ಏಷ್ಯಾದ ಅತ್ಯಂತ ಹಿರಿಯ ಆನೆ ದಾಕ್ಷಾಯಿಣಿ ಸಾವು

ಕೇರಳ:  ಏಷ್ಯಾದ ಅತ್ಯಂತ ಹಿರಿಯ ಆನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕೇರಳದ ಹೆಣ್ಣಾನೆ ದಾಕ್ಷಾಯಿಣಿ (88) ಫೆ. 5ರಂದು ಮೃತಪಟ್ಟಿದೆ.
ದಾಕ್ಷಾಯಿಣಿ ಟ್ರಾವಂಕೂರು ದೇವಸ್ಥಾನ ಮಂಡಳಿಗೆ ಸೇರಿದ ಹೆಣ್ಣಾನೆಯಾಗಿದ್ದು, ಏಷ್ಯಾದಲ್ಲೇ ಅತ್ಯಂತ ಹಿರಿಯ ಆನೆ ಎಂದು 2016ರಲ್ಲಿ ಗಿನ್ನೀಸ್​ ದಾಖಲೆ ಬರೆದಿತ್ತು.
ಆದರೆ ಇತ್ತೀಚೆಗೆ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಹಿನ್ನಲೆಯಲ್ಲಿ ಅದನ್ನು ತಿರುವನಂತಪುರ ಆನೆ ಬಿಡಾರದಲ್ಲಿ ಇಡಲಾಗಿತ್ತು. ಆದರೆ ದೇಗುಲಗಳ ಪ್ರತಿ ಉತ್ಸವಗಳಲ್ಲೂ ಇದು ಪಾಲ್ಗೊಳ್ಳುತ್ತಿತ್ತು. ಈ ಆನೆಯನ್ನು ಈ ಹಿಂದೆ ಟ್ರಾವಂಕೂರು ರಾಜಮನೆತನ ದೇವಸ್ಥಾನಕ್ಕೆ ಉಡುಗೊರೆಯನ್ನಾಗಿ ನೀಡಿದ್ದರು ಎನ್ನಲಾಗಿದೆ.