ಅಮೆರಿಕಕ್ಕೆಭಾರತದ ನೂತನ ರಾಯಭಾರಿಯಾಗಿ ಹರ್ಷವರ್ಧನ್ ಶೃಂಗಲಾ ನೇಮಕ

ನವದೆಹಲಿ: ಅಮೆರಿಕಕ್ಕೆ ಭಾರತದ ನೂತನ ರಾಯಭಾರಿಯಾಗಿ ಹರ್ಷವರ್ಧನ್ ಶೃಂಗಲಾ ಗುರುವಾರ ನೇಮಕಗೊಂಡಿದ್ದಾರೆ. 1984ನೇ ಬ್ಯಾಚ್‌ನ ಐಎಫ್‌ಎಸ್‌ ಅಧಿಕಾರಿಯಾಗಿರುವ ಹರ್ಷವರ್ಧನ್, ನವತೇಜ್‌ ಸರ್ನಾ ಅವರಿಂದ ಅಧಿಕಾರ ಪಡೆದುಕೊಳ್ಳಲಿದ್ದಾರೆ. ಶೀಘ್ರದಲ್ಲಿಯೇ ಅವರು ಕರ್ತವ್ಯ ಆರಂಭಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆ ತಿಳಿಸಿದೆ.