ನೀವು ಇಚ್ಚಿಸಿದಂತೆ ಮಾತ್ರ ನೀವು ಸಂತೋಷವಾಗಿರುತ್ತೀರಿ ; ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿದೆ ಈ ಮುದ್ದು ಮಕ್ಕಳ ಸೆಲ್ಫಿ ಫೋಟೋ

ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫೋಟೋಗಳು ಹಾಗೂ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಆದರೆ ಮುದ್ದಾದ ಮಕ್ಕಳು ಚಪ್ಪಲಿ ಹಿಡಿದು ಸೆಲ್ಫಿ ತೆಗೆದುಕೊಳ್ಳುತ್ತಿರುವ ವೈರಲ್ ಫೋಟೋವೊಂದು ಎಲ್ಲರ ಮನಸ್ಸು ಗೆಲ್ಲುತ್ತಿದೆ.

ಐದು ಜನ ಮುದ್ದಾದ ಮಕ್ಕಳು ಚಪ್ಪಲಿ ನೋಡಿ ಸೆಲ್ಫಿಗೆ ಪೋಸ್ ನೀಡಿದ್ದಾರೆ. ಮಕ್ಕಳು ಸೆಲ್ಫಿಗೆ ಪೋಸ್ ನೀಡುವಾಗ ಅನಾಮಿಕ ವ್ಯಕ್ತಿಯೊಬ್ಬರು ಆ ಫೋಟೋವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವೈರಲ್ ಫೋಟೋವನ್ನು ಎಲ್ಲರೂ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ವೈರಲ್ ಆಗಿರುವ ಈ ಫೋಟೋ ಎಲ್ಲಿ ಸೆರೆ ಹಿಡಿದಿದ್ದು ಎಂಬ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ಸೆಲ್ಫಿಗೆ ಬಾಲಿವುಡ್ ಕಲಾವಿದರಾದ ಸುನೀಲ್ ಶೆಟ್ಟಿ, ಬೋಮನ್ ಇರಾನಿ ಹಾಗೂ ಅತುಲ್ ಕಸ್ಬೆಕರ್ ಈ ವೈರಲ್ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪೋಸ್ಟ್ ಹಾಗೂ ಟ್ವೀಟ್ ಮಾಡಿದ್ದಾರೆ.