ಆರ್‌ಬಿಐ ಗವರ್ನರ್‌ ಆಗಿ ಶಕ್ತಿಕಾಂತ್‌ ದಾಸ್‌

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹೊಸ ಗವರ್ನರ್‌ ಆಗಿ ಶಕ್ತಿಕಾಂತ್‌ ದಾಸ್‌ ಅವರನ್ನು ನೇಮಿಸಲಾಗಿದೆ.

ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿದ್ದ ಶಕ್ತಿಕಾಂತ್‌ ದಾಸ್‌, 2017ರ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರದ ಸೇವೆಯಿಂದ ನಿವೃತ್ತರಾಗಿದ್ದರು. ಆರ್‌ಬಿಐನ 25ನೇ ಗವರ್ನರ್ ಆಗಿರುವ ಇವರ ಸೇವಾವಧಿ ಮೂರು ವರ್ಷಗಳವರೆಗೆ ಇರಲಿದೆ.

ದಾಸ್‌ ಅವರು 15ನೇ ಹಣಕಾಸು ಆಯೋಗದ ಹಾಲಿ ಸದಸ್ಯರು ಮತ್ತು ಆರ್ಥಿಕ ವ್ಯವಹಾರಗಳ ಸಮಿತಿಯ ಮಾಜಿ ಕಾರ್ಯದರ್ಶಿ ಆಗಿದ್ದಾರೆ. ಊರ್ಜಿತ್‌ ಪಟೇಲ್‌ ಅವರ ಉತ್ತರಾಧಿಕಾರಿಯಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಹುದ್ದೆಗೆ ಸರಕಾರದಿಂದ ನಿನ್ನೆ ಮಂಗಳವಾರವಷ್ಟೇ ನೇಮಕಗೊಂಡಿದ್ದಾರೆ.