ವಯನಾಡಿನಲ್ಲಿ ಮತ್ತೆ ಭಾರೀ ಭೂಕುಸಿತ: ಇಬ್ಬರು ಕಾರ್ಮಿಕರು ಜೀವಂತ ಸಮಾಧಿ, 30 ಮಂದಿ ನಾಪತ್ತೆ

ಕೇರಳದ Kerala ರಾಜ್ಯದ ವಯನಾಡು Wayanad ಜಿಲ್ಲೆಯ ಮೆಪ್ಪಾಡಿ ಪ್ರದೇಶದಲ್ಲಿ ಭಾರೀ ಮಳೆಯ ಪರಿಣಾಮ ಭೂಕುಸಿತ ಸಂಭವಿಸಿದ್ದು, ಇಬ್ಬರು ಕಾರ್ಮಿಕರು ಜೀವಂತ ಸಮಾಧಿಯಾಗಿದ್ದಾರೆ. ಸುಮಾರು 20 ಮಂದಿ ಅವಶೇಷಗಳಡಿ ಸಿಲುಕಿಕೊಂಡಿದ್ದು, 30 ಮಂದಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ. ಭೂಕುಸಿತವು ವಯನಾಡ್ ಸುರಂಗ ನಿರ್ಮಾಣ ಯೋಜನೆಯ ಮೀನಾಕ್ಷಿ ಸೇತುವೆ ಸಮೀಪ ಸಂಭವಿಸಿದೆ. ಎರಡು ವರ್ಷಗಳ ಹಿಂದೆ ಚೂರಲ್ಮಲದಲ್ಲಿ ಸಂಭವಿಸಿದ್ದ ಭೀಕರ ಭೂಕುಸಿತದ ನೆನಪು ಇನ್ನೂ ಮಾಸದಿರುವಾಗಲೇ ಮತ್ತೊಮ್ಮೆ ಈ […]
ಮುಂಬೈನಲ್ಲಿ ಮುಂದುವರಿದ ಭಾರೀ ಮಳೆ, ಭೂಕುಸಿತಕ್ಕೆ 8 ಸಾವು, ಘಾಟಿ ರಸ್ತೆಗಳು ಬಂದ್, ರೈಲು, ಬಸ್ ಸಂಚಾರವೂ ಅಸ್ತವ್ಯಸ್ತ

ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದು, ಭಾರೀ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾನುವಾರ ಒಂದೇ ದಿನ ಮಳೆಗೆ ಸಂಬಂಧಿಸಿದ ವಿವಿಧ ಅವಘಡಗಳಲ್ಲಿ ಎಂಟು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಸೋಮವಾರವೂ ಮಳೆಯ ಅಬ್ಬರ ಮುಂದುವರಿದ ಪರಿಣಾಮ ಭೂಕುಸಿತ, ಪ್ರವಾಹ ಹಾಗೂ ಸಾರಿಗೆ ವ್ಯವಸ್ಥೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಮುಂಖುರ್ಡ್ ಪ್ರದೇಶದಲ್ಲಿ ಚಾಲ್ ಕಟ್ಟಡದ ಒಂದು ಭಾಗ ಕುಸಿದು ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಂದೆಡೆ ಮರ ಬಿದ್ದು ಒಬ್ಬರು ಹಾಗೂ ಕಟ್ಟಡದ ಗ್ರಿಲ್ […]
ಭಾರತದಲ್ಲಿ ಪಾಕಿಸ್ತಾನದ ಫೇಸ್ ಕ್ರೀಂ ಅವಾಂತರ,18 ಮಹಿಳೆಯರಿಗೆ ಶುರುವಾಯ್ತು ಮೂತ್ರಪಿಂಡದ ಸಮಸ್ಯೆ, ಭಾರತದ ಈ ಉತ್ಪನ್ನಗಳೂ ಕೂಡ ಡೇಂಜರ್!

ನಾಗ್ಪುರ: ಬೆಳ್ಳಗಿನ ಚರ್ಮದ ಆಸೆ ಆರೋಗ್ಯಕ್ಕೆ ಮುಳುವಾಗಬಹುದು ಎಂಬ ಆತಂಕಕಾರಿ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಬೆಳಕಿಗೆ ಬಂದಿದೆ. ಚರ್ಮ ಬಿಳಿಯಾಗಿಸುವ ಕ್ರೀಮ್ ಬಳಸುತ್ತಿದ್ದ 18 ಮಹಿಳೆಯರು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವುದು ವೈದ್ಯಕೀಯ ತನಿಖೆಯಲ್ಲಿ ಪತ್ತೆಯಾಗಿದೆ. ವರದಿಗಳ ಪ್ರಕಾರ, ಈ ಮಹಿಳೆಯರೆಲ್ಲರೂ ಪಾಕಿಸ್ತಾನದಲ್ಲಿ ತಯಾರಾಗುವ ‘ಗೋರಿ ಬ್ಯೂಟಿ ಕ್ರೀಮ್’ ಬಳಸುತ್ತಿದ್ದರು. ಪ್ರಯೋಗಾಲಯ ಪರೀಕ್ಷೆಯಲ್ಲಿ ಈ ಕ್ರೀಮ್‌ನಲ್ಲಿ ಪಾದರಸದ (Mercury) ಪ್ರಮಾಣ ಕಾನೂನುಬದ್ಧ ಮಿತಿಗಿಂತ ಹೆಚ್ಚಿರುವುದು ಪತ್ತೆಯಾಗಿದ್ದು, ಇದೇ ಆರೋಗ್ಯ ಸಮಸ್ಯೆಗೆ ಕಾರಣವಾಗಿರಬಹುದು ಎಂದು ತಜ್ಞರು ಶಂಕಿಸಿದ್ದಾರೆ. ಎಫ್‌ಡಿಎ ನಿಷೇಧ […]
ಜಮ್ಮು ಮತ್ತು ಕಾಶ್ಮೀರ: ಹಣ್ಣಿನ ತೋಟದಲ್ಲಿ ಅಡಗಿರುವ ಲಷ್ಕರ್-ಎ-ತೊಯ್ಬಾ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಭೀಕರ ಗುಂಡಿನ ಚಕಮಕಿ

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮೀಮಂದಾರ್–ಸೈದ್ಪೋರಾ ಪ್ರದೇಶದ ದಟ್ಟ ಹಣ್ಣಿನ ತೋಟದಲ್ಲಿ ಅಡಗಿರುವ ಇಬ್ಬರು ಲಷ್ಕರ್-ಎ-ತೊಯ್ಬಾ (LeT) ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಭೀಕರ ಗುಂಡಿನ ಚಕಮಕಿ ಮುಂದುವರಿದಿದೆ. ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸ್ ಹಾಗೂ ಸಿಆರ್‌ಪಿಎಫ್ ಜಂಟಿಯಾಗಿ ಬೃಹತ್ ಕಾರ್ಯಾಚರಣೆ ನಡೆಸುತ್ತಿದ್ದು, ಉಗ್ರರು ತಪ್ಪಿಸಿಕೊಳ್ಳದಂತೆ ಇಡೀ ಪ್ರದೇಶವನ್ನು ಸುತ್ತುವರಿದಿವೆ. ದಟ್ಟ ತೋಟವನ್ನು ಸಂಪೂರ್ಣವಾಗಿ ಮುತ್ತಿಗೆ ಹಾಕಿರುವ ಪಡೆಗಳು ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಭದ್ರತಾ ಪಡೆಗಳ ಬಲೆಗೆ ಸಿಲುಕಿರುವ ಉಗ್ರರನ್ನು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಮೂಲದ […]
ಮನೆಯಲ್ಲಿ ಚಿನ್ನ ಇಟ್ಟಿದ್ದೀರಾ? ಇನ್ನು ಬಡ್ಡಿಯೂ ಸಿಗಲಿದೆ! ಕೇಂದ್ರದ ಹೊಸ ‘ಗೋಲ್ಡ್ ಮಾನಿಟೈಸೇಷನ್’ ಯೋಜನೆ ಏನು?

ಮನೆಯಲ್ಲಿರುವ ಹಳೆಯ ಚಿನ್ನವನ್ನು ಮಾರದೇ, ಲಾಕರ್‌ನಲ್ಲಿ ಇಡದೇ ಅದರಿಂದಲೇ ಆದಾಯ ಗಳಿಸುವ ಅವಕಾಶವನ್ನು ಕೇಂದ್ರ ಸರ್ಕಾರ ಕಲ್ಪಿಸಲು ಮುಂದಾಗಿದೆ. ‘ಚಿನ್ನ ನಗದೀಕರಣ ಯೋಜನೆ’ (Gold Monetisation Scheme)ಗೆ ಹೊಸ ರೂಪ ನೀಡಲು ಸರ್ಕಾರ ಸಿದ್ಧತೆ ನಡೆಸಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ. ದೇಶದಲ್ಲಿ ಚಿನ್ನದ ಆಮದು ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗುತ್ತಿದೆ. ಭಾರತೀಯರ ಮನೆಗಳಲ್ಲಿ ಅಪಾರ ಪ್ರಮಾಣದ ಚಿನ್ನ ಬಳಕೆಯಾಗದೆ ಉಳಿದಿದ್ದು, ಅದರ ಒಂದು ಭಾಗವನ್ನು ಆರ್ಥಿಕ ಚಟುವಟಿಕೆಗೆ ತರಲು ಸರ್ಕಾರ […]