ಮಧುಮೇಹ,ಬಿಪಿ ಸೇರಿದಂತೆ 39 ಅಗತ್ಯ ಔಷಧಿಗಳ ಬೆಲೆ ಇಳಿಕೆ, ಗ್ರಾಹಕರಿಗೆ ಕೊಂಚ ರಿಲೀಫ್

ನವದೆಹಲಿ: ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ವಿವಿಧ ದೀರ್ಘಕಾಲೀನ ಕಾಯಿಲೆಗಳ ಚಿಕಿತ್ಸೆಗೆ ಬಳಸುವ 39 ಅಗತ್ಯ ಔಷಧಿಗಳ ಚಿಲ್ಲರೆ ಬೆಲೆಗೆ ಗರಿಷ್ಠ ಮಿತಿಯನ್ನು ನಿಗದಿಪಡಿಸಿ ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರ (NPPA) ಆದೇಶ ಹೊರಡಿಸಿದೆ. ಈ ಕ್ರಮದಿಂದ ಅಗತ್ಯ ಔಷಧಿಗಳ ಬೆಲೆ ಕೆಲವು ಸಂದರ್ಭಗಳಲ್ಲಿ ಕಡಿಮೆಯಾಗುವ ಸಾಧ್ಯತೆ ಇದ್ದು, ಲಕ್ಷಾಂತರ ರೋಗಿಗಳಿಗೆ ಆರ್ಥಿಕ ನಿರಾಳತೆ ಸಿಗುವ ನಿರೀಕ್ಷೆಯಿದೆ. ಈ ನಿರ್ಧಾರವನ್ನು ಡ್ರಗ್ಸ್ (ಪ್ರೈಸ್ ಕಂಟ್ರೋಲ್) ಆದೇಶ–2013 (DPCO-2013) ಅಡಿಯಲ್ಲಿ ಜಾರಿಗೆ ತರಲಾಗಿದೆ. […]
ರೈಲಿನೊಳಗೆ ಬೆಡ್‌ರೂಮ್‌ನಂತೆ ಅಲಂಕಾರ ಮಾಡಿ ಹನಿಮೂನ್ ಆಚರಿಸಿ, ಪ್ರೇಮಸುಧೆಯಲ್ಲಿ ಮಿಂದ ನವದಂಪತಿ: ವಿಡಿಯೋ ವೈರಲ್ ಟಿಟಿಇ ಅಮಾನತು!

ಮುಂಬೈ: ಹೊಸದಾಗಿ ಮದುವೆಯಾದ ದಂಪತಿಯೊಬ್ಬರು ತಮ್ಮ ಮೊದಲ ರೈಲು ಪ್ರಯಾಣವನ್ನು ಜೀವಿತಾವಧಿಯ ನೆನಪಾಗಿಸಲು ರೈಲಿನ ಕೂಪೆಯನ್ನೇ ಹನಿಮೂನ್ ಬೆಡ್‌ರೂಮ್‌ನಂತೆ ಅಲಂಕರಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಆದರೆ ಈ ಅಲಂಕಾರದ ಹಿಂದೆ ಭದ್ರತಾ ನಿಯಮ ಉಲ್ಲಂಘನೆಯ ಆರೋಪ ಕೇಳಿಬಂದಿದ್ದು, ಪ್ರಕರಣದಲ್ಲಿ ಕರ್ತವ್ಯದಲ್ಲಿದ್ದ ಟಿಟಿಇ (Travelling Ticket Examiner) ಅವರನ್ನು ರೈಲ್ವೆ ಇಲಾಖೆ ಅಮಾನತುಗೊಳಿಸಿದೆ. ಜುಲೈ 6ರಂದು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಿಂದ ಬಲ್ಲಾರ್ಷಾಗೆ ಸಂಚರಿಸುತ್ತಿದ್ದ ನಂದಿಗ್ರಾಮ್ ಎಕ್ಸ್‌ಪ್ರೆಸ್ ರೈಲು ಜಲ್ನಾ ನಿಲ್ದಾಣಕ್ಕೆ ತಲುಪಿದ […]
ಭಾರೀ ಮಳೆಗೆ ನದಿಯಲ್ಲಿ ತೇಲಿ ಬಂದ 3,000 ಎಲ್ ಪಿ ಜಿ ಸಿಲಿಂಡರ್‌ಗಳು: ಮುಂಬೈಯಲ್ಲಿ ಮುಂದುವರಿದ ಪ್ರವಾಹ

ಮುಂಬೈ: ದೇಶದಾದ್ಯಂತ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಹಲವು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಸುಮಾರು 3,000ಕ್ಕೂ ಹೆಚ್ಚು ಎಲ್ಪಿಜಿ (LPG) ಸಿಲಿಂಡರ್‌ಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ರಾಯಗಢ ಜಿಲ್ಲೆಯ ಪನ್ವೇಲ್ ತಾಲೂಕಿನ ಚವಾಣೆ ಗ್ರಾಮದಲ್ಲಿರುವ ಎಚ್‌ಪಿಸಿಎಲ್‌ನ ಪಾತಾಳಗಂಗಾ ಎಲ್ಪಿಜಿ ಬಾಟ್ಲಿಂಗ್ ಘಟಕಕ್ಕೆ ಪ್ರವಾಹದ ನೀರು ನುಗ್ಗಿದ ಪರಿಣಾಮ, ಸಾವಿರಾರು ಸಿಲಿಂಡರ್‌ಗಳು ಪಾತಾಳಗಂಗಾ ನದಿಯಲ್ಲಿ ತೇಲಿ ಹೋಗಿವೆ. ನದಿಯಲ್ಲಿ ಸಿಲಿಂಡರ್‌ಗಳು ತೇಲುತ್ತಿರುವ […]
ಅಮೆರಿಕ ದಾಳಿಯ ಬೆನ್ನಲ್ಲೇ ಬಹ್ರೇನ್, ಕುವೈಟ್ ಮೇಲೆ ಇರಾನ್ ಪ್ರತಿದಾಳಿ: ಮೊಳಗಿದ ಸೈರನ್

ದುಬೈ: ಅಮೆರಿಕವು ಇರಾನ್ ಮೇಲೆ ಭಾರೀ ವೈಮಾನಿಕ ದಾಳಿ ನಡೆಸಿದ ಬೆನ್ನಲ್ಲೇ ಇರಾನ್ ಬುಧವಾರ(ಜು. 8) ಬಹ್ರನ್ ಹಾಗೂ ಕುವೈಟ್ ಅನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿರುವುದಾಗಿ ಘೋಷಿಸಿದೆ.ದಾಳಿಯ ಹಿನ್ನೆಲೆಯಲ್ಲಿ ಬಹೇನ್‌ನಲ್ಲಿ ಎರಡನೇ ಬಾರಿಗೆ ಕ್ಷಿಪಣಿ ದಾಳಿ ಎಚ್ಚರಿಕೆ ಸೈರನ್ ಮೊಳಗಿಸಲಾಗಿದ್ದು, ಸಾರ್ವಜನಿಕರು ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸರಕಾರ ಸೂಚನೆ ನೀಡಿದೆ.ಬಹ್ರನ್ ಹಾಗೂ ಕುವೈಟ್ ಮೇಲೆ ದಾಳಿ ನಡೆದಿರುವುದಾಗಿ ಇರಾನ್ ಹೇಳಿಕೊಂಡಿದ್ದರೂ, ಎರಡೂ ದೇಶಗಳಲ್ಲಿ ಸಂಭವಿಸಿದ ಹಾನಿ ಅಥವಾ ಗಾಯಾಳುಗಳ ಕುರಿತು ತತ್ ಕ್ಷಣದ ಅಧಿಕೃತ […]
ಕಸದ ರಾಶಿಯೇ ಇಂಧನ! ದೆಹಲಿ ಬಸ್ ಗಳು ಇನ್ನು ಹೈಡ್ರೋಜನ್ನಲ್ಲಿ ಸಂಚಾರ; ನಿತಿನ್ ಗಡ್ಕರಿ ಘೋಷಣೆ

ನವದೆಹಲಿ: ಭವಿಷ್ಯದಲ್ಲಿ ದೆಹಲಿಯ (Delhi) ಸಾರ್ವಜನಿಕ ಸಾರಿಗೆ ಬಸ್ಗಳು ಘನತ್ಯಾಜ್ಯದಿಂದ (Garbage) ಉತ್ಪಾದಿಸಿದ ಹೈಡ್ರೋಜನ್(Hydrogen) ಇಂಧನ ಬಳಸಿ ಚಲಿಸಲಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ(Nitin Gadkari) ಪ್ರಕಟಿಸಿದ್ದಾರೆ. ದೆಹಲಿಯಲ್ಲಿ ಬಿಜೆಪಿ ಆಯೋಜಿಸಿದ್ದ ಯುವ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ನಗರಗಳಲ್ಲಿ ಸಂಗ್ರಹವಾಗುವ ಮುನ್ಸಿಪಲ್ ಘನತ್ಯಾಜ್ಯವನ್ನು (Municipal Solid Waste) ಬಳಸಿಕೊಂಡು ಹಸಿರು ಹೈಡ್ರೋಜನ್ (Green Hydrogen) ಇಂಧನವನ್ನು ಉತ್ಪಾದಿಸುವ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ. ಇದರಿಂದ ಕಸದ ವಿಲೇವಾರಿ ಸಮಸ್ಯೆಯೂ ಬಗೆಹರಿಯಲಿದ್ದು, ಇಂಧನವೂ ಸಿಗಲಿದೆ. […]