ಏಷ್ಯಾದ ಅತ್ಯಂತ ಹಿರಿಯ ಆನೆ ದಾಕ್ಷಾಯಿಣಿ ಸಾವು

ಕೇರಳ: ಏಷ್ಯಾದ ಅತ್ಯಂತ ಹಿರಿಯ ಆನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕೇರಳದ ಹೆಣ್ಣಾನೆ ದಾಕ್ಷಾಯಿಣಿ (88) ಫೆ. 5ರಂದು ಮೃತಪಟ್ಟಿದೆ. ದಾಕ್ಷಾಯಿಣಿ ಟ್ರಾವಂಕೂರು ದೇವಸ್ಥಾನ ಮಂಡಳಿಗೆ ಸೇರಿದ ಹೆಣ್ಣಾನೆಯಾಗಿದ್ದು, ಏಷ್ಯಾದಲ್ಲೇ ಅತ್ಯಂತ ಹಿರಿಯ ಆನೆ ಎಂದು 2016ರಲ್ಲಿ ಗಿನ್ನೀಸ್ ದಾಖಲೆ ಬರೆದಿತ್ತು. ಆದರೆ ಇತ್ತೀಚೆಗೆ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಹಿನ್ನಲೆಯಲ್ಲಿ ಅದನ್ನು ತಿರುವನಂತಪುರ ಆನೆ ಬಿಡಾರದಲ್ಲಿ ಇಡಲಾಗಿತ್ತು. ಆದರೆ ದೇಗುಲಗಳ ಪ್ರತಿ ಉತ್ಸವಗಳಲ್ಲೂ ಇದು ಪಾಲ್ಗೊಳ್ಳುತ್ತಿತ್ತು. ಈ ಆನೆಯನ್ನು ಈ ಹಿಂದೆ ಟ್ರಾವಂಕೂರು ರಾಜಮನೆತನ ದೇವಸ್ಥಾನಕ್ಕೆ ಉಡುಗೊರೆಯನ್ನಾಗಿ […]
ನೀವು ಇಚ್ಚಿಸಿದಂತೆ ಮಾತ್ರ ನೀವು ಸಂತೋಷವಾಗಿರುತ್ತೀರಿ ; ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿದೆ ಈ ಮುದ್ದು ಮಕ್ಕಳ ಸೆಲ್ಫಿ ಫೋಟೋ

ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫೋಟೋಗಳು ಹಾಗೂ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಆದರೆ ಮುದ್ದಾದ ಮಕ್ಕಳು ಚಪ್ಪಲಿ ಹಿಡಿದು ಸೆಲ್ಫಿ ತೆಗೆದುಕೊಳ್ಳುತ್ತಿರುವ ವೈರಲ್ ಫೋಟೋವೊಂದು ಎಲ್ಲರ ಮನಸ್ಸು ಗೆಲ್ಲುತ್ತಿದೆ. ಐದು ಜನ ಮುದ್ದಾದ ಮಕ್ಕಳು ಚಪ್ಪಲಿ ನೋಡಿ ಸೆಲ್ಫಿಗೆ ಪೋಸ್ ನೀಡಿದ್ದಾರೆ. ಮಕ್ಕಳು ಸೆಲ್ಫಿಗೆ ಪೋಸ್ ನೀಡುವಾಗ ಅನಾಮಿಕ ವ್ಯಕ್ತಿಯೊಬ್ಬರು ಆ ಫೋಟೋವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವೈರಲ್ ಫೋಟೋವನ್ನು ಎಲ್ಲರೂ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ವೈರಲ್ ಆಗಿರುವ ಈ ಫೋಟೋ ಎಲ್ಲಿ […]
ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ವಿಧಿವಶ

ನವದೆಹಲಿ: ಕೇಂದ್ರದ ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್(88) ಅವರು ಮಂಗಳವಾರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದ ಕಾರಣ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಕುಟುಂಬಸ್ಥರು ದುಃಖ ವ್ಯಕ್ತಪಡಿಸುತ್ತಿದ್ದಾರೆ. ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ಇವರು ತಮ್ಮ ಸಾಮಾಜಿಕ ಕೆಲಸಗಳಿಂದಲೇ ಒರ್ವ ಜನನಾಯಕನಾಗಿ ಗುರುತಿಸಿಕೊಂಡಿದ್ದರು. 1970ರ ಸಮಾಜವಾದದ ಹೋರಾಟದಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಫರ್ನಾಂಡಿಸ್, ಜನತಾ ದಳದ ಮುಖಂಡರಾಗಿ ಸಮತಾ ಪಕ್ಷ ಕಟ್ಟಿದ್ದರು. […]
‘ಟ್ರೈನ್ 18’ ರೈಲಿಗೆ ‘ವಂದೇ ಭಾರತ ಎಕ್ಸ್‌ಪ್ರೆಸ್’ ಹೆಸರು

ನವದೆಹಲಿ: ದೇಶಿಯ ತಂತ್ರಜ್ಞಾನ ವ್ಯವಸ್ಥೆಯಲ್ಲಿ ನಿರ್ಮಿಸಿದ ಅತಿ ವೇಗದ ರೈಲಿಗೆ ‘ವಂದೇ ಭಾರತ ಎಕ್ಸ್‌ಪ್ರೆಸ್’ ಎಂದು ಹೆಸರಿಡಲಾಗಿದೆ ಎಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ರವಿವಾರ ಈ ಮಾಹಿತಿ ತಿಳಿಸಿದ್ದಾರೆ. ಈ ರೈಲು ನಿರ್ಮಾಣ ಆರಂಭಿಸಿದಾಗ ‘ಟ್ರೈನ್ 18’ ಎಂದು ಹೆಸರಿಡಲಾಗಿತ್ತು. ಬಳಿಕ ಇದಕ್ಕೆ ಹೆಸರಿಡಲು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು. ಆದರೆ ಅಂತಿಮವಾಗಿ ‘ವಂದೇ ಭಾರತ ಎಕ್ಸ್‌ಪ್ರೆಸ್’ ಎಂದು ನಿಗದಿಪಡಿಸಲಾಯಿತು. ಇದು ಗಣರಾಜ್ಯೋತ್ಸವ ಸಂದರ್ಭದಲ್ಲಿ ಜನರಿಗೆ ನೀಡುತ್ತಿರುವ ಕೊಡುಗೆಯಾಗಿದೆ ಎಂದರು. ದೆಹಲಿಯಿಂದ ವಾರಾಣಸಿಗೆ ಸಂಚರಿಸುವ ಸಾಮರ್ಥ್ಯ ಇರುವ ಈ ರೈಲನ್ನು ಪ್ರಧಾನಮಂತ್ರಿ ನರೇಂದ್ರ […]
ವಾಹನಗಳಲ್ಲಿ ಸೀಟ್ ಬೆಲ್ಟ್ ಎಚ್ಚರಿಕೆ ಸಾಧನ ಕಡ್ಡಾಯ

ನವದೆಹಲಿ: ವಾಹನಗಳಲ್ಲಿ ಸೀಟ್ ಬೆಲ್ಟ್ ಎಚ್ಚರಿಕೆ ಸಾಧನ ಅಳವಡಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಲಿದೆ. ಈ ಬಗ್ಗೆ ಕೇಂದ್ರದ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಸುಳಿವು ನೀಡಿದ್ದಾರೆ. 2019 ಮಾರ್ಚ್ ನಂತರ ತಯಾರಾಗುವ ಕಾರುಗಳಲ್ಲಿ ಸೀಟ್ -ಬೆಲ್ಟ್ ಎಚ್ಚರಿಕೆ ಸಾಧನ, ಚಾಲಕರಿಗೆ ಏರ್ ಬ್ಯಾಗ್, ವೇಗ ಎಚ್ಚರಿಕೆ ಹಾಗೂ ರಿವರ್ಸ್ ಪಾರ್ಕಿಂಗ್ ಎಚ್ಚರಿಕೆ ಸಾಧನ ಕಡ್ಡಾಯವಾಗಲಿದೆ. 2020ರ ವೇಳೆಗೆ ರಸ್ತೆ ಅಪಘಾತಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ. ಭಾರತದಲ್ಲಿ ಪ್ರತಿ ವರ್ಷ […]