ಶಬರಿಮಲೆ ದೇಗುಲ ಪ್ರವೇಶಿಸಲು ಮಹಿಳೆಯರಿಂದ ಯತ್ನ:ತಡೆಹಿಡಿದ ಅಯ್ಯಪ್ಪ ಭಕ್ತರು

ಕೇರಳ : ಇಲ್ಲಿನ ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿದ ಚೆನ್ನೈ ಮೂಲದ 11 ಮಹಿಳೆಯರನ್ನು ಅಯ್ಯಪ್ಪ ಭಕ್ತರು ತಡೆ ಹಿಡಿದಿದ್ದು ದೇಗುಲದ ಸ್ಥಳದಲ್ಲಿ ಭಾನುವಾರ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಚೆನ್ನೈ ಮೂಲದ ಮಹಿಳಾ ಸಂಘಟನೆಯ ಸದಸ್ಯರು ಕಾಡು ದಾರಿಯ ಮೂಲಕ ದೇವಾಲಯ ಪ್ರವೇಶಿಸಲು ಪ್ರಯತ್ನ ನಡೆಸಿದವರು. ಆದರೆ ಇವರ ಪ್ರಯತ್ನ ವಿಫಲಗೊಂಡಿದೆ. ದೇವಾಲಯದಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿ ಮಹಿಳೆಯರನ್ನು ಅಯ್ಯಪ್ಪ ಭಕ್ತರು ತಡೆ ಹಿಡಿದಿದ್ದಾರೆ. ಹಾಗೂ ಘೋಷಣೆ ಕೂಗಿದ್ದಾರೆ. […]
ಅಟಲ್ ಬಿಹಾರಿ ವಾಜಪೇಯಿ ಅವರ ನೆನಪಿಗೆ ₹100 ಮುಖಬೆಲೆಯ ನಾಣ್ಯ

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ ವಿಶೇಷ ನಾಣ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಡಿ.24ರಂದು ಬಿಡುಗಡೆ ಮಾಡಲಿದ್ದಾರೆ. ಮತ್ತೊಂದು ಬೆಳವಣಿಗೆಯಲ್ಲಿ, ಸಂಸತ್ತಿನಲ್ಲಿ ಶೀಘ್ರ ವಾಜಪೇಯಿ ಅವರ ಪ್ರತಿಮೆ ಸ್ಥಾಪಿಸಲು ಸಂಸದೀಯ ಸಮಿತಿ ಒಪ್ಪಿಕೊಂಡಿದೆ. ₹100 ಮೌಲ್ಯದ ಈ ನಾಣ್ಯವು 35 ಗ್ರಾಂ ತೂಕವಿರುತ್ತದೆ. ನಾಣ್ಯದ ಒಂದು ಬದಿಯಲ್ಲಿ ವಾಜಪೇಯಿ ಅವರ ಭಾವಚಿತ್ರವಿದ್ದು ದೇವನಾಗರಿ ಲಿಪಿಯಲ್ಲಿ ಅವರ ಹೆಸರಿರುತ್ತದೆ. ಭಾವಚಿತ್ರದ ಕೆಳಗೆ ಜನನ–ಮರಣದ ಇಸವಿ ಇರಲಿದೆ ಹಾಗೂ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ವಾಜಪೇಯಿ ಅವರ ಪುತ್ಥಳಿ […]
ಅಮೆರಿಕಕ್ಕೆಭಾರತದ ನೂತನ ರಾಯಭಾರಿಯಾಗಿ ಹರ್ಷವರ್ಧನ್ ಶೃಂಗಲಾ ನೇಮಕ

ನವದೆಹಲಿ: ಅಮೆರಿಕಕ್ಕೆ ಭಾರತದ ನೂತನ ರಾಯಭಾರಿಯಾಗಿ ಹರ್ಷವರ್ಧನ್ ಶೃಂಗಲಾ ಗುರುವಾರ ನೇಮಕಗೊಂಡಿದ್ದಾರೆ. 1984ನೇ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿಯಾಗಿರುವ ಹರ್ಷವರ್ಧನ್, ನವತೇಜ್ ಸರ್ನಾ ಅವರಿಂದ ಅಧಿಕಾರ ಪಡೆದುಕೊಳ್ಳಲಿದ್ದಾರೆ. ಶೀಘ್ರದಲ್ಲಿಯೇ ಅವರು ಕರ್ತವ್ಯ ಆರಂಭಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆ ತಿಳಿಸಿದೆ.
ಇಡೀ ವಿಶ್ವದಲ್ಲೇ ಯಾರು ಕಂಡುಹಿಡಿಯದ ಒಂದು ವಿಶೇಷ ಡ್ರೋನ್ ;ನಮ್ಮ ಕನ್ನಡಿಗ ಪ್ರತಾಪ್ ಸಾಧನೆ

ಭಾರತ ಮಾತೆಯ ಹೆಮ್ಮೆಯ ಪುತ್ರ,ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ನಿವಾಸಿ ಪ್ರತಾಪ್ .ಇಡೀ ವಿಶ್ವದಲ್ಲೇ ಯಾರು ಕಂಡುಹಿಡಿಯದ ಒಂದು ವಿಶೇಷವಾದ ಡ್ರೋನ್ ಸೃಷ್ಟಿ ಮಾಡಿ ದೇಶಕ್ಕೆ ಮಾದರಿಯಾಗಿದ್ದಾರೆ . ಇತ್ತೀಚೆಗೆ ಜೀ ಕನ್ನಡದ ಡ್ರಾಮ ಜೂನಿಯರ್ ಕಾರ್ಯಕ್ರಮದಲ್ಲಿ ಪ್ರತಾಪ್ ಕರೆಸಲಾಗಿತ್ತು .ಆ ಸಂದರ್ಭದಲ್ಲಿ ಪ್ರತಾಪ್ ಅವರು ಪಟ್ಟ ಕಷ್ಟ ವನ್ನು ಎಲ್ಲರೊಂದಿಗೆ ಹಂಚಿಕೊಂಡರು . ಎಲ್ಲಿ ನೋಡಿದರು ಭ್ರಷ್ಟಾಚಾರ ನಡೆಯುವ ಈ ಕಲಿಯುಗದಲ್ಲಿ ದುಡ್ಡು ಮಾಡುವುದೇ ಒಂದು ದೊಡ್ಡ ಕೆಲಸ ಎಂಬಂತೆ ಇದ್ದಾರೆ.ಇವರೆಲ್ಲರ ನಡುವೆ ಡ್ರೋನ್ ಕಂಡುಹಿಡಿಯುವ ಮೂಲಕ […]
ಆರ್‌ಬಿಐ ಗವರ್ನರ್ ಆಗಿ ಶಕ್ತಿಕಾಂತ್ ದಾಸ್

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್‌ನ ಹೊಸ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ಅವರನ್ನು ನೇಮಿಸಲಾಗಿದೆ. ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿದ್ದ ಶಕ್ತಿಕಾಂತ್ ದಾಸ್, 2017ರ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರದ ಸೇವೆಯಿಂದ ನಿವೃತ್ತರಾಗಿದ್ದರು. ಆರ್‌ಬಿಐನ 25ನೇ ಗವರ್ನರ್ ಆಗಿರುವ ಇವರ ಸೇವಾವಧಿ ಮೂರು ವರ್ಷಗಳವರೆಗೆ ಇರಲಿದೆ. ದಾಸ್ ಅವರು 15ನೇ ಹಣಕಾಸು ಆಯೋಗದ ಹಾಲಿ ಸದಸ್ಯರು ಮತ್ತು ಆರ್ಥಿಕ ವ್ಯವಹಾರಗಳ ಸಮಿತಿಯ ಮಾಜಿ ಕಾರ್ಯದರ್ಶಿ ಆಗಿದ್ದಾರೆ. ಊರ್ಜಿತ್ ಪಟೇಲ್ ಅವರ ಉತ್ತರಾಧಿಕಾರಿಯಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಹುದ್ದೆಗೆ ಸರಕಾರದಿಂದ ನಿನ್ನೆ ಮಂಗಳವಾರವಷ್ಟೇ […]