಮೂಲಕ ಸಾಬೀತುಪಡಿಸಿದ್ದಾರೆ. ಕುಟುಂಬ ಸದಸ್ಯರೊಂದಿಗೆ ತಿರುಮಲಕ್ಕೆ ಆಗಮಿಸಿದ ಅವರು, ಅಲಿಪಿರಿ ಮಾರ್ಗದ ಸುಮಾರು 3,550 ಮೆಟ್ಟಿಲುಗಳನ್ನು ಏರಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ತಲುಪಿರುವುದು ಭಕ್ತರಲ್ಲಿ ಆಶ್ಚರ್ಯ ಮೂಡಿಸಿದೆ. ಸ್ಥಳೀಯವಾಗಿ ಭೀಮವ್ವ ಎಂದೂ ಕರೆಯಲ್ಪಡುವ ಲಕ್ಷ್ಮವ್ವ ಅವರಿಗೆ ಕುಟುಂಬಸ್ಥರ ಮಾಹಿತಿ ಪ್ರಕಾರ 116 ವರ್ಷ ವಯಸ್ಸಾಗಿದೆ. ಅವರ ಅಧಿಕೃತ ವಯಸ್ಸಿನ ದಾಖಲೆಗಳು ಲಭ್ಯವಾಗದಿದ್ದರೂ, ಶತಾಯುಷಿಯಾಗಿರುವುದು ವಿಡಿಯೊಗಳಲ್ಲಿ […]
ಸಿನಿಮಾ, ವೆಬ್‌ಸಿರೀಸ್‌ಗಳ ಪೈರಸಿ, ಟೆಲಿಗ್ರಾಂಗೆ ನೋಟಿಸ್ ನೀಡಿದ ಕೇಂದ್ರ!

ನವದೆಹಲಿ: ಸಿನಿಮಾ ಹಾಗೂ ವೆಬ್‌ಸಿರೀಸ್‌ಗಳ ಪೈರಸಿ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ಟೆಲಿಗ್ರಾಂಗೆ ನೋಟಿಸ್ ಜಾರಿಗೊಳಿಸಿದ್ದು, ಕಾನೂನುಬಾಹಿರವಾಗಿ ಹಂಚಲಾಗುತ್ತಿರುವ ಸಿನಿಮಾ ಮತ್ತು ಒಟಿಟಿ ಕಂಟೆಂಟ್ ವಿರುದ್ಧ ತಕ್ಷಣ ಕ್ರಮ ಕೈಗೊಂಡು 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ನೋಟಿಸ್ ನೀಡಿದ್ದು, ಟೆಲಿಗ್ರಾಂನ ವಿವಿಧ ಚಾನೆಲ್‌ಗಳು ಹಾಗೂ ಗುಂಪುಗಳ ಮೂಲಕ ಹೊಸ ಸಿನಿಮಾಗಳು, ಒಟಿಟಿ ವೇದಿಕೆಗಳ ವಿಷಯಗಳು ಮತ್ತು ಇತರೆ ಆಡಿಯೋ-ವಿಜುವಲ್ ಕೃತಿಗಳನ್ನು ಅನಧಿಕೃತವಾಗಿ ಹಂಚಲಾಗುತ್ತಿರುವ ಬಗ್ಗೆ ಹಲವು ದೂರುಗಳು ಬಂದ […]
ರಾಮಮಂದಿರದ ಬಳಿಕ ಇದೀಗ ಬದರಿನಾಥ ಧಾಮದಲ್ಲೂ ದೇಣಿಗೆ ದುರುಪಯೋಗ ಆರೋಪ: ತನಿಖೆಗೆ ಆದೇಶ

ಡೆಹ್ರಾಡೂನ್: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ದುರುಪಯೋಗ ಪ್ರಕರಣದ ಬೆನ್ನಲ್ಲೇ ಇದೀಗ ಉತ್ತರಾಖಂಡದ ಪ್ರಸಿದ್ಧ ಬದರಿನಾಥ ಧಾಮದಲ್ಲೂ ಕಾಣಿಕೆ ದುರುಪಯೋಗದ ಆರೋಪ ಕೇಳಿಬಂದಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆಗೆ ಆದೇಶಿಸಲಾಗಿದೆ. ಬದರಿನಾಥ-ಕೇದರನಾಥ ದೇವಸ್ಥಾನ ಸಮಿತಿ (BKTC) ಅಧ್ಯಕ್ಷ ಹೇಮಂತ್ ದ್ವಿವೇದಿ ಅವರು ಮಾಹಿತಿ ನೀಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೇಣಿಗೆ ದುರುಪಯೋಗದ ಆರೋಪಗಳನ್ನು ಸಮಿತಿ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ಪರಿಶೀಲಿಸಲು ತನಿಖಾ ಸಮಿತಿಯನ್ನು ರಚಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಕೆಲ […]
ಪತ್ನಿಯ ಕಾಲು ನೋವಿನ ಪರಿಹಾರಕ್ಕೆ ಮನೆಯಲ್ಲಿಯೇ ಎಸ್ಕಲೇಟರ್ ನಿರ್ಮಿಸಿದ ರೈತ: ಈ ಮಾದರಿ ಪ್ರೀತಿಗೆ ನೆಟ್ಟಿಗರು ಸಖತ್ ಖುಷ್!

ಆಂದ್ರಪ್ರದೇಶ: ಪ್ರೀತಿಯನ್ನು ವ್ಯಕ್ತಪಡಿಸಲು ಭವ್ಯ ಸ್ಮಾರಕಗಳನ್ನು ನಿರ್ಮಿಸಬೇಕೆಂದಿಲ್ಲ. ಪ್ರೀತಿಸುವವರ ದೈನಂದಿನ ಕಷ್ಟವನ್ನು ಕಡಿಮೆ ಮಾಡುವ ಕಾಳಜಿಯೇ ನಿಜವಾದ ಪ್ರೀತಿಯ ಸಂಕೇತ ಎಂಬುದನ್ನು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ 65 ವರ್ಷದ ರೈತ ಹಾಗೂ ಮೆಕಾನಿಕ್ ಸಟ್ಟಿ ಶಿವನಾರಾಯಣ ರೆಡ್ಡಿ ಸಾಬೀತುಪಡಿಸಿದ್ದಾರೆ. ರಾಜಮಹೇಂದ್ರವರಂನಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ಅರ್ಥಮೂರು ಗ್ರಾಮದ ನಿವಾಸಿಯಾದ ಶಿವನಾರಾಯಣ ರೆಡ್ಡಿ ಅವರ ಪತ್ನಿ ಸತ್ಯವೇಣಿ ಹಲವು ವರ್ಷಗಳಿಂದ ತೀವ್ರ ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಮನೆಯ ಮೊದಲ ಮಹಡಿಗೆ ತೆರಳಲು ಪ್ರತಿದಿನ 21 ಮೆಟ್ಟಿಲುಗಳನ್ನು […]
ಹಾರ್ಮುಜ್ ಜಲಸಂಧಿಯಲ್ಲಿ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡು ಸುರಕ್ಷಿತವಾಗಿ ಭಾರತಕ್ಕೆ ಬಂದ ತೈಲ ಟ್ಯಾಂಕರ್

ನವದೆಹಲಿ: ಸುಮಾರು 20 ಲಕ್ಷ ಬ್ಯಾರೆಲ್ ಇರಾಕಿ ಕಚ್ಚಾ ತೈಲವನ್ನು ಹೊತ್ತು ಸಾಗುತ್ತಿದ್ದ ತೈಲ ಟ್ಯಾಂಕರ್, ಹಾರ್ಮುಜ್ ಜಲಸಂಧಿಯಲ್ಲಿ ನಡೆದ ಗುಂಡಿನ ದಾಳಿಯಿಂದ ಪಾರಾಗಿ ಭಾರತವನ್ನು ಸುರಕ್ಷಿತವಾಗಿ ತಲುಪಿದೆ. ವರದಿಗಳ ಪ್ರಕಾರ, ಸಂಘರ್ಷ ಪೀಡಿತ ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುತ್ತಿದ್ದ ವೇಳೆ ಟ್ಯಾಂಕರ್ ಮೇಲೆ ಗುಂಡಿನ ದಾಳಿ ನಡೆದಿದ್ದು, ಹಡಗಿಗೆ ಸ್ವಲ್ಪ ಪ್ರಮಾಣದ ಹಾನಿಯಾಗಿದೆ. ಆದಾಗ್ಯೂ, ಸಿಬ್ಬಂದಿಯ ಸುರಕ್ಷತೆ ಮತ್ತು ತುರ್ತು ಕ್ರಮಗಳಿಂದ ಟ್ಯಾಂಕರ್ ಯಾವುದೇ ದೊಡ್ಡ ಅಪಾಯವಿಲ್ಲದೆ ಪ್ರಯಾಣವನ್ನು ಮುಂದುವರಿಸಿದೆ. ಎಂಟಿ ಸನ್ಮಾರ್ ಹೆರಾಲ್ಡ್ (MT […]